SSLC ಫಲಿತಾಂಶದ – ಏರಿಳಿತ!

varthajala
0

 ಎಲ್ಲೆಡೆ ಎಸ್ ಎಸ್ ಎಲ್ ಸಿ ಪರೀಕ್ಷಾ ಪಲಿತಾಂಶದ ಚರ್ಚೆನಡೆಯುತ್ತಿದೆ, ಈ ಬಾರಿ ಕಟ್ಟುನಿಟ್ಟಾದ ಕ್ರಮಗಳಿಂದ ಪಲಿತಾಂಶದಲ್ಲಿ ಕುಸಿತ ಕಂಡಿದೆ ಆದರೆ ಇದರಲ್ಲಿ ನಾವು ಗಮನಿಸಬೇಕಾದ ಹಲವಾರು ವಿಚಾರಗಳಿವೆ. ಈ ಹಿಂದೆ ಬರುತ್ತಿದ್ದ ಪಲಿತಾಂಶಕ್ಕಿಂತ ಈ ಫಲಿತಾಂಶ ಹೇಗೆವಿಭಿನ್ನವೆಂದು, ಈ ಫಲಿತಾಂಶವನ್ನು ನಾವು ಕ್ವಾಲಿಟಿ ರಿಸಲ್ಟ್  ಎಂಬಂತೆ ನೋಡಬೇಕು ಏಕೆಂದರೆ ಮಕ್ಕಳು ತಾವು ಕಷ್ಟಪಟ್ಟು ಬರೆದ  ಪರೀಕ್ಷೆಯ ಫಲಿತಾಂಶವಿದು, ನಾವು ಎರಡು ರೀತಿಯ ವಿದ್ಯಾರ್ಥಿಗಳನ್ನು ನೋಡುತ್ತೇವೆ ಒಬ್ಬರು ಪಾಸಾದ ತಕ್ಷಣ ಸಧ್ಯ ನಾನು ಪಾಸಾದೆ ಎಂದು ಖುಷಿಪಡುವವರು ಇನ್ನೊಬ್ಬರು ನನಗೆ ಇನ್ನು ಹೆಚ್ಚು ಅಂಕಗಳು ಬರಬೇಕಿತ್ತು ಎಂದು ದುಃಖ ಪಡುವವರು ಈ ಇಬ್ಬರಲ್ಲಿ ನನಗೆ ಪಾಸಾದೆ ಎಂದು ಖುಷಿ ಪಡುವವರ ಸಂತೋಷ ತೃಪ್ತಿ ನೀಡುತ್ತದೆ ಆದರೆ ಒಳ್ಳೆಯ ಅಂಕಗಳನ್ನು ತೆಗೆದು ಇನ್ನು ನನಗೆ ಬರಬೇಕಿತ್ತು ಎಂದು ದುಃಖ ಪಡುವವರನ್ನು ನೋಡುವಾಗ ಬೇಜಾರಾಗುತ್ತದೆಏಕೆಂದರೆ ಉತ್ತಮ ಫಲಿತಾಂಶವನ್ನು ಪಡೆದು ಸಹ ಅದನ್ನು ಅನುಭವಿಸಲು ಸಾಧ್ಯವಾಗುತ್ತಿಲ್ಲವಲ್ಲವೆಂದು, ಹಲವು  ವರ್ಷಗಳ ಹಿಂದೆ 60% ಬಂದರೆ ಅದು ಫಸ್ಟ್ ಕ್ಲಾಸ್ ಈಗಲೂ ಅದು ಹಾಗೆ ಇದೆ ಆದರೆ ಈಗ ಎಲ್ಲರಿಗೂ 90% ಮೇಲೆ ಬಂದರೆ ಮಾತ್ರ ಒಂದು ತೃಪ್ತಿ.

                                                            

ಏನಿದು ಈ ಶೇಕಡ90ವ್ಯಾಮೋಹ?

ಮಕ್ಕಳು ಎಷ್ಟು ಕಲಿತಿದ್ದಾರೆ ಅವರ ಸ್ವ ಪ್ರಯತ್ನದಿಂದ ಎಷ್ಟು ಅಂಕಗಳು ಬಂದಿದೆ ಎಂಬುದು ಮುಖ್ಯವಲ್ಲ, ನನ್ನ ಮಗ ಅಥವಾ ಮಗಳು 90% ಗಿಂತ ಮೇಲೆ ತೆಗೆದಿದ್ದಾರಾ ಎಂಬುದೇ ಮುಖ್ಯ , ಇದಕ್ಕೆ ಹಲವಾರು ಕಾರಣಗಳಿವೆ ,ಒಂದು ಕೆಲವು ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟ್ ಸಿಗುವುದಕ್ಕೆ ಕಟ್ ಆಫ್ ಪರ್ಸೆಂಟೇಜ್ ಮಾಡಿರುತ್ತಾರೆ, ಆ ಕಾಲೇಜಿನಲ್ಲಿ ಓದಿದರೆ ಮಾತ್ರ ಉತ್ತಮ ಭವಿಷ್ಯ ಎಂಬ ನಂಬಿಕೆಮತ್ತುಸಮಾಜದಲ್ಲಿನಎಲ್ಲರೂ ಗೌರವಿಸುತ್ತಾರೆಎಂಬಮನಸ್ಥಿತಿ,

ಇದರಿಂದಾಗಿಇವತ್ತು ನಾವು ನಿಜವಾದ ಅರ್ಹರನ್ನು ಗುರುತಿಸುವುದನ್ನೆ ಮರೆತಿದ್ದೇವೆ, 60% , 70% ,80% ಸಹ ಒಳ್ಳೆಯ ಫಲಿತಾಂಶವೆಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು, ವಿದ್ಯಾರ್ಥಿಯನ್ನು ಅವರು ತೆಗೆದುಕೊಳ್ಳುವ ಅಂಕಗಳಿಂದ ಮಾತ್ರ ಅಳೆಯದೆ ಅವರ ಬುದ್ಧಿಶಕ್ತಿ, ಮತ್ತು ಇತರೆಪಠ್ಯೇತರ ಚಟುವಟಿಕೆಗಳಲ್ಲಿ ಅವರಿಗಿರುವಸಾಮರ್ಥ್ಯವನ್ನು ಸಹ ನಾವು ಗಮನಿಸಬೇಕು ಮತ್ತುಪ್ರೋತ್ಸಾಹಿಸಬೇಕುಈ ಮನಸ್ಥಿತಿನಮ್ಮ ಸಮಾಜದಲ್ಲಿ ಇವತ್ತಿನ ಅಗತ್ಯ ಬದಲಾವಣೆಯಾಗಬೇಕು, ಏಕೆಂದರೆ ಎಸ್ಸೆಲ್ಸಿ ಯಲ್ಲಿ ಶೇಕಡ 90% ಅಂಕಗಳನ್ನು ತೆಗೆದವರು ಮಾತ್ರ ಮುಂದೆ ಸಾಧಿಸುತ್ತಾರೆಂಬುದೇನಿಲ್ಲ ಹಾಗೆಯೇ ಶೇಕಡ 60% ತೆಗೆದವರು ಜೀವನದಲ್ಲಿ ಕೆಳಗೆ ಬೀಳುತ್ತಾರೆ ಎಂಬುದು ಇಲ್ಲ,

ಜೀವನ ಪ್ರತಿಯೊಬ್ಬರಿಗೂ ಉತ್ತಮ ಅವಕಾಶಗಳನ್ನು ಕೊಡುತ್ತದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು,ಇಂದು 90% ತೆಗೆದವರು ನಾಳೆ ಗುಮಾಸ್ತನಾಗಬಹುದು ಹಾಗೂ 60% ತೆಗೆದವರು ಅಧಿಕಾರಿಯಾಗಬಹುದು,ಹಾಗಾಗಿಫಲಿತಾಂಶ ಹೇಗೆ ಬರಲಿಮಕ್ಕಳನ್ನು ನಾವು ಪ್ರೋತ್ಸಾಹಿಸೋಣ, ಜೀವನದಲ್ಲಿ ಅವರು ಯಾವುದಾದರೂ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಲು ಬೆನ್ನೆಲುಬಾಗಿ ನಿಲ್ಲೋಣಅಂಕಗಳು ಕಡಿಮೆ ಬಂದಿದೆ ಎಂದುಮಕ್ಕಳನ್ನು ನಿಂದಿಸುತ್ತಾ ಹೋದರೆ ಅವರು ತಮ್ಮ ಮೇಲೆ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆಪೋಷಕರು ಮಕ್ಕಳನ್ನು ಇನ್ನೊಬ್ಬರೊಂದಿಗೆ ಹೋಲಿಸದೆ ಮತ್ತು ಇತರರು ಏನು ತಿಳಿದುಕೊಳ್ಳುತ್ತಾರೆ ಎಂದು ಯೋಚಿಸದಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವಂತೆ ನಡೆದುಕೊಳ್ಳಬೇಕುಅಂಕಗಳು ಏನೇ ಬರಲಿ ಅವರ ಬುದ್ಧಿವಂತಿಕೆಗೆ ಮತ್ತು ಪ್ರಯತ್ನಕ್ಕೆ ನಾವುಶಹಬಾಸ್ ಹೇಳೋಣನಾಳೆಯ ಯಶಸ್ಸಿಗೆ ಕಾರಣರಾಗೋಣ.               

ಡಾ. ಪಿ ವೈ ಇಮಾನ್ಯುವಲ್ 
(ಶಿಕ್ಷಕರು ಹಾಗೂ ಸಾಹಿತಿಗಳು)

Post a Comment

0Comments

Post a Comment (0)