ಆರ್ಥಿಕ ಸದೃಢತೆಯತ್ತ ದಿ ಜನತಾ ಕೋ-ಆಪರೇಟೀವ್‌ ಬ್ಯಾಂಕ್‌

varthajala
0

17.05.2024 ರಂದು ನಡೆದ 

ದಿ ಜನತಾ ಕೋ-ಆಪರೇಟೀವ್ ಬ್ಯಾಂಕಿನ ಆರ್ಥಿಕ ಪ್ರಗತಿಯ ಬಗ್ಗೆ ಪ್ರಚುರಪಡಿಸಲು ಏರ್ಪಡಿಸಿದ  ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಬ್ಯಾಂಕಿನ ಅಧ್ಯಕ್ಷ ಸಿ.ಎಲ್.ಮರಿಗೌಡರವರು ಮಾತನಾಡಿದರು.

 ಬ್ಯಾಂಕು ಕೋವಿಡ್-19 ಹಾಗೂ ಇನ್ನಿತರ ಕಾರಣಗಳಿಂದಾಗಿ ಕಳೆದ 3 ವರ್ಷಗಳಿಂದ ರೂ.8.34 ಕೋಟಿ ಕ್ರೂಡೀಕೃತ ನಷ್ಟ ಅನುಭವಿಸಿದ್ದು ದಿನಾಂಕ:31.03.2024ಕ್ಕೆ ಅಂತ್ಯಗೊಂಡ ಆರ್ಥಿಕ ವರ್ಷದಲ್ಲಿ ಆದಾಯ ತೆರಿಗೆ ಹಾಗೂ ಇನ್ನಿತರೆ ಹೊಂದಾಣಿಕೆಗಳ ಮುನ್ನ ರೂ.12.83 ಕೋಟಿಗಳ ಲಾಭಗಳಿಸುವ ಮೂಲಕ ತನ್ನ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಂಡಿರುತ್ತದೆಇದು ಹಿಂದಿನ ಸಾಲಿಗೆ ಹೋಲಿಸಿದಾಗ ಶೇ.253% ರಷ್ಟು ವೃದ್ಧಿಯಾಗಿರುವುದು ಕಂಡುಬರುತ್ತದೆ. 2022-23ನೇ ಸಾಲಿನಲ್ಲಿದ್ದ ಶೇ.6.49% ರಷ್ಟು ಇದ್ದ ನಿವ್ವಳ ಅನುತ್ಪಾದಕ ಸಾಲಗಳ ಪ್ರಮಾಣವು 2023-24ನೇ ಸಾಲಿನ ಅಂತ್ಯಕ್ಕೆ ಶೇ.1.71% ಕ್ಕೆ ಇಳಿಕೆಯಾಗಿರುವುದು  ಬ್ಯಾಂಕಿನ ಆರ್ಥಿಕ ಸಧೃಢತೆಗೆ ಬಹುಮುಖ್ಯ ಕಾರಣವಾಗಿರುತ್ತದೆಬ್ಯಾಂಕು ಸಾಲ ಮತ್ತು ಮುಂಗಡಗಳ ಬೇಡಿಕೆಗೆ ಅನುಗುಣವಾಗಿ ತನ್ನ ಠೇವಣಿ ಬೆಳವಣಿಗೆಯ ಪ್ರಮಾಣವನ್ನು ನಿರ್ಭಂಧಿಸಿಕೊಳ್ಳುವ ಕೌಶಲ್ಯ ಪೂರಕ ನೀತಿಯಿಂದಾಗಿ ಅನಗತ್ಯ ಬಡ್ಡಿ ಹೊರೆಯನ್ನು ಕಡಿತಗೊಳಿಸಿರುವುದು ಸೇರಿದಂತೆ ಇನ್ನಿತರ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವ ಮೂಲಕ ತನ್ನ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯವಾಗಿರುತ್ತದೆಬ್ಯಾಂಕು ದಿನಾಂಕ:31.03.2024ಕ್ಕೆ 24089 ಸದಸ್ಯರನ್ನು ಹೊಂದಿದ್ದು ರೂ.33.00 ಕೋಟಿಗಳ ಷೇರು ಬಂಡವಾಳವನ್ನು ಹೊಂದಿರುತ್ತದೆ ಹಾಗೂ  ಮೇಲ್ಕಂಡ 24089 ಸದಸ್ಯರುಗಳ ಪೈಕಿ 3597 ಸದಸ್ಯರು ಸಾಲ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆಬ್ಯಾಂಕು 31.03.2024 ಅಂತ್ಯಕ್ಕೆ ರೂ.445.43 ಸಾಲ ವಿತರಿಸಿದ್ದು ಆದ್ಯತಾ ವಲಯಕ್ಕೆ ರೂ.157.35 ಕೋಟಿಗಳ ಸಾಲ ನೀಡಲಾಗಿದೆ ಇದರಲ್ಲಿ ಎಂ.ಎಸ್.ಎಂ. ವಲಯಕ್ಕೆ ರೂ.130.72 ಕೋಟಿಹಿಂದುಳಿದ ವರ್ಗಗಳಿಗೆ ರೂ.16.72 ಕೋಟಿಗಳ ಸಾಲ ನೀಡಲಾಗಿದೆ ಹಾಗೂ ಬ್ಯಾಂಕು ಒಟ್ಟಾರೆಯಾಗಿ ರೂ.742.55 ಕೋಟಿಗಳ ಠೇವಣಿ ಸಂಗ್ರಹಿಸಿದ್ದುಗರಿಷ್ಟ ಶೇ.7.10  ಬಡ್ಡಿದರ ನೀಡಲಾಗುತ್ತಿದೆ (ಹಿರಿಯ ನಾಗರೀಕರಿಗೆ ಶೇ.7.60) ಬ್ಯಾಂಕು ಸಾಲಗಳ ಮೇಲೆ ಕನಿಷ್ಟ ಶೇ.8.00 ಬಡ್ಡಿ ವಿಧಿಸುತ್ತಿದ್ದು ಸಾಲದ ಉದ್ದೇಶಗಳಿಗನುಗುಣವಾಗಿ ಸಾಲದ ಬಡ್ಡಿದರವು ಬದಲಾಗುತ್ತದೆಭಾರತೀಯ ರಿಸರ್ವ್ ಬ್ಯಾಂಕ್ ನಿಗಧಿಪಡಿಸಿರುವ ಕನಿಷ್ಟ ಸಿ.ಆರ್..ಆರ್  ಪ್ರಮಾಣ ಶೇ.12 ಇದ್ದು ಬ್ಯಾಂಕು ಶೇ.15.76 ಸಿ.ಆರ್..ಆರ್  ಪ್ರಮಾಣ ಹೊಂದಿರುವುದು ಆರ್ಥಿಕ ಸದೃಢತೆಯನ್ನು ತೋರಿಸುತ್ತದೆ. 2014ರಲ್ಲಿ ಸುವರ್ಣ ಮಹೋತ್ಸವ ಆಚರಿಸಿದ್ದು, 2024 ಸಾಲಿನಲ್ಲಿ ಅಮೃತ ಮಹೋತ್ಸವ ಆಚರಿಸುವ ನಿರೀಕ್ಷೆಯಲ್ಲಿದೆ.

ಬೆಂಗಳೂರುನಗರದ ಮಲ್ಲೇಶ್ವರಂ 8ನೇ ಮುಖ್ಯರಸ್ತೆಯಲ್ಲಿ 1964ನೇ ಇಸವಿಯಲ್ಲಿ ಸ್ಥಾಪನೆಯಾದ ಬ್ಯಾಂಕು ತನ್ನದೇ ಆದ ಸ್ವಂತ ಕಟ್ಟಡದಲ್ಲಿ ಆಡಳಿತ ಕಛೇರಿ ಹೊಂದಿ ಒಟ್ಟು 7 ಶಾಖೆಗಳನ್ನು ಹೊಂದಿರುತ್ತದೆ.  ಇದೇ ಕಟ್ಟಡದಲ್ಲಿ ಮಲ್ಲೇಶ್ವರಂ ಶಾಖೆಯನ್ನು

ಒಳಗೊಂಡಿರುತ್ತದೆಪಶ್ಚಿಮ ಕಾರ್ಡ್ ರಸ್ತೆ ಶಾಖೆ-ಮೋದಿ ಕಣ್ಣಿನ ಆಸ್ಪತ್ರೆ ಹತ್ತಿರಗೋವಿಂದರಾಜನಗರ ಶಾಖೆ -ಬಸವೇಶ್ವರನಗರಕರ್ನಾಟಕ ಹೌಸಿಂಗ್ ಬೋರ್ಡ್ ಕಾಲೋನಿ ಹತ್ತಿರಅಮರಜ್ಯೋತಿನಗರ ಶಾಖೆ-ನಾಗರಭಾವಿ ಮುಖ್ಯರಸ್ತೆಮಾರುತಿನಗರಸಹಕಾರನಗರ ಶಾಖೆ-ಸಹಕಾರನಗರಹೆಸರಘಟ್ಟ ಮುಖ್ಯರಸ್ತೆ ಶಾಖೆ-ಎಂ.. ಲೇಔಟ್ಸುಂಕದಕಟ್ಟೆ ಶಾಖೆ-ಭರತ್ನಗರ ಇಲ್ಲಿ ಶಾಖಾ ಕಛೇರಿಗಳನ್ನು ಹೊಂದಿದ್ದು ಗ್ರಾಹಕರು/ಸದಸ್ಯರು ಬ್ಯಾಂಕಿನ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ಕೋರಲಾಗಿದೆ.

ಆಡಳಿತ ಮಂಡಳಿಯ ದೂರದೃಷ್ಠಿಯ ಫಲವಾಗಿ ಬ್ಯಾಂಕಿನ ಸ್ವಂತ ಬಂಡವಾಳ ಮತ್ತು ಇತರೆ ಅವಕಾಶಗಳು  ವೃದ್ಧಿಯಾಗಿ 2020 ರಲ್ಲಿದ್ದ ರೂ.89.38 ಕೋಟಿಗಳ ಸ್ವಂತ ಬಂಡವಾಳ ಮತ್ತು ಇತರೆ ಅವಕಾಶಗಳು ದಿನಾಂಕ:31.03.2024ಕ್ಕೆ  ರೂ.147.68 ಕೋಟಿಗಳಿಗೆ ಏರಿಕೆಯಾಗಿದೆ ಇದು ಶೇಕಡವಾರು 65ರಷ್ಟು ಏರಿಕೆ ಕಂಡಿರುತ್ತದೆ.

ಬ್ಯಾಂಕಿನ ಸಕಾರಾತ್ಮಕ ಬೆಳವಣಿಗೆಯಲ್ಲಿ ಪ್ರಜ್ಞಾವಂತ ಸದಸ್ಯರ ಹಾಗೂ ಠೇವಣಿದಾರರ ಸಹಕಾರ ಮಹತ್ವ ಪೂರ್ಣ ಪಾತ್ರ ವಹಿಸಿದೆ ಎಂದರೆ ತಪ್ಪಾಗಲಾರದು.


Post a Comment

0Comments

Post a Comment (0)