ಬುಡಕಟ್ಟು ಸಮುದಾಯಕ್ಕೆ ವಿಧಾನಪರಿಷತ್ ಪ್ರಾತಿನಿಧ್ಯೆ, ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಅಲೆಮಾರಿ ಘಟಕ ರಚಿಸುವಂತೆ ಆಗ್ರಹ

varthajala
0

 ಬೆಂಗಳೂರು; ವಿಧಾನಸಭೆ, ಲೋಕಸಭೆ, ವಿಧಾನಪರಿಷತ್ ಚುನಾವಣೆಯಲ್ಲಿ ಬುಡಕಟ್ಟು ಸಮುದಾಯಕ್ಕೆ ಪ್ರಾತಿನಿಧ್ಯೆ ನೀಡದೇ ಅನ್ಯಾಯ ಮಾಡಲಾಗಿದ್ದು, ಮುಂಬರುವ ವಿಧಾನಪರಿಷತ್ ಚುನಾವಣೆಯಲ್ಲಿ ನಮ್ಮ ಸಮುದಾಯದವರನ್ನು ಗುರುತಿಸಿ ನಾಮನಿರ್ದೇಶನ  ಮಾಡಬೇಕು. ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಎಸ್.ಸಿ/ಎಸ್.ಟಿ, ಅಲೆಮಾರಿ ಘಟಕ ರಚಿಸುವಂತೆ ಎಸ್.ಸಿ/ಎಸ್.ಟಿ, ಅಲೆಮಾರಿ, ವಿಮುಕ್ತ ಬುಡಕಟ್ಟು ಒಕ್ಕೂಟ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಆದರ್ಶ್ ಎಲ್ಲಪ್ಪ, ಅವಕಾಶ ವಂಚಿತ ಅಲೆಮಾರಿ ಜಾತಿಗಳಿಗೆ ರಾಜಕೀಯ ಪಕ್ಷಗಳು ಆದ್ಯತೆ ನೀಡಬೇಕು. ರಾಜ್ಯದಲ್ಲಿ ಅವಕಾಶ ವಂಚಿತ 51-ಎಸ್ಸಿ, 23-ಎಸ್ಟಿ ಅಲೆಮಾರಿ ಜಾತಿಗಳಿದ್ದು, 25ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯಿದೆ. ಈ ಸಮುದಾಯವು ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಅತ್ಯಂತ ಹಿಂದುಳಿದಿದೆ ಎಂದರು.


ಪಾರಂಪರಿಕ ವೃತ್ತಿ ಅನುಸರಿಸುತ್ತಾ ಅಸಂಘಟಿತ ಸಮುದಾಯವಾಗಿರುವ ನಮಗೆ ರಾಜಕೀಯ ಪ್ರಾತಿನಿಧ್ಯ ನೀಡಿಲ್ಲ. ರಾಜ್ಯದಲ್ಲಿ ಯಾವುದೇ ಸಂಸದರು, ರಾಜ್ಯಸಭಾ ಸದಸ್ಯರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ/ತಾಲ್ಲೂಕು ಪಂಚಾಯತ್ ಅಧ್ಯಕ್ಷರು ಮತ್ತು ಕನಿಷ್ಠ ಪಕ್ಷ ಸದಸ್ಯರಾಗಿಲ್ಲ. ಕೆ.ಪಿ.ಎಸ್ಸಿ ಸದಸ್ಯತ್ವ ಗಗನ ಕುಸುಮವಾಗಿದೆ. ನಮ್ಮಲ್ಲಿ ಸಂಘಟಕರು, ವಿದ್ವಾಂಸರು, ತಜ್ಞರು, ಅನುಭವಿಗಳು ಇದ್ದರೂ ಸಹ, ನೇರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆ ಆಗಲು ಸಾಧ್ಯವಾಗುತ್ತಿಲ್ಲ ಎಂದರು.

ಇತ್ತೀಚೆಗೆ ಎಸ್ಸಿ/ಎಸ್ಟಿ ಅಲೆಮಾರಿ ಅಭಿವೃದ್ದಿ ನಿಗಮ ಸ್ಥಾಪಿಸಲಾಗಿದ್ದರೂ ಸಹ ಸಮರ್ಪಕ ಅನುದಾನ ನೀಡದೇ ವಂಚಿಸಲಾಗುತ್ತಿದೆ. ವಿಧಾನ ಪರಿಷತ್ ಮೂಲಕ ರಾಜಕೀಯ - ಅವಕಾಶ ನೀಡಲು ಇರುವ ಅವಕಾಶವನ್ನು ಮತ್ತೆ ಅಲೆಮಾರಿಗಳ ಹೆಸರಿನಲ್ಲಿ ಅಲೆಮಾರಿಗಳಲ್ಲದ ವ್ಯಕ್ತಿಗಳು ಕಬಳಿಸಲು ಹೊಂಚುಹಾಕುತ್ತಿರುವುದು ಖಂಡನೀಯ ಎಂದು ಆದರ್ಶ್ ಯಲ್ಲಪ್ಪ ದೂರಿದರು.
ಪತ್ರಿಕಾ ಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ವೆಂಕಟೇಶ್ ದೊರರಾಜ್ಯ ಉಪಾಧ್ಯಕ್ಷ ಲೋಹಿತಾಕ್ಷ ಬಿ.ಆರ್ರಾಘವೇಂದ್ರ ಮುಕ್ರಿ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪಾಜಿ ಕೆಪಿಮಂಜುನಾಥ ಬಿಹೆಚ್ಖಜಾಂಚಿ ಬಸವರಾಜು ನಾರಯಣಕರ ಭಾಗವಹಿಸಿದ್ದರು.  

Post a Comment

0Comments

Post a Comment (0)