ರಾಜ್ಯಮಟ್ಟದ ಮೂರು ದಿನಗಳ ಪೂಟ್ಬಾಲ್ ಪಂದ್ಯಾವಳಿಗೆ ಚಾಲನೆ

varthajala
0

 ಬೆಂಗಳೂರು : ಕರ್ನಾಟಕ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ವತಿಯಿಂದ ಐದನೇ ವಾರ್ಷಿಕೋತ್ಸವದ ಅಂಗವಾಗಿ ಕಂಠೀರವ ಸ್ಟೇಡಿಯಂ ನಲ್ಲಿ ಜೂನ್ 15 ರಿಂದ ಮೂರು ದಿನಗಳ ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಯನ್ನು ಮಾಜಿ ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರರಾದ ಸುಂದರೇಶನ್ ಉದ್ಘಾಟಿಸಿದರು. 

ಉದ್ಘಾಟನೆ ಬಳಿಕ ಮಾತನಾಡಿದ ಸುಂದರೇಶನ್ ಅವರು ತಮ್ಮ ಫುಟ್ಬಾಲ್ ಆರಂಭಿಕ ದಿನಗಳನ್ನು ಮೆಲಕು ಹಾಕಿದರು.   ನನ್ನ ಫುಟ್ಬಾಲ್ ಪ್ರವೃತ್ತಿ ಮತ್ತು ಆಸಕ್ತಿ ಶಾಲೆಯಲ್ಲಿ ಆರಂಭವಾಗಿದ್ದರೂ ನನಗೆ ಫುಟ್ಬಾಲ್ ಆಡಲು ಅವಕಾಶ ದೊರಕಿದ್ದು ಮಾತ್ರ ನಾನು ಸೇನೆಯನ್ನು ಸೇರಿದಾಗ.  1975ರಲ್ಲಿ ನಾನು ಐಟಿಐ ಗೆ ಸೇರಿದೆ. ಐಟಿಐ ನೀಡಿದ ಸಹಕಾರ ಮತ್ತು ಪ್ರೋತ್ಸಾಹದಿಂದ ನಾನು ಫುಟ್ಬಾಲ್ ಆಟಗಾರನಾಗಿ ಗುರುತಿಸಿಕೊಂಡೆ. 

ನಾನು ಫುಟ್ಬಾಲ್ ವೃತ್ತಿಯನ್ನು ಪ್ರಾರಂಭಿಸಿದಾಗ ಈ ರೀತಿಯ ಸೌಲಭ್ಯಗಳು ಇರಲಿಲ್ಲ ಆದರೂ ಸಹ ನಾವು ಛಲ ಬಿಡದೆ ಫುಟ್ಬಾಲ್ ಆಡಿ ಹೆಸರು ಮಾಡಿದವು.  ಈಗ ಫುಟ್ಬಾಲ್ ಪಂದ್ಯಾವಳಿ ಬಹಳ ಆಧುನಿಕರಣಗೊಂಡಿದೆ ನಮ್ಮ ಕಾಲಕ್ಕೂ ಈಗಿನ ಕಾಲಾವಳಿಗೂ ಅಜಗಜಾಂತರ ವ್ಯತ್ಯಾಸವಿದೆ.  ಈಗ ಉತ್ತಮ ಶ್ರೇಣಿಯ ಕೋಚ್ಗಳು, ಸೌಲಭ್ಯಗಳು ನವಿಸುತ್ತಿರುವುದರಿಂದ ಚಿಕ್ಕ ವಯಸ್ಸಿನಿಂದಲೇ  ಫುಟ್ಬಾಲ್ ಆಟಗಾರರು ಚೆನ್ನಾಗಿ ಆಡಿ ದೇಶಕ್ಕೆ ರಾಜ್ಯಕ್ಕೆ ಕೀರ್ತಿ ತರಲಿ ಎಂದು ಆಶಿಸಿದರು.

ಒಟ್ಟು ಎಂಟು ತಂಡಗಳು ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಆರಂಭಿಕ ಪಂದ್ಯ ಕಿಕ್ ಸ್ಟಾರ್ಟ್ ಎಫ್ ಸಿ ಕರ್ನಾಟಕ ಮತ್ತು ಯುಕೆ ಡಿಎಫ್ಎ ಏರ್ಪಟ್ಟಿದ್ದು ಇದರಲ್ಲಿ ಕಿಕ್ ಸ್ಟಾರ್ಟ್ ಎಫ್ ಸಿ ಕರ್ನಾಟಕ 8-0 ಗೋಲ್ ಗಳ ಅಂತರದಲ್ಲಿ ವಿಜಯ ಸಾಧಿಸಿತು.  ಎಫ್ ಸಿ ಮಂಗಳೂರು, ಡಿ ವೈ ಇ ಎಸ್, ಬೆಳಗಾಂ ಯುನೈಟೆಡ್ ಎಫ್ ಸಿ, ವಿಲಿಯಂ ಸಾಕರ್ ಅಕಾಡೆಮಿ, ಮೈಸೂರು ವಿಜಯನಗರ ಎಫ್ ಸಿ ಮತ್ತು ರೂಟ್ಸ್ ಎಫ್ ಸಿ ಫಟ್ಬಾಲ್ ತಂಡಗಳು ಭಾಗವಹಿಸಲಿವೆ.

ಸಪೋರ್ಟಿಂಗ್ ಪಾರ್ಟ್ನರ್ ಆಗಿ ಕೃಪಾನಿಧಿ ಗ್ರೂಪ್‌ ಆಫ್ ಇನ್ಸ್‌ಟಿಟ್ಯೂಷನ್ಸ್, ಹೆಲ್ತ್‌ ಪಾರ್ಟ್ನರ್ ಆಗಿ 
ಸ್ಪರ್ಶ್‌ ಆಸ್ಪತ್ರೆ, ಫುಡ್‌ ಪಾರ್ಟ್ನರ್ ಆಗಿ ನಂದಾಸ್ ಹೋಟೆಲ್ಸ್‌, ಗಿಫ್ಟ್‌ ಪಾರ್ಟ್ನರ್ ಆಗಿ ಡಿಎಸ್‌ ಮ್ಯಾಕ್ಸ್‌
 ತಮ್ಮ ಸಹಕಾರವನ್ನು ಒದಗಿಸಿವೆ. 

Post a Comment

0Comments

Post a Comment (0)