ಬೆಂಗಳೂರಿನ ವಿದ್ಯಾರ್ಥಿನಿ ಭಾವನಾ ರಾಜ್ಯಕ್ಕೆ ಪ್ರಥಮ ​

varthajala
0

 

ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ 2023-24ನೇ ಸಾಲಿನ ಎಸ್​ಎಸ್​ಎಲ್​ಸಿ (SSLC) ಮರು ಮೌಲ್ಯಮಾಪನ ಫಲಿತಾಂಶ (Revaluation Result) ಪ್ರಕಟಸಿದ್ದು, ಪರೀಕ್ಷೆಯಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಟಿ.ದಾಸರಹಳ್ಳಿ ಬಿಎನ್​ಆರ್​​ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಭಾವನಾ ಮೊದಲನೇ ರ‍್ಯಾಂಕ್​ ಪಡೆದುಕೊಂಡಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಈ ಹಿಂದೆ ಪ್ರಕಟಿಸಿದ್ದ ಫಲಿತಾಂಶದಲ್ಲಿ ಭಾವನಾ 620 ಅಂಕ ಪಡೆದಿದ್ದರು. ಆದರೆ ಮರುಮೌಲ್ಯ ಮಾಪನದ ಬಳಿಕ 625-625 ಅಂಕ‌ ಪಡೆದುಕೊಂಡಿದ್ದಾರೆ.

  ರಿಂದ 624 ಅಂಕ ಪಡೆದುಕೊಂಡಿದ್ದಾರೆ.
ಸುದೀಕ್ಷ ಮೈಸೂರಿನ ದಿನೇಶ್ ಎಂಬುವವರ ಪುತ್ರಿ ಆಗಿದ್ದು, ಕನ್ನಡ ಸೇರಿ 5 ವಿಷಯದಲ್ಲಿ ಶೇ 100ರಷ್ಟು ಅಂಕ ಗಳಿಸಿದ್ದಾರೆ. ಸಂಸ್ಕೃತ-125, ಇಂಗ್ಲಿಷ್-100, ಕನ್ನಡ-100, ವಿಜ್ಞಾನ-100, ಸಮಾಜ-100, ಗಣಿತದಲ್ಲಿ 95 ಅಂಕ ಬಂದಿತ್ತು.ನಂತರ ಮರುಮೌಲ್ಯ ಮಾಪನಕ್ಕೆ‌ ಮನವಿ ಸಲ್ಲಿಸಲಾಗಿತ್ತು. ಇಂದು ಮರು ಮೌಲ್ಯ ಮಾಪನದ ಫಲಿತಾಂಶದಲ್ಲಿ ಗಣಿತದಲ್ಲಿ 99 ಅಂಕ ಪಡೆದುಕೊಂಡಿದ್ದಾರೆ.  ಆ ಮೂಲಕ ಒಟ್ಟು 625ಕ್ಕೆ 624 ಅಂಕ ಗಳಿಸುವ ಮೂಲಕ ಮೈಸೂರು ಜಿಲ್ಲೆಗೆ ಟಾಪರ್ ಹಾಗೂ ರಾಜ್ಯಕ್ಕೆ ಎರಡನೇ ಸ್ಥಾನ‌ ಪಡೆದುಕೊಂಡಿದ್ದಾರೆ.

Post a Comment

0Comments

Post a Comment (0)