ಬೆಂಗಳೂರು, (ಕರ್ನಾಟಕ ವಾರ್ತೆ):
ಆಹಾರ ಸುರಕ್ಷತೆ ಮತ್ತು ಹುಣಮಟ್ಟ ಕಾಯ್ದೆ 2006, ನಿಯಮಗಳು 2011ರನ್ವಯ ಆಹಾರ ಪದಾರ್ಥಗಳ ತಯಾರಕರುಗಳು ಮತ್ತು ಆಮದುದಾರರು ಪ್ರತಿ ವರ್ಷ ಮೇ 31ರೊಳಗೆ ವಾರ್ಷಿಕ ಆದಾಯ ಸಲ್ಲಿಸಬೇಕಾಗಿದ್ದು, FoSCoS ಪೋರ್ಟಲ್‍ನಲ್ಲಿ ವಾರ್ಷಿಕ ಆದಾಯ ಸಲ್ಲಿಸುವ ಸಂದರ್ಭದಲ್ಲಿ ತಾಂತ್ರಿಕ ಸಮಸ್ಯೆಗಳಿಂದಾಗಿ ವಾರ್ಷಿಕ ಆದಾಯವನ್ನು ಸಲ್ಲಿಸಲು ಆಹಾರ ಉದ್ದಿಮೆದಾರರಿಗೆ ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಮೇ 31 ರವರೆಗೆ ನಿಗದಿಪಡಿಸಲಾಗಿರುವ ಕೊನೆಯ ದಿನಾಂಕವನ್ನು ಜೂನ್ 30 ರವರೆಗೆ ವಿಸ್ತರಿಸಲಾಗಿದೆ.
FoSCoS ಡ್ಯಾಶ್ ಬೋರ್ಡ್ https://foscos.fssai.gov.in ರಲ್ಲಿ ಆನ್‍ಲೈನ್ ಮೂಲಕ ಸಲ್ಲಿಸಲಾಗುವ ವಾರ್ಷಿಕ ಆದಾಯವನ್ನು ಮಾತ್ರ ಮಾನ್ಯ ಮಾಡಲಾಗುವುದೆಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.