ನಾಡಪ್ರಭು ಕೆಂಪೇಗೌಡರಂತೆ ಸಮಾಜಮುಖಿ ಕೆಲಸ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು

varthajala
0

 ಬೆಂಗಳೂರು, ಜೂನ್ 27 (ಕರ್ನಾಟಕ ವಾರ್ತೆ): ನಾಡಪ್ರಭು ಕೆಂಪೇಗೌಡರು ಸಮಾಜಮುಖಿಯಾಗಿ ಕೆಲಸ ಮಾಡಿದ್ದು, ಅದೇ ರೀತಿ ನಾವೆಲ್ಲರೂ ವಿಶ್ವಮಾನವ ದಾರಿಯಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ನಾಡಪ್ರಭು ಕೇಂಪೇಗೌಡ ಪಾರಂಪರಿಕ ತಾಣದ ಅಭಿವೃಧ್ಧಿ ಪ್ರಾಧಿಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಅವರ 515ನೇ ಜಯಂತೋತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ, ರೈತ ಸಮುದಾಯದ ಒಕ್ಕಲಿಕ ಜನಾಂಗದಲ್ಲಿ ಜನಿಸಿದ ನಾಡಪ್ರಭು ಕೆಂಪೇಗೌಡ ಅವರು ಈ ನಾಡಿನ ದೊರೆಯಾಗಿ ಒಂದು ಮಾದರಿ ಆಡಳಿತವನ್ನು ಕೊಟ್ಟಿದ್ದಾರೆ. 

ಅವರ ಆಡಳಿತದ ಅವಧಿಯಲ್ಲಿ   ಜಾತಿ-ಧರ್ಮ ವಿಂಗಡಣೆ ಮಾಡುವ ಪ್ರಯತ್ನ ಮಾಡಲಿಲ್ಲ.  ಎಲ್ಲಾ ಜನಾಂಗದವರನ್ನು ಅಭಿವೃಧ್ಧಿಪಡಿಸುವ ಪ್ರಯತ್ನ ಮಾಡಿದರು. ನಾವು ಅವರ ಇತಿಹಾಸ ನೋಡಿದರೆ  ಅವರ ಆಡಳಿತ ಕಾಲದ ಅವಧಿಯಲ್ಲಿ ಏನೆಲ್ಲಾ ರೂಪಿಸಿದÀರು ಎಂಬುದು ಗೊತ್ತಾಗುತ್ತದೆ. ಅವರು ಕೃಷ್ಣದೇವರಾಯನ ಕಾಲದಲ್ಲಿ ಬೆಂಗಳೂರು ಪ್ರಾತ್ಯಂದ ಆಡಳಿತರಾಗಿದ್ದರು.


ಅಂಬೇಡ್ಕರ್ ಅವರು ಹೇಳಿರುವಂತೆ ಯಾರಿಗೆ ಇತಿಹಾಸದ ಅರಿವಿಲ್ಲವೊ ಅವರು ಭವಿಷ್ಯ ರೂಪಿಸಲು ಸಾಧ್ಯವಿಲ್ಲ.  ಅದಕ್ಕೋಸ್ಕರ ನಾವೆಲ್ಲರೂ ಇತಿಹಾಸವನ್ನು  ಅರ್ಥ ಮಾಡಿಕೊಂಡು ತಪ್ಪುಗಳನ್ನು ತಿದ್ದಿಕೊಂಡು ನಾವೆಲ್ಲೂರು ಮನುಷ್ಯರಾಗಿ ಬಾಳುವ ಪ್ರಯತ್ನ ಮಾಡಬೇಕು. ಇವತ್ತೇನಾದರೂ  ಬೆಂಗಳೂರು ಈ ಮಟ್ಟಕ್ಕೆ ಬೆಳೆದಿದೆ ಎಂದರೆ ಕೆಂಪೇಗೌಡರೆ ಕಾರಣ ಎಂಬುದನ್ನು ನಾವು ಮರೆಯಬಾರದು.

ಅವರು ಅಂದು ದೂರದೃಷ್ಟಿ ಇಟ್ಟುಕೊಂಡು ಎಂvಹÀ ಬೆಂಗಳೂರು ನಿರ್ಮಾಣವಾಬೇಕು? ಇಲ್ಲಿಯ ಜನ ಯಾವ ರೀತಿ ಬದುಕು ಬೆಳೆಯಬೇಕು? ಹೇಗೆ ಅವರ ಅಭಿವೃದ್ಧಿಯಾಗಬೇಕು. ಆರ್ಥಿಕ -ಸಾಮಾಜಿಕವಾಗಿ ಬೆಳವಣಿಗೆಯಾಬೇಕೆಂದು ಅವರು ಇಡೀ ಆಡಳಿತ ಪ್ರಾಂತ್ಯದಲ್ಲಿ ಎಲ್ಲರಿಗೂ ಆರ್ಥಿಕ, ಸಾಮಾಜಿಕ ಶಕ್ತಿ ತುಂಬುವ ಕೆಲಸ  ಮಾಡಿದ್ದಾರೆ. ನೂರಾರು ಕೆರೆ ಕಟ್ಟಿದ್ದಾರೆ. ಅನೇಕ ದೇವಾಲಯಗಳನ್ನು ಕಟ್ಟಿದ್ದಾರೆ. ಆರ್ಥಿಕವಾಗಿ ಬೆಂಗಳೂರು ಬೆಳೆಯಬೇಕೆಂದು ಅನೇಕ ಪೇಟೆಗಳನ್ನು ನಿರ್ಮಾಣ ಮಾಡಿದ್ದಾರೆ. ಎಲ್ಲಾ ವೃತ್ತಿ ಮಾಡುವ ಜನರು ಅವರ ವೃತ್ತಿಯ ಮೂಲಕ ಬೆಳವಣಿಗೆಯಾಗಲು ಅನೇಕ ಪೇಟೆಗಳನ್ನು ನಿರ್ಮಾಣ ಮಾಡಿದರು. ದೂರದೃಷ್ಟಿ ಇರುವ ಅವರನ್ನು ನೆನಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

     ಕೆಂಪೇಗೌಡರು ಬದುಕಿದ್ದ ಬೆಂಗಳೂರಿನ ಎಲ್ಲಾ ಭಾಗಗಳನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಕೆಂಪೇಗೌಡರ ಹೆಸರಿನಲ್ಲಿ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದೆ. ಇಂದು ಬ್ರಾಂಡ್ ಬೆಂಗಳೂರು ಎಂದು ವಿಶ್ವವಿಖ್ಯಾತಿಗಳಿಸಲು ಕೆಂಪೇಗೌಡರು ಮಾಡಿದ ಪ್ರಯತ್ನ ಎಂಬುದನ್ನು ನಾವು ಮರೆಯಬಾರದು ಎಂದರು.

ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದ ಬೆಂಗಳೂರು ಸೈನ್ಸ್ ಪೋರಂ, ಸುಮಂಗಲಿ ಸೇವಾಶ್ರಮ ಮತ್ತು ಗಾಂಧೀಭವನ ಸಂಸ್ಥೆಯ ಪ್ರತಿನಿಧಿಗಳಿಗೆ ತಲಾ 5 ಲಕ್ಷ ರೂ. ನಗದು, ಕೆಂಪೇಗೌಡರ ಪುತ್ಥಳಿ ಮತ್ತು ಪ್ರಶಸ್ತಿ ನೀಡಿ ಗೌರವಿಸಲಾಯಿತು.

     ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ, ನಾವು ಇಂದು ಆಚರಿಸುತ್ತಿರುವ ಕೆಂಪೇಗೌಡ ಜಯಂತಿಯಂದು, ಬೆಂಗಳೂರಿನ ಅಭಿವೃದ್ಧಿಗಾಗಿ ಹೊಸ ಆಯಾಮಗಳನ್ನು ಸೃಷ್ಟಿ ಮಾಡುವ ಯೋಜನೆಗಳನ್ನು ರೂಪಿಸುತ್ತಿದ್ದೇವೆ.  ಮಾಗಡಿ ರಸ್ತೆಯ ಸುಮನಹಳ್ಳಿಯಲ್ಲಿ ಒಂದು ಹೊಸ ಪ್ರಾಧಿಕಾರ ಕಚೇರಿಯನ್ನು ಕಟ್ಟಬೇಕು ಎಂದು ಈಗಾಗಲೆ 5 ಎಕರೆ ಜಮೀನನ್ನು ಮಂಜೂರು ಮಾಡಲಾಗಿದೆ.  ಮುಂದಿನ ವರ್ಷದೊಳಗೆ ಐತಿಹಾಸಕ ಚರಿತ್ರೆಯುಳ್ಳ ಕಟ್ಟಡವನ್ನು ಪ್ರಾರಂಭಿಸಲು ಈಗಾಗಗಲೇ ಯೋಜನೆ ರೂಪಿಸುತ್ತಿದ್ದೇವೆ ಹಾಗೂ ಆಹುತಿಯಲ್ಲಿ ಒಂದು ವಿಶೇಷವಾದಂತ ಅಧ್ಯಾಯ ಕ್ಷೇತ್ರ ಮತ್ತು ಒಂದು ಸ್ಮಾರಕ ನಿರ್ಮಿಸಲು 10 ಎಕರೆ ಜಮೀನು ಮಂಜೂರು ಮಾಡಿ ನಿರ್ಮಾಣಕ್ಕಾಗಿ ಸರ್ಕಾರದಿಂದ ಹಣ ಮಂಜೂರು ಮಾಡಲಾಗಿದೆ ಎಂದರು.

  ನಮ್ಮ ನಾಡಪ್ರಭು ಕೇಂಪೇಗೌಡರನ್ನು ಒಂದು ಜಾತಿಗೆ ಸೀಮಿತ ಮಾಡಬಾರದು. ಕೇಂಪೇಗೌಡರು ಒಂದೇ ಜಾತಿಗೆ ಸೀಮಿತವಾಗದೆ ಎಲ್ಲಾ ಜಾತಿ,ಧರ್ಮ, ಎಲ್ಲಾ ವರ್ಗಕ್ಕೂ ವಿಶ್ವಕ್ಕೆ  ಕೀರ್ತಿ ತರುವ ಬೆಂಗಳೂರನ್ನು ಕಟ್ಟಿ ಎಲ್ಲಾ ಜನರನ್ನು ಆಕರ್ಷಿಸುವ  ಶ್ರೇಷ್ಠ ನಾಯಕರಾಗಿದ್ದಾರೆ.  ಅವರನ್ನು ಸ್ಮರಿಸುವುದಕ್ಕಾಗಿ ಈ ವರ್ಷದಿಂದ   ಇಡೀ ರಾಜ್ಯದ ಉದ್ಗಗಲಕ್ಕೂ ಪ್ರತಿ ತಾಲ್ಲೂಕಿನ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಕೆಂಪೇಗೌಡರ ಕುರಿತು ಚರ್ಚಾಸ್ಪರ್ಧೆ ನಡೆಸಲು ಪ್ರತಿಯೊಂದು ತಾಲ್ಲೂಕಿಗೂ ತಲಾ ಒಂದು ಲಕ್ಷ ರೂ.  ಅನುದಾನ ಬಿಡುಗಡೆ ಮಾಡಲಾಗಿದೆ. ಅಲ್ಲದೆ ಪ್ರತಿ ತಾಲ್ಲೂಕಿನಲ್ಲಿ ಕೆಂಪೇಗೌಡ ಜಯಂತಿಯನ್ನು ಉತ್ತಮವಾಗಿ ಆಚರಿಸಲು ಒಂದು ಲಕ್ಷ ರೂ. ಹಣ ಮಂಜೂರು ಮಾಡಲು ಬಿ.ಬಿ.ಎಂಪಿ.ಗೆ ಸೂಚಿಸಲಾಗಿದೆ ಎಂದರು.

ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃಧ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರು ಪ್ರಾಸ್ತಾವಿಕ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸುತ್ತಿದ್ದೇವೆ.  ಬೆಂಗಳೂರು ನಿರ್ಮಾತೃ ಕೆಂಪೇಗೌಡರು 21ನೇ ಶತಮಾನದಲ್ಲಿ ಆಡಳಿತಗಾರ ಹೇಗಿರಬೇಕು ಎಂಬುದನ್ನು 500 ವರ್ಷಗಳ ಹಿಂದೆಯೆ ತಿಳಿಸಿಕೊಟ್ಟಿದ್ದಾರೆ.  ಆರ್ಥಿಕವಾಗಿ, ಸಾಮಾಜಿಕವಾಗಿ ಪ್ರಬಲವಾದ ನಾಡನ್ನು ಕಟ್ಟಿದ್ದಾರೆ.  21ನೇ ಶತಮಾನದಲ್ಲಿ ಆಡಳಿತಗಾರರು ಹೇಗಿರಬೇಕು ಎಂಬುದನ್ನು ಅವರಿಂದ ಕಲಿಯಬೇಕು. ಸಮ-ಸಮಾಜವನ್ನು ನಿರ್ಮಿಸಿ, ಆಡಳಿತಕ್ಕೆ ದಾರಿ ತೋರಿಸಿ ಕೊಟ್ಟಿದ್ದಾರೆ ಎಂದರು.

ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥÀ ಮಹಾಸ್ವಾಮೀಜಿಯವರು, ಶ್ರೀಕ್ಷೇತ್ರ ಪಟ್ಟನಾಯಕನಹಳ್ಳಿ ಶ್ರೀ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರಿ ಡಾ.ನಂಜಾವಧೂತ ಮಹಾಸ್ವಾಮೀಜಿಯವರು, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರು, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರಾದ ಶಿವರಾಜ ಎಸ್. ತಂಗಡಗಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಕೆ.ಹೆಚ್. ಮುನಿಯಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳದ ಕೆ. ಗೋವಿಂದರಾಜು, ಶಿವಾಜಿನಗರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ರಿಜ್ವಾನ್ ಅರ್ಷದ್ ಸೇರಿದಂತೆ ಶಾಸಕರು ಹಾಗೂ ಗಣ್ಯರುಗಳು ಉಪಸ್ಥಿತರಿದ್ದರು.  

Post a Comment

0Comments

Post a Comment (0)