ಹಾವು ರಕ್ಷಕರಿಗೆ ಎರಡು ದಿನಗಳ ತರಬೇತಿ

varthajala
0

 ಬೆಂಗಳೂರು, ಜೂನ್ 12 (ಕರ್ನಾಟಕ ವಾರ್ತೆ): ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಹಾವು ರಕ್ಷಣಾ ಕಾರ್ಯಕರ್ತರ ಕೌಶಲ್ಯಗಳನ್ನು ಹೆಚ್ಚಿಸಲು ಕರ್ನಾಟಕ ಅರಣ್ಯ ಇಲಾಖೆಯು ಜೂನ್ 19 ಮತ್ತು 20 ರಂದು ಬನ್ನೇರುಘಟ್ಟ ಪ್ರಾಕೃತಿಕ ಶಿಬಿರ - ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹಾವು ರಕ್ಷಕರಿಗೆ ಎರಡು ದಿನಗಳ ತರಬೇತಿ ಆಯೋಜಿಸಿದೆ.

ತರಬೇತಿಯಲ್ಲಿ ಹಾವುಗಳ ರಕ್ಷಣೆ, ಹಾವುಗಳ ಸುರಕ್ಷತೆಗೆ ನಿರ್ವಹಣೆ ವಿಧಾನಗಳು, ಕಾರ್ಯತಂತ್ರಗಳು, ಉರುಗಶಾಸ್ತ್ರ, ಹಾವು ಕಚ್ಚಿದಾಗ ಪ್ರಥಮ ಚಿಕಿತ್ಸೆ, ದಾಖಲಾತಿಗಳ ನಿರ್ವಹಣೆ ಮತ್ತು ಅರಣ್ಯ ಇಲಾಖೆಯೊಂದಿಗೆ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಅನುಕೂಲವಾಗುವಂತೆ ತಜ್ಞರು, ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು.
ನೋಂದಣಿ ಮಾಡಿಕೊಂಡವರಿಗೆ ಮಾತ್ರ ತರಬೇತಿ ಪಡೆಯಲು ಅವಕಾಶವಿದ್ದು, ಆಸಕ್ತರು ಲಿಂಕ್  https:/bit.ly/kfdswblr  and  https://forms.gle/mT8gNW2oK7usEhx58     ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)