ದೇಶದ ಪ್ರಗತಿಯ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವಿರಬೇಕು – ಮಾಜಿ ರಾಯಭಾರಿ ಡಾ. ದೀಪಕ್ ವೋಹ್ರಾ

varthajala
0

 ಬೆಂಗಳೂರು; ಬರುವ 2047ರ ವೇಳೆಗೆ ಭಾರತ ವಿಶ್ವಗುರು ಸ್ಥಾನದಲ್ಲಿ ನಿಲ್ಲಲಿದ್ದು, ಭಾರತೀಯರಾದ ನಾವು ಹೆಮ್ಮೆಯಿಂದ ಭಾರತೀಯತೆಯನ್ನು ಸಾರುವ ದಿನ ಬಂದಿದೆ ಎಂದು ಮಾಜಿ ರಾಯಭಾರಿ ಡಾ.ದೀಪಕ್ ವೋಹ್ರಾ ಹೇಳಿದ್ದಾರೆ.  ನಗರದ ಆಚಾರ್ಯ ಪಾಠಶಾಲಾ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ “ವಿಕಸಿತ ಭಾರತ -2047”  ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಸಮುದಾಯ ಭಾರತದ ಇತಿಹಾಸ, ಪರಂಪರೆ, ಸಂಸ್ಕೃತಿ, ಸನಾತನ ಧರ್ಮದ ಬಗ್ಗೆ ತಿಳಿವಳಿಕೆ ಹೊಂದಿರಬೇಕು. ಪ್ರಸ್ತುತ ಭಾರತ ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ವೈದ್ಯಕೀಯ, ಸೇನೆ ಒಳಗೊಂಡಂತೆ  ಎಲ್ಲ ಕ್ಷೇತ್ರಗಳಲ್ಲಿ ಉತ್ಕೃಷ್ಟ ಸ್ಥಾನದಲ್ಲಿದೆ. ದೇಶದ ಪ್ರಗತಿಯ ಬಗ್ಗೆ ಪ್ರತಿಯೊಬ್ಬರೂ ಅರಿವು ಹೊಂದಿರಬೇಕು. ಪ್ರಗತಿಯ ಚಿತ್ರಣದಿಂದಾಗಿ ಭಾರತ ಕುರಿತಾದ ಪರಿಕಲ್ಪನೆ ಬದಲಾಗಿದೆ ಎಂದರು. 



ಏಪಿಎಸ್ ಸಂಸ್ಥೆಯ ಅಧ್ಯಕ್ಷ ಸಿ. ಎ.ಡಾ.ವಿಷ್ಣು ಭರತ್ ಅಲ್ಲಪಲ್ಲಿ, ಪ್ರಧಾನಮಂತ್ರಿಯವರ ಸಲಹೆಗಾರರಾದ ಆರ್ ಟಿ.ಎನ್ ಉದಯಕುಮಾರ್,  ಭಾಸ್ಕರ್, ಪ್ರೊ.ಎ ಪ್ರಕಾಶ್ ಪ್ರಧಾನ ಕಾರ್ಯದರ್ಶಿ ಮತ್ತು ಎ ಎಸ್ ಶ್ರೀಕಾಂತ್ ಮತ್ತಿತರರು ಉಪಸ್ಥಿತರಿದ್ದರು.


Post a Comment

0Comments

Post a Comment (0)