ಬೆಂಗಳೂರು, ಜೂನ್ 01 (ಕರ್ನಾಟಕ ವಾರ್ತೆ): ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಶಾಲಾ ಮಕ್ಕಳಿಗಾಗಿ ಜೂನ್ 4 ರಂದು ಬೆಳಿಗ್ಗೆ 10.00 ಗಂಟೆಗೆ ಬೆಂಗಳೂರಿನ ಕಬ್ಬನ್ ಉದ್ಯಾನವನÀದ ಜವಹರ ಬಾಲಭವನದಲ್ಲಿ ಚಿತ್ರಕಲಾ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಿದೆ. ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲಾ ವiಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಬೆಳಿಗ್ಗೆ 10.30 ರಿಂದ 11.30 ರವರೆಗೆ ಹಾಗೂ ಪ್ರೌಢಶಾಲಾ ವiಕ್ಕಳಿಗೆ ಪ್ರಬಂಧ ಸ್ಪರ್ಧೆಯನ್ನು ಬೆಳಿಗ್ಗೆ 12.30 ರಿಂದ 01.30ರವರೆಗೆ ಆಯೋಜಿಸಲಾಗಿದೆ. ಚಿತ್ರಕಲಾ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಛೇರಿ ಬೆಂಗಳೂರು ನಗರ ದಕ್ಷಿಣ, 1 ನೇ ಮಹಡಿ, ನಿಸರ್ಗ ಭವನ, 7 ನೇ ‘ಡಿ’ ಕ್ರಾಸ್, ಶಿವನಗರ, ಬೆಂಗಳೂರು – 560010 ಅಥವಾ ಇ-ಮೇಲ್ :bngcitysouth@kspcb.gov.in ಮುಖಾಂತರ ನೋಂದಣಿ ಮಾಡಿಸಿಕೊಳ್ಳುವುದು.
“ಭೂಮರುಸ್ಥಾಪನೆ, ಮರುಭೂಮಿಕರಣ ಹಾಗೂ ಬರತಡೆಯುವಿಕೆ” (Land restoration, desertification and drought resilience) ಸ್ಪರ್ಧೆಯ ವಿಷಯವಾಗಿದ್ದು, ಸ್ಪರ್ಧೆಗಳಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವ ಶಾಲಾ ಮಕ್ಕಳು ತಮ್ಮ ಸ್ವಂತ ಖರ್ಚಿನಲ್ಲಿ ಸ್ಪರ್ಧೆಗೆ ಬರತಕ್ಕದ್ದು.ಭಾಗವಹಿಸುವ ಶಾಲಾ ಮಕ್ಕಳಿಗೆ ಚಿತ್ರ ಬಿಡಿಸುವ ಹಾಳೆಗಳು ಮತ್ತು ಪ್ರಬಂಧ ಬರೆಯುವ ಹಾಳೆಗಳನ್ನು ಮಂಡಳಿಯ ವತಿಯಿಂದ ನೀಡಲಾಗುವುದು. ಚಿತ್ರಕಲೆಗೆ ಬಳಸುವ ಪೆನ್ಸಿಲ್, ಬಣ್ಣಗಳು (ಪೇಂಟಿಂಗ್ ಸಾಮಗ್ರಿಗಳು) ಇತ್ಯಾದಿ ಸಾಮಗ್ರಿಗಳನ್ನು ವiಕ್ಕಳೇ ತರಬೇಕು. ಹಾಗೂ ಅರ್ಧಗಂಟೆ ಮುಂಚಿತವಾಗಿ ಬಾಲಭವನ ಕಬ್ಬನ್ ಉದ್ಯಾನವನ, ಬೆಂಗಳೂರು ಇಲ್ಲಿ ಹಾಜರಾಗಿರಬೇಕು.
ಸ್ಪರ್ಧೆಗಳ ನಂತರ ಚಿತ್ರಕಲೆ ಮಾಡಿರುವ ಹಾಳೆಗಳು ಮತ್ತು ಪ್ರಬಂಧ ಬರೆದಿರುವ ಹಾಳೆಗಳು ಮಂಡಳಿಗೆ ನೀಡತಕ್ಕದ್ದು. ಬಹುಮಾನ ವಿಜೇತರನ್ನು ತೀರ್ಪುಗಾರರು ಆಯ್ಕೆ ಮಾಡಲಿದ್ದು, ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಆಯ್ಕೆಯಾಗುವ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ದೆವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾದಾನಕರ ಬಹುಮಾನಗಳನ್ನು ವಿಶ್ವ ಪರಿಸರ ದಿನಾಚಾರಣೆ -2024 ರಂದು ಗಣ್ಯರಿಂದ ವಿತರಣೆ ಮಾಡಲಾಗುವುದು.
ಸ್ಪರ್ಧೆಯಲ್ಲಿ ಭಾಗವಹಿಸುವ ಶಾಲಾ ಮಕ್ಕಳಿಗೆ ಸ್ಪರ್ಧೆಯ ನಂತರ ಲಘು ಉಪಹಾರವನ್ನು ನೀಡಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.