ಬೆಂಗಳೂರು, ಮೇ 17 (ಕರ್ನಾಟಕ ವಾರ್ತೆ) : ಕರ್ನಾಟಕ ರಾಜ್ಯ ಶಿಶು ಕಲ್ಯಾಣ ಸಂಸ್ಥೆ ಕಳೆದ 60 ವರ್ಷಗಳಿಂದ ಗ್ರಾಮೀಣ ಹಾಗೂ ನಗರ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಯುವತಿಯರು / ಮಹಿಳೆಯರಿಗೆ ವೃತ್ತಿಪರ ತರಬೇತಿ ನೀಡುತ್ತಿದ್ದು, 2024 ನೇ ಸಾಲಿನ ವೃತ್ತಿಪರ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಿದೆ.
ಎಸ್‍ಎಸ್‍ಎಲ್‍ಸಿ/ ಪಿಯುಸಿ ಪಾಸ್ ಅಥವಾ ಫೇಲ್ ಆದ 17 ರಿಂದ 35 ವರ್ಷದೊಳಗಿನ ಯುವತಿಯರು ಅರ್ಜಿ ಸಲ್ಲಿಸಬಹುದಾಗಿದ್ದು, ಮೇ 30 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.ತರಬೇತಿ ಪಡೆದ ಅಭ್ಯರ್ಥಿಗಳು ಬಾಲವಾಡಿ, ಶಿಶುವಿಹಾರ, ಹಗಲು ಪೆÇಷಣಾ ಕೇಂದ್ರ, ವಿಶೇಷ ಮಕ್ಕಳ ಶಾಲೆ, ಗಾಮೆರ್ಂಟ್ಸ್ ಕಂಪೆನಿಗಳಲ್ಲಿ ಶಾಲಾಪೂರ್ವ ಶಿಕ್ಷಕಿಯಾಗಿ ಕೆಲಸ ಮಾಡಲು ಅರ್ಹರಾಗುತ್ತಾರೆ. ಜೂನ್ 10 ರಿಂದ ಬೆಂಗಳೂರಿನ ಜಯಮಹಲ್ ಬಡಾವಣೆಯ ಬಾಲಸೇವಿಕಾ ತರಬೇತಿ ಕೇಂದ್ರದಲ್ಲಿ ತರಬೇತಿ ಆರಂಭವಾಗಲಿದೆ. ತರಬೇತಿ ಅವಧಿ 10 ತಿಂಗಳಾಗಿದ್ದು, ತರಬೇತಿಯು ಸಂಪೂರ್ಣ ಉಚಿತವಾಗಿದ್ದು, ಅವಶ್ಯಕತೆ ಇರುವವರಿಗೆ, ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಲಾಗುವುದು. ಅಭ್ಯರ್ಥಿಗಳಿಗೆ ವಿದ್ಯಾರ್ಥಿ ವೇತನ ಸಹ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಶಿಶು ಕಲ್ಯಾಣ ಸಂಸ್ಥೆ,
ಬಾಲಸೇವಿಕಾ ತರಬೇತಿ ಕೇಂದ್ರ,
ನಂ. 135, 3 ನೇ ಅಡ್ಡ ರಸ್ತೆ, ನಂದಿದುರ್ಗ ರಸ್ತೆ, ಜಯಮಹಲ್ ಬಡಾವಣೆ, ಬೆಂಗಳೂರು - 46 ಹಾಗೂ ದೂರವಾಣಿ ಸಂಖ್ಯೆ :080-23330846 / 22925898 ಗೆ ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.