2022 ಮತ್ತು 2023ನೇ ಸಾಲಿನ ಪುಸ್ತಕ ಬಹುಮಾನಕ್ಕಾಗಿ ಜಾನಪದ ಕೃತಿಗಳ ಆಹ್ವಾನ

varthajala
0

 ಬೆಂಗಳೂರು (ಕರ್ನಾಟಕ ವಾರ್ತೆ):  ಕರ್ನಾಟಕ ಜನಪದ ಅಕಾಡೆಮಿಯು 2022ನೇ ಸಾಲಿನಲ್ಲಿ ಜನವರಿ 1ರಿಂದ ಡಿಸೆಂಬರ್ 31ರ ವರೆಗೆ ಹಾಗೂ 2023ನೇ ಸಾಲಿನಲ್ಲಿ ಜನವರಿ 01 ರಿಂದ ಡಿಸೆಂಬರ್ 31ರ ವರೆಗೆ ಪ್ರಥಮ ಆವೃತ್ತಿಯಲ್ಲಿ ಮುದ್ರಣಗೊಂಡಿರುವ ಜನಪದ ಗದ್ಯ, ಜನಪದ ಪದ್ಯ, ಜನಪದ ವಿಚಾರ ವಿಮರ್ಶೆ-ಸಂಶೋಧನೆ ಮತ್ತು ಜನಪದ ಸಂಕೀರ್ಣ (ತಾಂತ್ರಿಕ ಹಾಗೂ ಪೂರ್ವಭಾವಿ ಪುಟಗಳನ್ನು ಹೊರತುಪಡಿಸಿ) ಕನಿಷ್ಠ 150 ಪುಟಗಳಿಗೂ ಮೇಲ್ಪಟ್ಟಿರುವ ಜನಪದ ಕೃತಿಗಳನ್ನು 2022 ಮತ್ತು 2023ನೇ ಸಾಲಿನ ಪುಸ್ತಕ ಬಹುಮಾನಕ್ಕಾಗಿ ಆಹ್ವಾನಿಸಿದೆ.


ಆಸಕ್ತ ಲೇಖಕರು / ಪ್ರಕಾಶಕರು / ಸಂಪಾದಕರು 4 ಕೃತಿಗಳನ್ನು ದ್ವಿಪ್ರತಿ ಬಿಲ್ಲಿನೊಂದಿಗೆ ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ. ರಸ್ತೆ ಬೆಂಗಳೂರು ಇವರಿಗೆ 2024ನೇ ಜುಲೈ 20 ರೊಳಗೆ ಖುದ್ದಾಗಿ, ಕೊರಿಯರ್ ಅಥವಾ ಅಂಚೆ ಮೂಲಕ ಕಳುಹಿಸಿಕೊಡುವಂತೆ ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)