ಬೆಂಗಳೂರು, ಮೇ 13 (ಕರ್ನಾಟಕ ವಾರ್ತೆ) : ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಮತ್ತು ಪರಿಸರ ಸಂಘ, ಬೆಂಗಳೂರು ಜಂಟಿಯಾಗಿ ‘ಭೂಮಿ ಮತ್ತು ಮಣ್ಣಿನ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳು” ಎಂಬ ಶೀರ್ಷಿಕೆಯಡಿಯಲ್ಲಿ ಜೂನ್ 8 ರಂದು ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರವನ್ನು ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕಾಡೆಮಿಯಲ್ಲಿ ಆಯೋಜಿಸಲಾಗಿದೆ.
ಈ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು (ಕನ್ನಡ ಮತ್ತು ಇಂಗ್ಲೀಷ್ 1000 ಪದಗಳಿಗೆ ಮೀರದಂತೆ) ನಡೆಸಲಾಗುತ್ತಿದೆ. ಪ್ರಬಂಧ ಸ್ಪರ್ಧೆಯನ್ನು ‘ಮಣ್ಣು ಮತ್ತು ಭೂಮಿಯ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳು’ Impacts of climate change on soil and land’ ಎಂಬ ವಿಷಯದ ಮೇಲೆ ಆಯೋಜಿಸಲಾಗುತ್ತಿದ್ದು, ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸುವ ವಿದ್ಯಾರ್ಥಿಗಳು ತಮ್ಮ ಹೆಸರು, ಇ-ಮೇಲ್, ಮೊಬೈಲ್ ನಂಬರ್, ಶಾಲೆಯ ಹೆಸರು, ಪ್ರಬಂಧದ ಭಾಷೆಯನ್ನು (ಕನ್ನಡ / ಆಂಗ್ಲ ಬಾಷೆ) ಅಕಾಡೆಮಿಯ ಇ-ಮೇಲ್ ಗೆ essay.ksta@gmail.com ಕಳುಹಿಸಿಕೊಡುವುದು.
ಪ್ರಬಂಧಗಳನ್ನು ಅಕಾಡೆಮಿಯ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕು. ಪ್ರಬಂಧ ಕಳುಹಿಸಲು ಮೇ 27 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ವೆಬ್‍ಸೈಟ್ https://kstacademy.in ಗೆ ಭೇಟಿ ನೀಡಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.