ಡಿಬಿಟಿ ಮೂಲಕ ನೇರ ನಗದು ವರ್ಗಾವಣೆಗೆ ಉಪ ಸಮಿತಿ ರಚನೆ

varthajala
0

 ಬೆಂಗಳೂರು, ಮೇ 06 (ಕರ್ನಾಟಕ ವಾರ್ತೆ):

ಎಲ್ಲಾ ಫಲಾನುಭವಿ ಯೋಜನೆಗಳನ್ನು ಡಿಬಿಟಿ ಯೋಜನೆಯ ಮೂಲಕ ಅನುಷ್ಠಾನಗೊಳಿಸಲು ಮತ್ತು ಸೂಕ್ತ ಮೇಲ್ವಿಚಾರಣೆ ಕೈಗೊಳ್ಳಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ-ಆಡಳಿತ)ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಉಪಸಮಿತಿಯನ್ನು ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.
ಸಮಿತಿಯಲ್ಲಿ ಖಜಾನೆ ಇಲಾಖೆಯ ಆಯುಕ್ತರು, ಇ-ಆಡಳಿತ ಕೇಂದ್ರದ ಮುಖ್ಯ ನಿರ್ವಹಣಾಧಿಕಾರಿ, ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು, ಆರ್ಥಿಕ ಇಲಾಖೆ (ಬಿ&ಆರ್) ಉಪಕಾರ್ಯದರ್ಶಿ, ಬೆಂಗಳೂರು ಯುಐಡಿಎಐ ನ ಪ್ರಾದೇಶಿಕ ಅಧಿಕಾರಿ, ಬೆಂಗಳೂರು ಎಸ್‍ಎಲ್‍ಬಿಸಿ ಸಂಚಾಲಕರು, ಯೋಜನಾ ಇಲಾಖೆಯ ಪಿಎಂಐ ವಿಭಾಗದ ನಿರ್ದೇಶಕರು, ಖಜಾನೆ-2ರ ಯೋಜನಾ ನಿರ್ದೇಶಕರು ಸದಸ್ಯರಾಗಿರುತ್ತಾರೆ.
ಇಡಿಸಿಎಸ್‍ನ ನಿರ್ದೇಶಕರು ಆಹ್ವಾನಿತರಾಗಿದ್ದು, ಇ-ಆಡಳಿತ ಕೇಂದ್ರ ಡಿಬಿಟಿ ಕೋಶದ ಯೋಜನಾ ನಿರ್ದೇಶಕರು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.  
ಈ ಉಪಸಮಿತಿಯು ಕಾಲಕಾಲಕ್ಕೆ ಸಭೆ ನಡೆಸಿ ಎಲ್ಲಾ ಫಲಾನುಭವಿ ಯೋಜನೆಗಳನ್ನು ಡಿಬಿಟಿ ವೇದಿಕೆ ಮೂಲಕ ಕ್ರಮವಹಿಸುವುದು ಹಾಗೂ ಎಲ್ಲಾ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಲು ಅವಶ್ಯಕವಿರುವ ತೀರ್ಮಾನಗಳನ್ನು ತೆಗೆದುಕೊಳ್ಳಬಹುದು ಮತ್ತು ಸದರಿ ಉಪಸಮಿತಿಯಲ್ಲಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗದಂತಹ ಅಂಶಗಳನ್ನು ಸಲಹಾ ಮಂಡಳಿಯ ಮುಂದೆ ಮಂಡಿಸತಕ್ಕದ್ದು ಎಂದು ಆದೇಶದಲ್ಲಿ ತಿಳಿಸಿದೆ.
Tags

Post a Comment

0Comments

Post a Comment (0)