ಬೆಂಗಳೂರು: ಶ್ರೀ ಚಾಮರಾಜೇಂದ್ರ ಮೃಗಾಲಯವು 12 ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ 32ನೇ ಯುವ ಸಂಘಟನೆಯನ್ನು ಆಯೋಜಿಸಲು ಉದ್ದೇಶಿಸಿದ್ದು, ಕಾರ್ಯಕ್ರಮಗಳನ್ನು ಜುಲೈ 2024 ರಿಂದ ಜನವರಿ 2025ರ ವರೆಗೆ 25 ಭಾನುವಾರಗಳಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗÀಂಟೆಯವರೆಗೆ ನಡೆಸÀಲಾಗುವುದು. ಮೊದಲು ಬಂದವರಿಗೆ ಮೊದಲ ಆದ್ಯತೆ ಆಧಾರದ ಮೇಲೆ 60 ಮಂದಿ ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಸದಸ್ಯರುಗಳಿಗೆ ವನ್ಯಪ್ರಾಣಿಗಳ ವೈವಿಧ್ಯತೆ, ಸಂರಕ್ಷಣೆ ಹಾಗೂ ಮೃಗಾಲಯ ಪರಿಸರದಲ್ಲಿ ಅವುಗಳ ನಿರ್ವಹಣೆ, ಪ್ರಾಣಿ ವರ್ತನೆ ಅಧ್ಯಯನದ ಬಗ್ಗೆ ಕಾಲಕಾಲಿಕ ತರಗತಿಗಳ ಮೂಲಕ ತಿಳಿಯಪಡಿಸಲಾಗುವುದು.
ಆಸಕ್ತಿಯುಳ್ಳವರು ಜೂನ್ 17 ರಿಂದ ಜೂನ್ 22 ರವರೆಗೆ ಮೃಗಾಲಯದ ಕಛೇರಿಯಿಂದ ಅರ್ಜಿಯನ್ನು ಪಡೆದು ಭರ್ತಿ ಮಾಡಿ ಅರ್ಜಿಯನ್ನು ಜೂನ್ 22ರೊಳಗೆ ಕಚೇರಿಯ ಸಮಯದಲ್ಲಿ ಸಲ್ಲಿಸತಕ್ಕದ್ದು. ಭರ್ತಿ ಮಾಡಿದ ಅರ್ಜಿಯೊಂದಿಗೆ ಇತ್ತೀಚಿನ ಭಾವಚಿತ್ರ, ವಯಸ್ಸಿನ ಪುರಾವೆಗೆ ಆಧಾರ್ ಕಾರ್ಡ್ ಅಥವಾ ಜನನ ಪ್ರಮಾಣ ಪತ್ರದ ನಕಲು, ಶಿಬಿರದ ಶುಲ್ಕ ರೂ 2,500/-, ಪಾವತಿಸಬೇಕು. ಶಿಬಿರಕ್ಕೆ ಹಾಜರಾಗಲು ಆಯ್ಕೆಯಾದ ಸದಸ್ಯರಿಗೆ ಇ-ಮೇಲ್ ಮೂಲಕ ಸೂಚನೆ ಮತ್ತು ಹೆಚ್ಚಿನ ವಿವರಗಳನ್ನು ಕಳುಹಿಸಲಾಗುವುದುಹೆಚ್ಚಿನ ಮಾಹಿತಿಗಾಗಿ, ಮೊಬೈಲ್ ಸಂಖ್ಯೆ: 9686668099 ಗೆ ಕರೆ ಮಾಡಬಹುದು ಅಥವಾ edumysore99@gmail.com ಗೆ ಇ-ಮೇಲ್ ಕಳುಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.