ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ರ‍್ಯಾಂಕಿಂಗ್(QS World University Ranking)ನಲ್ಲಿ ಕಳೆದ ದಶಕದಲ್ಲಿ ಭಾರತೀಯ ವಿಶ್ವವಿದ್ಯಾಲಯಗಳು ಗಮನಾರ್ಹ ಸಾಧನೆಗಳನ್ನು ಮಾಡಿದ್ದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಭಾರತದ ವಿಶ್ವವಿದ್ಯಾನಿಲಯಗಳ ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕದಲ್ಲಿ ಸುಧಾರಣೆಯಾಗಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಂಸ್ಥೆಗಳನ್ನು ಅವರ ಸಮರ್ಪಣೆಗಾಗಿ ಶ್ಲಾಘಿಸಿದರು ಮತ್ತು ಸಂಶೋಧನೆ ಮತ್ತು ಆವಿಷ್ಕಾರವನ್ನು ಮತ್ತಷ್ಟು ಹೆಚ್ಚಿಸುವ ಯೋಜನೆಗಳಿಗೆ ಮತ್ತಷ್ಟು ಒತ್ತು ನೀಡುತ್ತೇವೆ ಎಂದು ಹೇಳಿದರು. ಭಾರತೀಯ ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ, 37 ಸಂಸ್ಥೆಗಳು ಪ್ರತಿ ಅಧ್ಯಾಪಕರಿಗೆ ಉಲ್ಲೇಖಗಳಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ತೋರಿಸಿವೆ.
ಇತ್ತೀಚೆಗೆ ಬಿಡುಗಡೆ ಆದ 2024ರ ಸಾಲಿನ ಕ್ಯುಎಸ್ ವರ್ಲ್ಡ್ ಯೂನಿವರ್ಸಿಟಿ ರ‍್ಯಾಂಕಿಂಗ್ (QS World University Ranking 2024) ಪಟ್ಟಿಯಲ್ಲಿ ಭಾರತದ ಶಿಕ್ಷಣ ಸಂಸ್ಥೆಗಳ ಪ್ರಭಾವ ಹೆಚ್ಚಿದೆ. ಈ ಪಟ್ಟಿಯಲ್ಲಿ ಭಾರತದ 69 ಭಾರತೀಯ ವಿಶ್ವವಿದ್ಯಾಲಯಗಳು (Indian universities) ಸ್ಥಾನ ಪಡೆದಿವೆ. ಚೀನಾದ 101 ಯೂನಿವರ್ಸಿಟಿಗಳು ಈ ಪಟ್ಟಿಯಲ್ಲಿವೆ.
ಏಷ್ಯಾದಲ್ಲಿ ಚೀನಾ ಬಿಟ್ಟರೆ ಭಾರತದ ವಿವಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕ್ಯುಸ್ ವರ್ಲ್ಡ್ ಯೂನಿವರ್ಸಿಟಿಗಳ ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು. ಬೆಂಗಳೂರಿನ ಐಐಎಂ ಸೇರಿದಂತೆ ಮೂರು ಐಐಎಂಗಳು ಟಾಪ್ 50 ಪಟ್ಟಿಯಲ್ಲಿವೆ. ಟಾಪ್ 100ನಲ್ಲಿ 18 ಭಾರತೀಯ ವಿಶ್ವವಿದ್ಯಾಲಯಗಳು ಸ್ಥಾನ ಪಡೆದಿವೆ.
ಜವಾಹರಲಾಲ್ ಯೂನಿವರ್ಸಿಟಿ (JNU) ಡೆವಲಪ್ಮೆಂಟ್ ಸ್ಟಡೀಸ್ ಕೋರ್ಸ್ಗಳಿಗೆ ಜಾಗತಿಕವಾಗಿ 20ನೆ ಸ್ಥಾನ ಪಡೆದಿರುವುದು ವಿಶೇಷ. ಇನ್ನು, ಅಹ್ಮದಾಬಾದ್ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸಂಸ್ಥೆ ಬಿಸಿನೆಸ್ ಅಂಡ್ ಮ್ಯಾನೇಜ್ಮೆಂಟ್ ಸ್ಟಡೀಸ್ ಕೋರ್ಸ್ನಲ್ಲಿ 22ನೇ ರ‍್ಯಾಂಕಿಂಗ್ ಪಡೆದಿದೆ.