ರಾಜ್ಯದಲ್ಲಿ ಕಳೆದ ಎಂಟು ತಿಂಗಳಿಂದ ಬಿರು ಬೇಸಿಗೆಯ ಬೆನ್ನಲ್ಲೇ ಈಗ ಮುಂಗಾರು ಪೂರ್ವ ಮಳೆ ಸಾಕಷ್ಟು ಪ್ರಮಾಣದಲ್ಲಿ ಸುರಿಯುತ್ತಿದೆ. ಒಂದು ಕಡೆ ಭೂಮಿ ಹದ ಮಾಡಿಕೊಳ್ಳಲು ರೈತರಿಗೆ ಅನುಕೂಲ ಮಾಡಿಕೊಟ್ಟಿರುವ ಮಳೆರಾಯನಿಗೆ ರೈತರು ಧನ್ಯವಾದ ತಿಳಿಸಿದ್ದಾರೆ. ಇನ್ನೊಂದು ಕಡೆ ಹಲವಾರು ಜಿಲ್ಲೆಗಳಲ್ಲಿ ಕೃಷಿಕರು ಉಳುಮೆ ಮಾಡಿ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಏನು ಕೆಲವೇ ದಿನಗಳಲ್ಲಿ ಬೀಜ, ರಸಗೊಬ್ಬರ ಖರೀದಿ ಮಾಡಬೇಕು. ಅದಕ್ಕೆ ಹಣ ಬೇಕು. ಇಂತಹ ಸಂದರ್ಭದಲ್ಲಿ ದೇವರೇ ಕಂಟ್ರಿ ದಂತೆ ರಾಜ್ಯ ಸರ್ಕಾರ ಕಾನೂನಿನ ಮೊರೆ ಹೋಗಿ ಕೇಂದ್ರ ಸರ್ಕಾರದ ಬರ ಪರಿಹಾರದ ಹಣ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ 3454 ಕೋಟಿ ರೂ.ಗಳನ್ನು ರಾಜ್ಯ ಖಜಾನೆಗೆ ತೆಗೆದುಕೊಂಡು ಬಂದಿದ್ದಾರೆ. ಇನ್ನು ಕಾನೂನು ಹೋರಾಟ ಹಣವನ್ನ ಪಡೆದ ರಾಜ್ಯ ಸರ್ಕಾರ ಯಾವುದೇ ಸಮಯ ವ್ಯರ್ಥ ಮಾಡಿಲ್ಲ ಇನ್ನು ಬ್ಯಾಂಕುಗಳ ಮೂಲಕ ರೈತರ ಖಾತೆಗೆ ಹಣ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಒಟ್ಟು 33 ಲಕ್ಷಕ್ಕೂ ಹೆಚ್ಚು ರೈತರಿಗೆ ಈ ಹಣ ಸಂದಾಯವಾಗಲಿದೆ.ಈ ಮಧ್ಯೆ, ಬ್ಯಾಂಕ್‌ಗಳು ಹಣವನ್ನು ರೈತರಿಗೆ ಪೂರ್ಣ ಪ್ರಮಾಣದಲ್ಲಿ ಸಂದಾಯ ಮಾಡುತ್ತಿಲ್ಲ ಎಂಬ ಕೂಗು ಬಲವಾಗಿ ಕೇಳಿಬರುತ್ತಿದೆ ಬ್ಯಾಂಕ್ ಗಳು ಹೀಗೆ ಮಾಡಲು ಎರಡು ಕಾರಣಗಳಿವೆ. ಒಂದು, ರೈತರು ಈಗಾಗಲೇ ಅದೇ ಬ್ಯಾಂಕಿನಲ್ಲಿ ಮಾಡಿರುವ ಸಾಲ. ಇನ್ನೊಂದು, ರಾಜ್ಯ ಸರ್ಕಾರ ಈ ಮೊದಲೇ ರೈತರಿಗೆ ನೀಡಿತ್ತು ಎನ್ನಲಾದ 2 ಸಾವಿರ ರೂ. ಮುಂಗಡ ಹಣ. ಪ್ರತಿ ಬಾರಿಯೂ ಕೃಷಿ ಕಾರ್ಯಕ್ಕಾಗಿ ರೈತರು ಬ್ಯಾಂಕ್‌ಗಳಲ್ಲಿ ಸಾಲ ಮಾಡುವುದು, ಸಕಾಲಕ್ಕೆ ಅದನ್ನು ಮರುಪಾವತಿ ಮಾಡಲಾಗದೇ ಬಾಕಿ ಉಳಿಸಿಕೊಳ್ಳುವುದು ಹೊಸ ವಿಷಯವೇನಲ್ಲ. ಕಷ್ಟಪಟ್ಟು ಬೆಳೆ ಬೆಳೆದ ನಂತರವೂ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತವಾಗುವುದರಿಂದ, ಹೂಡಿಕೆ ಮಾಡಿದ ಹಣವೂ ವಾಪಸ್ ಬರದಂತಹ ಸ್ಥಿತಿಯಲ್ಲಿ ಬಹುತೇಕ ರೈತರು ಇದ್ದಾರೆ. ಉತ್ತಮ ರೀತಿಯಲ್ಲಿ ಮಳೆ-ಬೆಳೆಯಾದಾಗ ರೈತರು ಸಾಲ ಮರುಪಾವತಿ ಮಾಡಿಯೇ ಮಾಡಿರುತ್ತಾರೆ. ಕಳೆದ ವರ್ಷ ಬರಗಾಲ ಕಾಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ ಅದಕ್ಕಾಗಿಯೇ ಕೇಂದ್ರ ಸರ್ಕಾರ ಬರ ಪರಿಹಾರ ಮಂಜೂರು ಮಾಡಿದೆ. ಆ ಹಣವನ್ನು ಪೂರ್ತಿಯಾಗಿ ರೈತರಿಗೆ ನೀಡಬೇಕಾದದ್ದು ಬ್ಯಾಂಕುಗಳ ಕರ್ತವ್ಯ ಬಾಕಿ ಇರುವ ಸಾಲಕ್ಕೆ ಹೊಂದಾಣಿಕೆ ಮಾಡುವುದು ಅಕ್ಷಮ್ಯ.
ಇನ್ನೊಂದೆಡೆ, ಕೇಂದ್ರದ ಹಣ ಬರುವುದು ತಡವಾಯಿತೆಂದು ರಾಜ್ಯ ಸರ್ಕಾರವೇ ರೈತರಿಗೆ ನೀಡಿದ್ದ 2 ಸಾವಿರ ರೂ. ಮುಂಗಡವನ್ನು ಬ್ಯಾಂಕ್ ಗಳು ಈಗ ಮುರಿದುಕೊಳ್ಳುತ್ತಿವೆ ಎನ್ನಲಾಗಿದೆ. ಇದು ಸರಿಯಲ್ಲ. ಬ್ಯಾಂಕಿಂಗ್ ವಲಯದ ಇಂಥ ಅಮಾನವೀಯ ಕ್ರಮಗಳಿಗೆ ರಾಜ್ಯ ಸರ್ಕಾರ ಅಸ್ಪದ ಕೊಡಬಾರದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಬರ ಪರಿಹಾರದ ಹಣವನ್ನು ಬ್ಯಾಂಕ್‌ಗಳು ಪೂರ್ತಿಯಾಗಿ ರೈತರಿಗೆ ಪಾವತಿಸಬೇಕೆಂದು ರಾಜ್ಯ ಸರ್ಕಾರವೇ ಕಟ್ಟಪ್ಪಣೆ ಮಾಡಬೇಕು. ಜಿಲ್ಲಾಧಿಕಾರಿಗಳ ಮೂಲಕ ಬ್ಯಾಂಕ್‌ಗಳಿಗೆ ಸ್ಪಷ್ಟ ನಿರ್ದೇಶನ ಕೊಡಿಸಬೇಕು. ಇದರ ಹೊರತಾಗಿಯೂ ಬ್ಯಾಂಕ್‌ಗಳು ರೈತರ ಕಷ್ಟಕ್ಕೆ ಸ್ಪಂದಿಸದಿದ್ದರೆ ಅಂತಹ ಅಧಿಕಾರಿಗಳ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಬೇಕು.