ಬೆಂಗಳೂರು (ಕರ್ನಾಟಕ ವಾರ್ತೆ): ಆಯೋಗದ ಅಧಿಸೂಚನೆ ಸಂಖ್ಯೆ: ಆರ್(2)3567/17-18/ಪಿ.ಎಸ್.ಸಿ. ದಿ:19-02-2018 ಹಾಗೂ ತಿದ್ದುಪಡಿ : (2)1762/2019-20/ಪಿ.ಎಸ್.ಸಿ. ದಿನಾಂಕ: 25-09-2019ರಲ್ಲಿ ಅಧಿಸೂಚಿಸಲಾದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದಲ್ಲಿನ ಕಿರಿಯ ತರಬೇತಿ ಅಧಿಕಾರಿಗಳ ಎಲ್ಲಾ ವಿವಿಧ 23 ವೃತ್ತಿಗಳ ನೇಮಕಾತಿ ಸಂಬಂಧ ಮಾನ್ಯ ಉಚ್ಚ ನ್ಯಾಯಾಲಯದ ರಿಟ್ ಅರ್ಜಿ ಸಂ:4510/2023 ಮತ್ತು ಇತರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದಿ:24-07-2023 ರಂದು ನೀಡಿದ್ದ ಮಧ್ಯಂತರ ಆದೇಶದನ್ವಯ ಎಲ್ಲಾ ವಿವಿಧ 23 ವೃತ್ತಿಗಳ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಸಿದ್ಧಪಡಿಸಿ ಮಾನ್ಯ ಉಚ್ಚ ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿತ್ತು.
ತದನಂತರ ಮಾನ್ಯ ಉಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂ:24738/2022 ಮತ್ತು ಇತರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಯೋಗವು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಎಲ್ಲಾ 23 ವೃತ್ತಿಗಳ ಪರಿಷ್ಕತ ಆಯ್ಕೆಪಟ್ಟಿಯನ್ನು ಪ್ರಕಟಿಸುವಂತೆ ದಿ:20-03-2024ರ ಮಧ್ಯಂತರ ಆದೇಶದಲ್ಲಿ ನಿರ್ದೇಶಿಸಿದ್ದರಿಂದ ಸದರಿ ಆದೇಶದನ್ವಯ ಎಲ್ಲಾ ವಿವಿಧ 23 ವೃತ್ತಿಗಳ ಪರಿಷ್ಕೃತ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಅಭ್ಯರ್ಥಿಗಳ ಮಾಹಿತಿಗಾಗಿ ದಿ:07-05-2024 ಮತ್ತು 18-05-2024 ರಂದು ಪ್ರಕಟಿಸಲಾಗಿರುತ್ತದೆ.ಮೇಲ್ಕಂಡ ಮಾನ್ಯ ಉಚ್ಚ ನ್ಯಾಯಾಲಯದ ರಿಟ್ ಅರ್ಜಿ ಸಂ: 24738/2022 ಮತ್ತು ಇತರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದಿ:20-03-2024ರಂದು ನೀಡಿರುವ ಮಧ್ಯಂತರ ಆದೇಶದಲ್ಲಿ ಒಂದಕ್ಕಿಂತ ಹೆಚ್ಚಿನ ವೃತ್ತಿಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಂದ ಆದ್ಯತೆಯನ್ನು ಪಡೆಯುವಂತೆ ಆಯೋಗಕ್ಕೆ ನಿರ್ದೇಶಿಸಿದ್ದು, ಸದರಿ ಆದೇಶದನ್ವಯ ಒಂದಕ್ಕಿಂತ ಹೆಚ್ಚಿನ ವೃತ್ತಿಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಆದ್ಯತೆಯನ್ನು ನೀಡುವುದು ಕಡ್ಡಾಯವಾಗಿರುವುದರಿಂದ ವಿವಿಧ ವೃತ್ತಿಗಳ ನೇಮಕಾತಿ ಸಂಬಂಧ ದಾಖಲೆಗಳ ಪರಿಶೀಲನೆಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳ ಪಟ್ಟಿಯನ್ನು ಆಯೋಗದ ವೆಬ್‍ಸೈಟ್‍ನಲ್ಲಿ ದಿನಾಂಕ: 27-06-2024 ರಂದು ಪ್ರಕಟಿಸಲಾಗಿದ್ದು, ಸದರಿ ಅಭ್ಯರ್ಥಿಗಳು ಆಯೋಗದ ವೆಬ್‍ಸೈಟ್‍ನಲ್ಲಿ ತಿತಿತಿ.ಞಠಿsಛಿ.ಞಚಿಡಿ.ಟಿiಛಿ.iಟಿ ದಿನಾಂಕ: 27-06-2024 ರಿಂದ 06-07-2024 ರವರೆಗೆ ಆದ್ಯತೆಯನ್ನು ನೀಡಬಹುದಾಗಿರುತ್ತದೆ. ಆದ್ಯತೆಯನ್ನು ನೀಡುವ ಸಮಯದಲ್ಲಿ ಏನಾದರೂ ತಾಂತ್ರಿಕ ದೋಷಗಳಿದ್ದಲ್ಲಿ ದೂರವಾಣಿ ಸಂ: : 080-22356487 / 080-22200090 ನ್ನು ಸಂಪರ್ಕಿಸಲು ಸೂಚಿಸಿದೆ.
ಅಭ್ಯರ್ಥಿಗಳು ಸಲ್ಲಿಸುವ ಆದ್ಯತೆಯನುಸಾರ ಮೆರಿಟ್ ಹಾಗೂ ಮೀಸಲಾತಿಯನ್ವಯ ಒಂದು ವೃತ್ತಿಗೆ ಮಾತ್ರ ಪರಿಗಣಿಸಿ ಪರಿಷ್ಕøತ ಅಂತಿಮ ಆಯ್ಕೆಪಟ್ಟಿಯನ್ನು ಸಿದ್ಧಪಡಿಸಿ ಪ್ರಕಟಿಸಲಾಗುವುದು. ಒಂದು ವೇಳೆ ಅಭ್ಯರ್ಥಿಗಳು ಆದ್ಯತೆ ನೀಡದೇ ಇದ್ದಲ್ಲಿ ಅಂತಹ ಅಭ್ಯರ್ಥಿಗಳು ಅರ್ಜಿಯಲ್ಲಿ ಕೋರಿರುವ ಮೀಸಲಾತಿ ಹಾಗೂ ಪಡೆದಿರುವ ಅಂಕಗಳ ಆಧಾರದ ಮೇರೆಗೆ ಯಾವುದಾದರೂ ಒಂದು ವೃತ್ತಿಗೆ ಹಂಚಿಕೆ ಮಾಡಿ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುವುದು.
ಅಭ್ಯರ್ಥಿಗಳು ಆನ್‍ಲೈನ್ ಮೂಲಕ ನೀಡುವ ಆದ್ಯತೆಯನ್ನೇ ಆಯೋಗವು ಅಂತಿಮವಾಗಿ ಪರಿಗಣಿಸುವುದು. ಒಂದು ಬಾರಿ ಆನ್‍ಲೈನ್ ಮೂಲಕ ಆದ್ಯತೆಯನ್ನು ನೀಡಿದ ನಂತರ ಯಾವುದೇ ಬದಲಾವಣೆಗೆ ಅವಕಾಶವಿರುವುದಿಲ್ಲ. ಆದಾಗ್ಯೂ ಈ ಸಂಬಂಧ ಮನವಿಗಳನ್ನು ಸಲ್ಲಿಸಿದ್ದಲ್ಲಿ ತಿರಸ್ಕರಿಸಲಾಗುವುದು. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಮುನ್ನೆಚ್ಚರಿಕೆಯಿಂದ ಆನ್‍ಲೈನ್‍ನಲ್ಲಿ ಆದ್ಯತೆಯನ್ನು ಭರ್ತಿ ಮಾಡುವಂತೆ ಕರ್ನಾಟಕ ಲೋಕ ಸೇವಾ ಆಯೋಗದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.