ಈ ವರ್ಷದಿಂದ ನಾವು ಓದುವುದು NEPನಾ ಅಥವಾ SEPನಾ? ಡಿಗ್ರಿ ವಿದ್ಯಾರ್ಥಿಗಳ ಗೊಂದಲಕ್ಕೆ ಇಲ್ಲಿದೆ ಪರಿಹಾರ

varthajala
0

 ಬೆಂಗಳೂರು, ಜೂನ್​ 08: ಪಿಯುಸಿ ಫಲಿತಾಂಶ (PUC Result) ಪ್ರಕಟವಾಗಿದೆ. ವಿದ್ಯಾರ್ಥಿಗಳು ಪದವಿ ವ್ಯಾಸಂಗಕ್ಕೆ ದಾಖಲಾತಿ ಪಡೆಯುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳಲ್ಲಿ ಅದೊಂದು ವಿಚಾರಕ್ಕೆ ತಲೆ ಕೆಡೆಸಿಕೊಂಡಿದ್ದಾರೆ. ನಾವು ಓದಬೇಕಾಗಿರುವುದು ರಾಷ್ಟ್ರೀಯ ಶಿಕ್ಷಣ ನೀತಿ (NEP)ನಾ ಅಥವಾ ರಾಜ್ಯ ಶಿಕ್ಷಣ ನೀತಿ (SEP)ನಾ? ನಮ್ಮ ಪದವಿ ವ್ಯಾಸಂಗ 3 ವರ್ಷನಾ ಅಥವಾ 4 ವರ್ಷನಾ? ಅಂತ ವಿದ್ಯಾರ್ಥಿಗಳಲ್ಲಿ ಪ್ರಶ್ನೆಗಳು ಉದ್ಭವಿಸುತ್ತಿವೆ. ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ರಾಷ್ಟ್ರೀಯ ಶಿಕ್ಷಣ ನೀತಿ-2020 (NEP) ಪ್ರಧಾನಿ ನರೇಂದ್ರ ಮೋದಿಯವರ ಮಹತ್ವದ ನೀತಿಗಳಲ್ಲಿ ಒಂದಾಗಿದೆ. ಇದು ಜಾರಿಯಾದಾಗಿನಿಂದ ವಾದ-ವಿವಾದಗಳು ನಡೆಯುತ್ತಲೇ ಇವೆ. ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಎನ್‌ಇಪಿ ರದ್ದು ಮಾಡಿ ಎಸ್​ಇಪಿ ರಚನೆಗೆ ಸುಖದೇವ್ ಥೋರಟ್ ನೇತೃತ್ವದಲ್ಲಿ 15 ಜನರ ತಜ್ಞರ ಸಮಿತಿಯನ್ನು ರಚನೆ ಮಾಡಿದೆ. ಎಸ್​ಇಪಿಗೆ ಬೇಕಾದ ಎಲ್ಲ ತಯಾರಿಗಳು ನಡೆಯುತ್ತಿವೆ. ವಿಶ್ವವಿದ್ಯಾಲಯಗಳಲ್ಲಿ ನೂತನ ಪಠ್ಯಕ್ರಮ ಚೌಕಟ್ಟಿಗೆ ಪೂರಕವಾದ ಪರಿಷ್ಕರಣೆ ಶುರುವಾಗಿದೆ.


NEPಗೂ ಮತ್ತು SEPಗೂ ಅಜಗಜಾಂತರ ವ್ಯತ್ಯಾಸವಿದೆ. ಈ ಹಿಂದೆ ಇದ್ದ ಎಸ್​ಇಪಿ (ರಾಜ್ಯ ಶಿಕ್ಷಣ ನೀತಿ) ಪ್ರಕಾರ, ಮೂರು ವರ್ಷಗಳು ಪದವಿ ಹಾಗೂ ಎರಡು ವರ್ಷ ಸ್ನಾತಕೋತ್ತರ ಪದವಿ ಓದಬೇಕಿತ್ತು. ಆದರೆ ಎನ್​ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಜಾರಿಯಾದ ಮೇಲೆ ನಾಲ್ಕು ವರ್ಷ ಪದವಿ ಹಾಗೂ ಒಂದು ವರ್ಷ ಸ್ನಾತಕೋತ್ತರ ಪದವಿ ಓದಬೇಕು.

ಎನ್​ಇಪಿ ಪ್ರಕಾರ ಮೊದಲ ವರ್ಷಕ್ಕೆ ಗ್ರ್ಯಾಡ್ಜುವೇಟ್ ಸರ್ಟಿಫಿಕೆಟ್, ಎರಡನೇ ವರ್ಷಕ್ಕೆ ಗ್ರ್ಯಾಡ್ಜುವೇಟ್ ಡಿಪ್ಲಮೊ ಹಾಗೂ ಮೂರನೇ ವರ್ಷಕ್ಕೆ ಗ್ರ್ಯಾಡ್ಜುವೇಟ್ ಡಿಗ್ರಿ ಹೀಗೆ ಪ್ರತಿ ವರ್ಷಕ್ಕೂ ಪ್ರತ್ಯೇಕ ಸರ್ಟಿಫಿಕೇಟ್ ಸಿಗುತ್ತದೆ. ನೀವು ಯಾವುದೇ ವರ್ಷದಲ್ಲಿ ಶಿಕ್ಷಣ ನಿಲ್ಲಿಸಿದರೂ ಆ ವರ್ಷದ ಸರ್ಟಿಫೀಕೇಟ್ ಸಿಗುತ್ತದೆ.ಆದರೆ ಇದೀಗ ರಾಜ್ಯ ಸರ್ಕಾರ ಎಸ್​ಇಪಿ ಜಾರಿಗೆ ತರುತ್ತಿದೆ. ಈಗಾಗಲೆ ಎಲ್ಲ ವಿಶ್ವ ವಿದ್ಯಾಲಯಗಳಲ್ಲಿ ಎಸ್​ಇಪಿ ತಕ್ಕಹಾಗೆ ಪರಿಷ್ಕರಿತ ಪಠ್ಯ ಪುಸ್ತಕ ತಯಾರಾಗುತ್ತಿವೆ. ಇದೇ ವರ್ಷದಿಂದ ಎಸ್​ಇಪಿ ಜಾರಿಗೆ ಬರಲಿದೆ. ಪದವಿ ವ್ಯಾಸಂಗಕ್ಕೆ ಈ ವರ್ಷ ದಾಖಲಾತಿ ಪಡೆಯುವವರು ಎಸ್​ಇಪಿ ಓದಲಿದ್ದಾರೆ.

ಈ ವರ್ಷದಿಂದಲೇ ಎಸ್​ಇಪಿ ಜಾರಿಯಾಗುವ ಹಿನ್ನೆಲೆಯಲ್ಲಿ ಹಲವು ಮಹತ್ವದ ಸಭೆಗಳನ್ನು ನಡೆಸಲಾಗಿದೆ. ಜ್ಞಾನಭಾರತಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಸ್​ಇಪಿ ಜಾರಿ ಹಾಗೂ ಪಠ್ಯಕ್ರಮ ಪರಿಷ್ಕರಣ ಮಹತ್ವದ ಪ್ರಾಂತೀಯ ಮಟ್ಟದ ಕಾರ್ಯಗಾರ ನಡೆಸಲಾಯಿತು. ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯದ ಕುಲಪತಿಗಳು, ಶಿಕ್ಷಣ ತಜ್ಞರು ಭಾಷ ತಜ್ಞರು ಹಾಗು ರಾಜ್ಯ ಪಠ್ಯಕ್ರಮ ರಚಾನ ಸಮಿತಿ ಸದಸ್ಯರು ಭಾಗಿಯಾಗಿದ್ದರು.

ಒಟ್ಟಿನಲ್ಲಿ ಎನ್‌‌ಇಪಿ ಈ ವರ್ಷದಿಂದಲೇ ರಾಜ್ಯದಲ್ಲಿ ಜಾರಿಯಾಗುವ ಹಿನ್ನೆಲೆಯಲ್ಲಿ ರಾಜ್ಯ ಪಠ್ಯಕ್ರಮ ಚೌಕಟ್ಟಿಗೆ ಪೂರಕವಾದ ಪಠ್ಯಕ್ರಮ ಸಿದ್ಧವಾಗುತ್ತಿದೆ. ಅದೆನೇ ಇರಲಿ ಈ ಎಸ್ಇಪಿಯಿಂದ ಆದರೂ ರಾಜ್ಯದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಬೇಕಿದೆ.


Post a Comment

0Comments

Post a Comment (0)