ಬೆಂಗಳೂರು: 28, ವಿದ್ಯಾಭ್ಯಾಸಕ್ಕಾಗಿ ಶಾಲಾ ಕಾಲೇಜ್ ಗಳಿಗೆ ತೆರಳುತ್ತಿರುವ ಮಕ್ಕಳ ವರ್ತನೆ, ಚಟುವಟಿಕೆಗಳ ಮೇಲೆ ನಿಗಾವಹಿಸಿ ದುಶ್ಚಟಕ್ಕೆ ಬೀಳದಂತೆ ಎಚ್ಚರವಹಿಸುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ಪೋಷಕರಿಗೆ ಕರೆ ನೀಡಿದರು ಲಗ್ಗೆರೆಯ ಪುನರ್ವಸತಿ ಕೇಂದ್ರ, ರಕ್ಷಾ ಮಂದಿರದಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಬಳಕೆ ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ಅನಂತ ಫೌಂಡೇಷನ್ ಹಮ್ಮಿಕೊಂಡಿದ್ದ ಜಾಗೃತಿ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಮಾತನಾಡಿದರು,
ದೇಶದಲ್ಲಿ ಮಾದಕ ವಸ್ತುಗಳ ಸೇವನೆ ಮತ್ತು ಬಳಕೆ ದಂಡನೀಯ ಹಾಗೂ ಶಿಕ್ಷಾರ್ಹ ಅಪರಾಧವೆಂದು ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಜಗದೀಶ್ ಜಿ ಕುಮಾರ್ ತಿಳಿಸಿದರು, ಕಾರ್ಯಕ್ರಮದಲ್ಲಿ ಅತಿಥಿಯಾಗಿ ಕೇಂದ್ರ ಸರ್ಕಾರಿ ವಕೀಲರು ಹಾಗೂ ಬೆಂಗಳೂರು ವಿಶ್ವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯ ಆತ್ಮ ವಿ ಹಿರೇಮಠ್, ಮೋದಿ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರಾದ ಮೋದಿ, ಅನಂತ ಫೌಂಡೇಷನ್ ನ ಉಪಾಧ್ಯಕ್ಷರಾದ ರೇಣುಕಾ ಪ್ರಭು, ಕಾರ್ಯದರ್ಶಿ ಸುಮಂತ್ ಪಟ್ಟದಾರ್,ಉಪನ್ಯಾಸಕರಾದ ವಿನಯ್ ಕುಮಾರ್ ವಿ ನಾಯಕ್, ರಕ್ಷಾ ಮಂದಿರದ ಪ್ರಿನ್ಸಿಪಾಲ್ ನಾಗರಾಜುರವರು ಪಾಲ್ಗೊಂಡಿದ್ದರು!