ಸ್ವಲಾಭದ ಜೊತೆಗೆ ಸಾಮಾಜಿಕ ಕಳಕಳಿಯೂ ಉದ್ಯಮದ ಭಾಗವಾಗಬೇಕು

varthajala
0

 ಬೆಂಗಳೂರು: ನಗರದ ಬ್ಯಾಟರಾಯನಪುರದಲ್ಲಿ ವಾಣಿಜ್ಯ ಉದ್ದೇಶಕ್ಕೆ ನಿರ್ಮಿಸಲಾಗಿರುವ ಸೂರ್ಯ ಹೈಟ್ಸ್ ಕಟ್ಟಡವನ್ನು ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಮಠದ ಶಿವಮೂರ್ತಿ ಶಿವಚಾರ್ಯ ಸ್ವಾಮೀಜಿಗಳು ಉದ್ಘಾಟಿಸಿದರು. ಈ ವೇಳೆ ಸಿರಿಗೆರೆ ಮಠದ ಸ್ವಾಮೀಜಿಗಳು ಮಾತನಾಡಿ, ಈ ಕಟ್ಟಡ ನಿರ್ಮಿಸಿದ ವಿಶ್ವನಾಥ ಕೇವಲ ಸ್ವಲಾಭವನ್ನು ಮಾತ್ರ ಯೋಚಿಸದೆ ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಮುಂದಿನ ವಿಲ್ಲಾ ಯೋಜನೆ ಯಶಸ್ವಿಯಾಗಲಿ ಮತ್ತು ಅವರಿಂದ ಇನ್ನಷ್ಟು ಬೃಹತ್ ಕಾರ್ಯಗಳಾಗಲಿ ಎಂದು ಹಾರೈಸಿದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಲಾಭದ ಜೊತೆಗೆ ವಿಶ್ವಾಸರ್ಹತೆ ಗಳಿಸಿದರೆ ಮೌಲ್ಯ ಹೆಚ್ಚಾಗುತ್ತದೆ. ಅದನ್ನು ಸೂರ್ಯ ಹೈಟ್ಸ್ ನ ವಿಶ್ವನಾಥ ಸಾಧಿಸಿ ತೋರಿಸಿದ್ದಾರೆ. ಸಮುದಾಯದ ಆರೋಗ್ಯ ಸುಧಾರಿಸುವ ಆಸ್ಪತ್ರೆಗಳಿಗೆ ಕಟ್ಟಡ ನಿರ್ಮಿಸಿ ನೀಡುತ್ತಿರುವುದು ನಿಜಕ್ಕೂ ಪ್ರಶಂಸನಾರ್ಹ. ನಿಮ್ಮ ಪ್ರಯತ್ನಗಳಲ್ಲಿ ಪ್ರಾಮಾಣಿಕತೆ ಇದೆ. ನಿಮ್ಮ ಬೆಳವಣಿಗೆ ಆ ಸೂರ್ಯನಷ್ಟೇ ಎತ್ತರಕ್ಕೆ ಬೆಳೆಯಲಿ. ಈ ಕಾರ್ಯದಲ್ಲಿ ಶ್ರೀಗಳು ಪಾಲ್ಗೊಂಡಿದ್ದು, ವಿಶ್ವನಾಥ ಅವರ ನ್ಯಾಯ, ಧರ್ಮದ ಸಂಕೇತ ಎಂದರು.
                               

ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಶಿವರಾಜ್ ವಿ ಪಾಟೀಲ್, ಬೆಂಗಳೂರು ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತಿದೆ. ಆ ಮೂಲಕ ನೂರೆಂಟು ಅವಕಾಶಗಳನ್ನ ತೆರೆದಿಡುತ್ತಿದೆ. ಈ ಅವಕಾಶವೇ ಇಂದು ಈ ಕಟ್ಟಡ ಎದ್ದು ನಿಲ್ಲುವುದಕ್ಕೆ ಕಾರಣವಾಗಿದೆ. ಒಂದು ಕಟ್ಟಡದ ನಿರ್ಮಾಣದ ಹಿಂದೆ ಅನೇಕರ ಶ್ರಮವಿರುತ್ತದೆ. ಆ ಮೂಲಕ ಅಷ್ಟು ಜನಕ್ಕೂ ಉದ್ಯೋಗಕ್ಕೆ ಅವಕಾಶವಾಗಿದೆ. ಇದೊಂದು ಅತ್ಯುತ್ತಮ ಪ್ರಯತ್ನ ಎಂದು ಹೇಳಿದರು.

ಮೌಲ್ಯ ಮತ್ತು ಬದ್ಧತೆಯೊಂದಿಗೆ ಉದ್ಯಮ ಆರಂಭಿಸಿದ್ದೇನೆ. ನಮ್ಮ ವಿಲ್ಲಾಗಳನ್ನು ಬುಕ್ ಮಾಡಿಕೊಳ್ಳುವ ಆರ್ಮಿ, ಏರ್ ಫೋರ್ಸ್ ನವರಿಗೆ ನೋಂದಣಿಯಲ್ಲಿ ವಿಶೇಷ ರಿಯಾಯಿತಿ ಕೊಡುವ ನಿರ್ಧಾರ ಮಾಡಿದ್ದೀವಿ. ಸೂರ್ಯ ಡೆವಲಪರ್ಸ್ ಸದಾ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುವುದಕ್ಕೆ ಬದ್ಧವಾಗಿರುತ್ತದೆ ಎಂದು ಸೂರ್ಯ ಡೆವಲಪರ್ಸ್ ನ ಸಂಸ್ಥಾಪಕರು ಹಾಗೂ ವ್ಯವಸ್ಥಾಪಕ ಪಾಲುದಾರರಾದ ವಿಶ್ವನಾಥ ಬಾತಿ ತಿಳಿಸಿದರು.

ಎಸ್ ಎಸ್ ಮಲ್ಲಿಕಾರ್ಜುನ (ಗಣಿ ಮತ್ತು ಭೂವಿಜ್ಞಾನ ಮತ್ತು ತೋಟಗಾರಿಕೆ ಸಚಿವರು, ಕರ್ನಾಟಕ ಸರ್ಕಾರ) ಮತ್ತು ಬೈರತಿ ಸುರೇಶ್ (ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರು, ಕರ್ನಾಟಕ ಸರ್ಕಾರ) ಅವರು ಕಾರ್ಯಕ್ರಮಕ್ಕೆ ಆಗಮಿಸಿ ವಿಶ್ವನಾಥ್ ಬಾತಿ ಅವರಿಗೆ ಶುಭಕೋರಿದರು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಮೀಡಿಯಾ ಕನೆಕ್ಟ್, 7975253201

Post a Comment

0Comments

Post a Comment (0)