ಕಶ್ಯಪಸುತ ಕವನಸಂಕಲನ ಲೋಕಾರ್ಪಣೆ

varthajala
0

ಸರಳ ಮತ್ತು ಮೌಲ್ಯಾಧಾರಿತ ರಚನೆಗಳೇ ಸಾಹಿತ್ಯದ ಸತ್ವ.

ಸತ್ಯಮೂರ್ತಿ ರಾವ್ (ಕಶ್ಯಪಸುತ) "ನುಡಿಗೆಜ್ಜೆ" ಚೊಚ್ಚಲ ಕವನ ಸಂಕಲನದ ಲೋಕಾರ್ಪಣೆ ಬನ್ನೇರುಘಟ್ಟ ರಸ್ತೆ "ಬಿಲ್ಲವ ಭವನ"ದಲ್ಲಿ ಜರುಗಿತು. ಮುಖ್ಯ ಅತಿಥಿ ಸಾಹಿತಿ ಜಿ.ವಿ ಅರುಣರವರು ಲೋಕಾಪ೵ಣೆಗೊಳಿಸಿ ಮಾತನಾಡುತ್ತ " ಕವನವೆನ್ನುವುದು ಕವಿಯ ಭಾವನೆಗಳನ್ನು ಸಹೃದಯರಿಗೆ ದಾಟಿಸುವ ಒಂದು ಸಾಧನ, ಲೇಖಕ ಸತ್ಯಮೂರ್ತಿರಾವ್‌ ಅವರ ನುಡಿ ಗೆಜ್ಜೆ ಚೊಚ್ಚಲ ಕೃತಿಯಲ್ಲಿ ತಮ್ಮ ಆರ್ದ ಮನದ ಭಾವನೆಗಳಿಗೆ ಒಳ್ಳೆಯ ಸ್ವರೂಪ ನೀಡಿದ್ದಾರೆ.

ಉತ್ತಮ ಕವನ ಸಂಕಲನವಾಗಿದೆ ಎಂದರು.  ವಿಶೇಷ ಅತಿಥಿಯಾದ ಡಿ ಐಜಿ ಶ್ರೀ ರಮೇಶ ಎಸ್‌ ಟಿಯವರು ಮಾತನಾಡುತ್ತಾ " ಲೇಖಕ ಶ್ರೀ ಸತ್ಯಮೂರ್ತಿರಾವ್‌ ಅವರು  ತಮ್ಮ 120 ಕವನಗಳಲ್ಲಿ ಆಯ್ದ 26 ಕವನಗಳನ್ನು ಕಶ್ಯಪಸುತ ಎಂಬ ಕಾವ್ಯನಾಮದಡಿಯಲ್ಲಿ "ನುಡಿ ಗೆಜ್ಜೆ" ಎಂದ ಹೆಸರಿನ ಪುಸ್ತಕವನ್ನು ಲೋಕಾರ್ಪಣೆ ಮಾಡಿದ್ದಾರೆ. ಅವರ ಕವನಗಳನ್ನು ಓದಿದಾಗ ಎರಡು ಭಾಗಗಳಾಗಿ ವಿಂಗಡಿಸಬಹುದು ಒಂದು ಭಾಗದಲ್ಲಿ ಮುಗ್ಧ ಮನಸಿನ ಭಾವನೆಗಳು ಅನಾವರಣಗೊಂಡರೆ ಮತ್ತೊಂದರಲ್ಲಿ  ಆ‍ಧ್ಯಾತ್ಮಿಕ ಭಾವನೆಗಳು ಹೊರಹೊಮ್ಮಿವೆ ಎಂದರು. ಸಂಗ್ರಹಕಾರ ಶ್ರೀ ನಾರಾಯಣ ಶಾನಭಾಗ್ ಉಪಸ್ಥಿತರಿದ್ದರು. ಯೋಗತಜ್ಞೆ ಶ್ರೀಮತಿ ವಂದನಾ ಹೆಗಡೆ ಅವರ ಸ್ವಾಗತ, ಕಲಾವಿದೆ ಶ್ರೀಮತಿ ಜ್ಯೋತಿ ಶಾನಭಾಗರವರಿಂದ ಪ್ರಾರ್ಥನೆ ನಡೆಸಿಕೊಟ್ಟರು.

Post a Comment

0Comments

Post a Comment (0)