ಆರ್.ಜಯಕುಮಾರ್ ಮತ್ತು ಕೆ.ಲಕ್ಷ್ಮಣ ಅವರಿಗೆ ಕೆ.ಯೂ.ಡಬ್ಲ್ಯೂ.ಜೆ.ಯಿಂದ ಶ್ರದ್ಧಾಂಜಲಿ

varthajala
0

 ಬೆಂಗಳೂರು: ಪತ್ರಕರ್ತರು ಅರ್ಪಣಾ ಮನೋಭಾವದೊಂದಿಗೆ ಕರ್ತವ್ಯ ನಿರ್ವಹಿಸಿದರೆ, ಅವರ ವ್ಯಕ್ತಿತ್ವಕ್ಕೆ ಮನ್ನಣೆ ದೊರೆಯುತ್ತದೆ. ಆ ಮೂಲಕ ಅವರ ಹೆಸರು ಸಮಾಜದಲ್ಲಿ ಸ್ಥಿರಸ್ಥಾಯಿಯಾಗಿ ನಿಲ್ಲಲು ಸಾಧ್ಯ ಎಂದು ಪ್ರಜಾವಾಣಿ ಹಿರಿಯ ಪತ್ರಕರ್ತ ರಾಜಾ ಶೈಲೇಶ್ ಚಂದ್ರ ಗುಪ್ತಾ ಅಭಿಪ್ರಾಯಪಟ್ಟರು. ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆ.ಯೂ.ಡಬ್ಲ್ಯೂ.ಜೆ) ಏರ್ಪಡಿಸಿದ್ದ ಆರ್.ಜಯಕುಮಾರ್ ಹಾಗೂ ಕೆ.ಲಕ್ಷ್ಮಣ್ ಅವರ ಶ್ರದ್ಧಾಂಜಲ್ಲಿ ಸಭೆಯಲ್ಲಿ ಮಾತನಾಡಿದರು.

ಬಹಳಷ್ಟು ಪತ್ರಕರ್ತರು ಚಳುವಳಿಯ ವಿವಿಧ ಆಯಾಮಗಳ ಮೂಲಕ ಪತ್ರಿಕೋದ್ಯಮ ಪ್ರವೇಶಿಸಿದ್ದು ನಮ್ಮ ನಾಡಿನ ಅದೃಷ್ಟ. ಆರ್. ಜಯಕುಮಾರ್ ಎಂದೂ ಕೂಡಾ ತಮ್ಮ ನಂಬಿದ ಸಿದ್ಧಾಂತದ ಜೊತೆ ರಾಜಿಯಾದವರಲ್ಲ. ಆ ಕಾರಣಕ್ಕಾಗಿಯೇ ಅವರು ವಿಶಿಷ್ಟ ಪತ್ರಕರ್ತರೆನಿಸಿಕೊಂಡರು ಎಂದೂ ಅವರು ಹೇಳಿದರು.  ಹಿರಿಯ ಪತ್ರಕರ್ತರಾದ ಕಂ.ಕ.ಮೂರ್ತಿ ಮಾತನಾಡಿ, ಗಟ್ಟಿಯಾದ ನಿಲುವು ಮತ್ತು ಕಾಳಜಿಗಳನ್ನು ಹೊಂದಿದ್ದ ಜಯಕುಮಾರ್ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡರು.

ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಮಾತನಾಡಿ, ಚಳವಳಿ ಮೂಲಕವೇ ನಮ್ಮೆಲ್ಲರನ್ನು ಪ್ರೇರೇಪಿಸಿದ್ದ ಜಯಕುಮಾರ್ ಅವರ ಬದುಕೇ ಒಂದು ಹೋರಾಟವಾಗಿತ್ತು ಎಂದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಆರ್. ಜಯಕುಮಾರ್ ತಮ್ಮ ಪ್ರಖರ ಬರವಣಿಗೆಯ ಮೂಲಕ್ ಜನಪ್ರಿಯರಾದವರು, ನಿರ್ಭೀತಿಯಿಂದ ಪತ್ರಿಕೋದ್ಯಮದಲ್ಲಿ ಉತ್ತಮ್ ಹೆಸರನ್ನು ಸಂಪಾದಿಸಿಕೊಂಡವರು ಎಂದರು.

ಡಾ. ಲೀಲಾ ಸಂಪಿಗೆ ಅವರು ಮಾತನಾಡಿ ತಮ್ಮ ಪತಿ ಜಯಕುಮಾರ್ ಜನಪರ ಕಾಳಜಿಯುಳ್ಳವರಾಗಿದ್ದರು. ಅಂಥವರನ್ನು ಪಡೆದದ್ದು ತನ್ನ ಅದೃಷ್ಟ ಅವರೊಬ್ಬ ಮಾದರಿ ವ್ಯಕ್ತಿತ್ವದವರಾಗಿದ್ದರು ಎಂದು ಜೀವಿತ ಕಾಲದಲ್ಲಿನ ಸಾಮಾಜಿಕ ಕಳಕಳಿ, ದಾಂಪತ್ಯ ಜೀವನದ ಸಿಹಿ- ಕಹಿ ಅನುಭವಗಳನ್ನು ಹಂಚಿಕೊಂಡರು.
                     
ನುಡಿನಮನ ಕಾರ್ಯಕ್ರಮದಲ್ಲಿ ಈ.ಬಸವರಾಜ್, ಎಸ್.ಆರ್.ಆರಾಧ್ಯ, ಬೋಪಯ್ಯ ಚಾವಂಡ, ನಗರ ಘಟಕದ ಶಿವರಾಜ್, ಕೆಯುಡಬ್ಲ್ಯೂಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ ಖಜಾಂಚಿ ಎಂ. ವಾಸುದೇವ ಹೊಳ್ಳ ಮಾತನಾಡಿದರು.

ನಗರ ಘಟಕದ ಅಧ್ಯಕ್ಷ ಸತ್ಯನಾರಾಯಣ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೇಕಟ್ ಮುಂತಾದವರು ಹಾಜರಿದ್ದರು.

Shivananda Tagaduru
8884431995, 9845087374

Post a Comment

0Comments

Post a Comment (0)