ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA), ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET-2024) ಫಲಿತಾಂಶ ಪ್ರಕಟಿಸಿದೆ. ಆದರೆ ಇನ್ನೂ 3 ಸಾವಿರ ವಿದ್ಯಾರ್ಥಿಗಳ ಫಲಿತಾಂಶ ಹೊರಬರಬೇಕಿದೆ. ಈ 3 ಸಾವಿರ ಅಭ್ಯರ್ಥಿಗಳ ಫಲಿತಾಂಶ ಪ್ರಕಟವಾಗದೆ ಇರುವುದಕ್ಕೆ ಕೆಇಎ ಸ್ಪಷ್ಟನೆ ನೀಡಿದೆ. ಅದು “ಪಿಯುಸಿಯಲ್ಲಿ ನೀಡಿದ್ದ ಅಂಕಗಳನ್ನು ಸಿಇಟಿಗೆ ಅರ್ಜಿ ಸಲ್ಲಿಸುವಾಗ ಕೆಲ ಅಭ್ಯರ್ಥಿಗಳು ತಪ್ಪಾಗಿ ನಮೂದಿಸಿದ್ದಾರೆ. ಅಂಥವರ ರ‍್ಯಾಂಕ್ ಪ್ರಕಟಿಸಿಲ್ಲ. ಇಂತಹ ಅಭ್ಯರ್ಥಿಗಳು ಕೆಇಎ ವೆಬ್ಸೈಟ್ಗೆ ಭೇಟಿ ನೀಡಿ ಅಂಕಗಳನ್ನು ಮತ್ತೊಮ್ಮೆ ನಮೂದಿಸಿದರೆ, ಅವರ ರ‍್ಯಾಂಕ್ ಅನ್ನು ಒಂದೆರಡು ದಿನಗಳಲ್ಲಿ ತಿಳಿಸಲಾಗುವುದು” ಎಂದು ಕೆಇಎ ಅಧಿಕಾರಿಗಳು ತಿಳಿಸಿದ್ದಾರೆ. ಸಿಇಟಿ ಫಲಿತಾಂಶ ನಂತರ ಮುಂದೇನು? ಕೌನ್ಸಲಿಂಗ್ ಯಾವಾಗ? ಸೀಟು ಹಂಚಿಕೆ ವಿವರ ಇಲ್ಲಿದೆ ನೀಟ್ ಫಲಿತಾಂಶದ ನಂತರ ಮತ್ತು ಅದರ ಕೌನ್ಸಲಿಂಗ್ ವೇಳಾಪಟ್ಟಿ ನೋಡಿಕೊಂಡು ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ಎಲ್ಲ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಒಟ್ಟಿಗೆ ಕೌನ್ಸೆಲಿಂಗ್ ನಡೆಸಲಾಗುವುದು ಎಂದು ಕೆಇಎ ತಿಳಿಸಿದೆ.
ಕೆಸಿಇಟಿ 2024 ಸೀಟು ಹಂಚಿಕೆಯ ಫಲಿತಾಂಶವನ್ನು cetonline.karnataka.gov.in ನಲ್ಲಿ ಪ್ರಕಟಿಸುತ್ತದೆ. ಇನ್ನು ಸೀಟಿ ಹಂಚಿಕೆ ಪ್ರಕ್ರಿಯೆಯನ್ನು ಸರ್ಕಾರ ಡ್ರಾಫ್ಟ್ ಸೀಟ್ ಮ್ಯಾಟ್ರಿಕ್ ಪಟ್ಟಿಯನ್ನು ಬಿಡುಗಡೆ ಮಾಡಿದ ನಂತರ ಆರಂಭಿಸಲಾಗುವುದು ಎಂದು ಕೆಇಎ ಟಿವಿ9ಗೆ ತಿಳಿಸಿದೆ.ಸೀಟು ಹಂಚಿಕೆ ಪರಿಶೀಲಿಸುವುದು ಹೇಗೆ?
ಸೀಟು ಹಂಚಿಕೆಯನ್ನು ಅಭ್ಯರ್ಥಿಗಳು ಪರಿಶೀಲಿಸಲು ಕೆಇಎಯ ಅಧಿಕೃತ ವೆಬ್‌ಸೈಟ್ kea.kar,nic.in/cetonline.karnataka.gov.in ಗೆ ಭೇಟಿ ನೀಡಿ
ಸಿಇಟಿ ಸೀಟು ಹಂಚಿಕೆ ಲಿಂಕ್ ಅನ್ನು ಕ್ಲಿಕ್ ಮಾಡಿ
ಈಗ, ಅಭ್ಯರ್ಥಿಗಳು ನಿಮ್ಮ ಸಿಇಟಿ ನೋಂದಣಿ ಸಂಖ್ಯೆ ನಮೂದಿಸಿ
submit ಬಟನ್ ಮೇಲೆ ಕ್ಲಿಕ್ ಮಾಡಿ
ಆಗ ನಿಮಗೆ ಸಿಟು ಹಂಚಿಕೆ 2024 ಕಾಣುತ್ತದೆ.
ಅಧಿಕೃತ ವೆಬ್‌ಸೈಟ್ cetonline.karnataka.gov.in ನಲ್ಲಿ ಕೆಸಿಇಟಿ 2024 ಕೌನ್ಸೆಲಿಂಗ್‌ನ ಪ್ರತಿ ಸುತ್ತಿನ ನಂತರ ಕೆಇಸಿಟಿ 2024 ಸೀಟು ಹಂಚಿಕೆಯನ್ನು ಕೆಇಎ ಬಿಡುಗಡೆ ಮಾಡುತ್ತದೆ. ಸೀಟು ಹಂಚಿಕೆ ಆಗಸ್ಟ್ನಲ್ಲಿ ತಾತ್ಕಾಲಿಕವಾಗಿ ಬಿಡುಗಡೆಯಾಗುವ ನಿರೀಕ್ಷೆ ಇದೆ.
ದಾಖಲಾತಿ ಪರಿಶೀಲನೆ ಹೇಗೆ?
ವಿಶೇಷ ಮಕ್ಕಳ ವೈದ್ಯಕೀಯ ತಪಾಸಣೆ ಬಿಟ್ಟರೆ ಬಹುತೇಕ ಎಲ್ಲ ದಾಖಲೆಗಳ ಪರಿಶೀಲನೆ ಆನ್ ಲೈನ್ನಲ್ಲಿ ನಡೆಯಲಿದೆ. ಕೆಇಎ ಕಚೇರಿಗೆ ಬರುವ ಅಗತ್ಯವಿಲ್ಲ, ಅಭ್ಯರ್ಥಿಗಳು ಅಪ್ಲೋಡ್ ಮಾಡಿರುವ ಶೈಕ್ಷಣಿಕ ದಾಖಲೆಗಳನ್ನು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆನ್ ಲೈನ್ನಲ್ಲಿ ಪರಿಶೀಲನೆ ನಡೆಸುತ್ತಾರೆ ಎಂದು ಕೆಇಎ ತಿಳಿಸಿದೆ.
ವ್ಯಾಸಂಗ ಪ್ರಮಾಣ ಪತ್ರ, ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣಪತ್ರ, ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ, ಧಾರ್ಮಿಕ ಅಲ್ಪಸಂಖ್ಯಾತ ಮೀಸಲಾತಿ, ಭಾಷಾ ಅಲ್ಪಸಂಖ್ಯಾತ ಮೀಸಲಾತಿ, ಪ್ರವೇಶ ಸಂಖ್ಯೆ, ರ‍್ಯಾಂಕಿಂಗ್ ಪಡೆದ ಸ್ಥಾನ ಪ್ರಮಾಣ ಪತ್ರಗಳನ್ನು ತರಬೇಕು.
ಹೆಚ್ಚಿನ ಮಾಹಿತಿಗಾಗಿ ಕೆಇಎ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.