ಬೆಂಗಳೂರು: ಇಂದು ಜೆಪಿ ನಗರದಲ್ಲಿ ಪುಷ್ಪಮ್ ಆಯುರ್ವೇದ ವೆಲ್‌ನೆಸ್ ಸೆಂಟರ್ ಅನ್ನು ಶ್ರೀ ವಿಶ್ವ ಸಂತೋಷ ಭಾರತಿ ಸ್ವಾಮೀಜಿಗಳು ಅಯುರಾಶ್ರಮ ಬೆಂಗಳೂರು ಹಾಗೂ ಮಾಜಿ ಕಾರ್ಪೊರೇಟರ್ ಶ್ರೀಮತಿ ನಾಗರತ್ನ ರಾಮಮೂರ್ತಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ರಾಜ್ಯ ಯೋಜನೆ ಮತ್ತು ಅಭಿವೃದ್ಧಿ ಅಧಿಕಾರಿ ಡಾ. ಮೊಹಮ್ಮದ್ ರಫಿ ಹಕೀಂ, ಬೆಂಗಳೂರು ಡಿಎಒ ಡಾ. ಶಹಾಬುದ್ದಿನ್, ಪ್ರಸಿದ್ಧ ಆಯುರ್ವೇದ ವೈದ್ಯರಾದ ಡಾ. ಬಲ್ಲಾಳ ಕೆ.ಸಿ., ಡಾ. ಗಿರಿಧರ್ ಕಜೆ ಮತ್ತು ಇತರ ವೈದ್ಯರು ಹಾಜರಿದ್ದರು.
ಸ್ವಾಮಿ ಪುಷ್ಪಮ್ ಆಯುರ್ವೇದ ವೆಲ್‌ನೆಸ್ ಪ್ರೈವೇಟ್ ಲಿಮಿಟೆಡ್‌ನ ಘಟಕ ಇದಾಗಿದ್ದು, ಜೆಪಿ ನಗರದ 9ನೇ ಕ್ರಾಸ್ ರಸ್ತೆಯ ತಿರುಮಲಗಿರಿ ದೇವಸ್ಥಾನದ ಮುಂಭಾಗದಲ್ಲಿ ಆರಂಭಿಸಲಾಗಿದೆ. ಡಾ. ರಾಜಶೇಖರ ಭೂಸನುರಮಠ ಮತ್ತು ಡಾ. ಮಹತಿ ಸಾಹುಕರ್ ಅವರು ಅನೇಕ ಕಾಯಿಲೆಗಳನ್ನು ಭಾರತೀಯ ಪಾರಂಪರಿಕ ವಿಧಾನಗಳು ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಚಿಕಿತ್ಸೆ ನೀಡಲು ಈ ಮಲ್ಟಿ ಸ್ಪೆಷಾಲಿಟಿ ಆಯುರ್ವೇದ ಆಸ್ಪತ್ರೆಯನ್ನು ಆರಂಭಿಸಿದ್ದಾರೆ.ಈ ಆಯುರ್ವೇದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕರ್ನಾಟಕದಲ್ಲಿ ವಿಶೇಷವಾದ ಆಸ್ಪತ್ರೆಯಿದಾಗಿದ್ದು, ತ್ವಚೆ ಆರೈಕೆ, ಗಾಯದ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಸ್ತ್ರೀರೋಗ, ಡಿಟಾಕ್ಸ್, ಮಾನಸಿಕ, ವಿಶೇಷ ಚಿಕಿತ್ಸೆಗಳು ಮತ್ತು ಸಾಮಾನ್ಯ ಚಿಕಿತ್ಸೆಗಳನ್ನು ನಡೆಸುವ ವಿವಿಧ ವಿಭಾಗಗಳನ್ನು ಹೊಂದಿದೆ. ಜನರು ಆರೋಗ್ಯದ ಉತ್ತಮ ಲಾಭಗಳನ್ನು ಪಡೆಯಲು ಈ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು ಎಂದು ಸಂಸ್ಥೆಯ ಮುಖ್ಯಸ್ಥ ಡಾ ಭೂಸನೂರಮಠ ಹೇಳಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 6364409651, 6364466240