ಕಸ್ತೂರಿ ಚಂದನವನ ವಾರ್ಷಿಕೋತ್ಸವದ ಚಿತ್ರ ಮತ್ತು ವರದಿ

varthajala
0

 'ಬರಹಗಾರರು ಅಧ್ಯಯನಶೀಲರಾಗಬೇಕು'

 ಬರಹಗಾರರಿಗೆ ಅಧ್ಯಯನಶೀಲತೆ ಮುಖ್ಯ '

ಅಂಕಣಕಾರ ಮಾಧ್ಯಮ ಸಂಯೋಜಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅಭಿಮತ 

 ಕಸ್ತೂರಿ ಚಂದನವನ ಸಾಮಾಜಿಕ ಜಾಲತಾಣ ಮುಖಪುಟದ ಸಾಹಿತ್ಯ ಆಸಕ್ತರ ನಂದನವನದ ಲೇಖಕರ ಸಮ್ಮೇಳನ ವಾರ್ಷಿಕೋತ್ಸವ ವನ್ನು ಬೆಂಗಳೂರು ಡಿವಿಜಿ ರಸ್ತೆಯ ಅಬಲಾಶ್ರಮದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
                           
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಂಕಣಕಾರ ಮಾಧ್ಯಮ ಸಂಯೋಜಕ ಡಾ ಗುರುರಾಜ ಪೋಶೆಟ್ಟಿಹಳ್ಳಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಮಾನವ ಸಂವಹನದ ಒಂದು ಶಕ್ತಿಯುತ ಮಾಧ್ಯಮ ಬರವಣಿಗೆ,ಸೃಜನಶೀಲವಾಗಿ ಬರೆಯುವುದು ಒಂದು ಕಲೆ.ಪ್ರತಿಯೊಂದು ವಿಷಯವನ್ನು ಹೊಸ ಬಗೆಯಲ್ಲಿ ಹೇಳುವ ನಮ್ಮ ಅಸ್ಮಿತೆಯನ್ನು ಪಾರಂಪರಿಕ ಸಾಂಸ್ಕೃತಿಕ ನೆಲೆಗೆ ಒಯ್ಯುವ ವಿಶಿಷ್ಟ ಪ್ರಯತ್ನವನ್ನು ಲೇಖಕರು ಮಾಡುತ್ತಾ ಓದುಗರನ್ನು ಸೆಳೆಯಲು ಅಧ್ಯಯನಶೀಲತೆ ಬಹಳ ಮುಖ್ಯ, ಪತ್ರಿಕೆಗಳಿಗೆ ಬರೆಯುವುದು ಅವಸರದ ಸಾಹಿತ್ಯವಾದರೂ ಬಹುಮುಖಿ  ಆಯಾಮದಿಂದ ವಿಚಾರವವನ್ನು ಪ್ರಸ್ತುತಪಡಿಸುತ್ತ ಆತ್ಮ ಸಂತೋಷವನ್ನು  ಲೇಖಕರು ಕಾಣುವಂತಾಗಬೇಕು  ಎಂದು ಅಭಿಪ್ರಾಯ ಪಟ್ಟರು.
                            
ಕಸ್ತೂರಿ ಚಂದನವನ ವಾರ್ಷಿಕೋತ್ಸವಕ್ಕೆ ಅತಿಥಿಗಳಿಂದ ಮತ್ತು ನಿರ್ವಾಹಕ  ತಂಡದಿಂದ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು
 ಮತ್ತೋರ್ವ ಅತಿಥಿ ಶ್ರೀಮತಿ ಮಧುರಾ ಕರಣಂ  - ಗದ್ಯ ಸಾಹಿತ್ಯ ರಚನೆ ಕುರಿತು ಮಾತನಾಡಿದರು.  
                            

ಗುಂಪಿನ ಸದಸ್ಯರು ರಚಿಸಿದ ಹಾಡನ್ನು ಹಾಡಿದರು, ಹಾಸ್ಯ ರಸ ಕಾರ್ಯಕ್ರಮ ಮತ್ತು ಕೋಲಾಟ ನೃತ್ಯಗಳೊಂದಿಗೆ ಮನ ರಂಜಕ ಕಾರ್ಯಕ್ರಮಗಳು ಜರುಗಿದವು  ತಂಡದ ಸದಸ್ಯರಿಂದ  ಸಾಂಸ್ಕೃತಿಕ ಕಾರ್ಯಕ್ರಮಗಳು  ವಾರ್ಷಿಕೋತ್ಸವದ  ಕಾರ್ಯಕ್ರಮದಲ್ಲಿ ಭಾಗವಹಿಸಿ ಗದ್ಯ ಪದ್ಯ ಚಟುವಟಿಕೆಗಳಲ್ಲಿ ಪ್ರಶಸ್ತಿ ಪಡೆದವರಿಗೆ ಪ್ರಶಸ್ತಿ ಪತ್ರ ಪ್ರದಾನ ಮಾಡಲಾಯಿತು.
ಅತ್ಯುತ್ತಮ ಸಾಹಿತ್ಯ ಮತ್ತು ಸಂಸ್ಕೃತಿ ಸಮ್ಮಿಲನದ ಕಾರ್ಯಕ್ರಮ ಜರುಗಿತು.

Post a Comment

0Comments

Post a Comment (0)