ಸೇಡಂನ ದಾಸಧೇನು ಟ್ರಸ್ಟ್ ವತಿಯಿಂದ ಡಾ.ಆರ್ ವಾದಿರಾಜು ದಂಪತಿಗಳಿಗೆ 'ದಾಸಧೇನು ದಂಪತಿ - 2024 'ಪ್ರಶಸ್ತಿ ಪ್ರದಾನ.
ಬೆಂಗಳೂರಿನ ಚಾಮರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿರುವ ಕುವೆಂಪು ಸಭಾಂಗಣದಲ್ಲಿ ಗಿರಿನಗರದ ಸ್ನೇಹಕೂಟ ಸಾಂಸ್ಕೃತಿಕ ವೇದಿಕೆ ಹಾಗೂ ಸೇಡಂನ ದಾಸಧೇನು ಟ್ರಸ್ಟ್ ಸಹಯೋಗದಲ್ಲಿ ಪ್ರಾಧ್ಯಾಪಕ ಲೇಖಕ ವಿಮರ್ಶಕ ಡಾ. ಆರ್ ವಾದಿರಾಜು ಮತ್ತು ಶ್ರೀಮತಿ ಲಕ್ಷ್ಮಿ ರವರಿಗೆ ದಾಸಧೇನು ಟ್ರಸ್ಟ್ ವತಿಯಿಂದ ಕೊಡ ಮಾಡುವ 'ದಾಸಧೇನು ದಂಪತಿ -2024 ' ಪ್ರಶಸ್ತಿಯನ್ನು ಅಂತರಾಷ್ಟ್ರೀಯ ಖ್ಯಾತಿಯ ಹರಿದಾಸ ವಿದ್ವಾಂಸ ಅರಳುಮಲ್ಲಿಗೆ ಪಾರ್ಥಸಾರಥಿ ಪ್ರಧಾನ ಮಾಡಿ ಮಾತನಾಡುತ್ತಾ ಕನ್ನಡ ಸಾಹಿತ್ಯದಲ್ಲಿ 25ಕ್ಕೂ ಹೆಚ್ಚು ಕೃತಿಗಳನ್ನು ನೀಡಿರುವ ವಿಶಿಷ್ಟ ಸಾಹಿತ್ಯ ಸಾಧಕರು ಜನಪ್ರಿಯ ಪ್ರಾಧ್ಯಾಪಕರು,ಉತ್ತಮ ವಾಗ್ಮಿಗಳು, ಶ್ರೇಷ್ಠ ಸಂಘಟಕರು,ವಿದ್ಯೆ -ವಿನಯ- ವಿವೇಕ -ಪಾಂಡಿತ್ಯ ಪ್ರತಿಭೆಗಳ ಸಂಗಮ ಡಾ. ವಾದಿರಾಜರವರ ಸಾಂಸ್ಕೃತಿಕ ಪರಿಚಾರಿಕೆಯನ್ನು ಗುರುತಿಸಿ ಈ ಪ್ರಶಸ್ತಿ ಸಂದಾಯವಾಗಿರುವುದು ಅವರ ಕ್ರಿಯಾಶೀಲತೆಗೆ ಮತ್ತೊಂದು ಗರಿ ಎಂದು ಅಭಿಪ್ರಾಯ ಪಟ್ಟರು .