ಎಲ್.ಎಸ್.ಎಸ್. ಮುಖ್ಯವಾದ ಕನ್ನಡ ಮತ್ತು ಇಂಗ್ಲೀಷ್ ಸಾಹಿತ್ಯ ಚರಿತ್ರಕಾರರು – ಎನ್.ಎಸ್.ಶ್ರೀಧರಮೂರ್ತಿ

varthajala
0

ಹೊಸಗನ್ನಡ ಸಾಹಿತ್ಯ ಚರಿತ್ರೆಯನ್ನು ಬರೆದಿರುವ ಪ್ರೊಎಲ್.ಎಸ್ಶೇಷಗಿರಿರಾವ್ ಅವರು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳ ಸಾಹಿತ್ಯ ಚರಿತ್ರಕಾರರೆಂದು ಪತ್ರಕರ್ತರು ಮತ್ತು ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಎನ್.ಎಸ್.ಶ್ರೀಧರಮೂರ್ತಿ ಅವರು ಅಭಿಪ್ರಾಯಪಟ್ಟರು.

ಕನ್ನಡ ಗೆಳೆಯರ ಬಳಗವು ಸರ್ಕಾರಿ ಕಲಾ ಕಾಲೇಜಿನಲ್ಲಿ ಏರ್ಪಡಿಸಿದ್ದ ಪ್ರೊ.ಎಲ್.ಎಸ್ಶೇಷಗಿರಿ ರಾವ್ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬೆಂಗಳೂರು ವಿಶ್ವವಿದ್ಯಾಲಯ ಪ್ರಕಟಿಸಿದ ಶ್ರೀಸಾಮಾನ್ಯನಿಗೆ ಕನ್ನಡ ಸಾಹಿತ್ಯ  ಚರಿತ್ರೆ ಮಾಲಿಕೆಗೆ ಮೊದಲು ಹೊಸಗನ್ನಡ ಸಾಹಿತ್ಯ ಚರಿತ್ರೆಯನ್ನು ಬರೆದ ಇವರು ಮುಂದೆ ಇದನ್ನು ಪರಿಷ್ಕರಿಸಿ ವಿಸ್ತೃತವಾದ ಸಾಹಿತ್ಯ ಚರಿತ್ರೆಯನ್ನು ಬರೆದಿದ್ದಾರೆಎಲ್.ಎಸ್.ಎಸ್ಅವರ ಮೂವತ್ತುಸಾವಿರ ಪುಟಗಳನ್ನು ಗಮನಿಸಿದರೆ ಅವರನ್ನು ಮುಖ್ಯವಾಗಿ ಚರಿತ್ರಕಾರರನ್ನಾಗಿ ಗುರುತಿಸಬಹುದಾಗಿದೆದಾಖಲೆ ಪುರಾವೆಗಳಿಲ್ಲದೆ ಒಪ್ಪಿಕೊಳ್ಳದ ಅವರು ತಮ್ಮ ಬರವಣಿಗೆಯಲ್ಲಿ ದಾಖಲೆಗಳನ್ನು ಶೋಧಿಸಿ ಬರೆದಿದ್ದಾರೆಕನ್ನಡ ಸಾಹಿತ್ಯ ಚರಿತ್ರೆಇಂಗ್ಲೀಷ್ ಸಾಹಿತ್ಯ ಚರಿತ್ರೆಗ್ರೀಕ್ ನಾಟಕಗಳು ಹಾಗೂ ಮಹಾಕಾವ್ಯಗಳು ಅವರ ಆಸಕ್ತ ಕ್ಷೇತ್ರಗಳಾಗಿವೆಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸಾಹಿತ್ಯದ ಕಾಲಘಟ್ಟಗಳುಸಾಹಿತ್ಯದ ಪ್ರಕಾರಗಳು ಹಾಗೂ ಪ್ರಮುಖ ಕವಿಗಳನ್ನು ಕುರಿತು ವಿಸ್ತೃತವಾಗಿ ಬರೆದಿದ್ದಾರೆಅವರ ಇಂಗ್ಲೀಷ್ ಸಾಹಿತ್ಯ ಚರಿತ್ರೆಯಲ್ಲಿ ಸುದೀರ್ಘವಾದ ಇತಿಹಾಸವಿವಿಧ ಕಾಲಘಟ್ಟಗಳಲ್ಲಿ ಬಂದಂತಹ ಕವಿಗಳುಅವರ ಕೊಡುಗೆ ಮತ್ತು ಪ್ರಕಾರಗಳನ್ನು ಸುದೀರ್ಘವಾಗಿ ಬರೆದಿದ್ದಾರೆಗ್ರೀಕ್ ನಾಟಕಗಳು ಹೇಗೆ ಸಾರ್ವಕಾಲಿಕ ಗುಣಗಳನ್ನು ಪಡೆದಿದ್ದಾವೆಮನುಷ್ಯತ್ವಕ್ಕೆ ಅವುಗಳ ಕೊಡುಗೆಯೇನೆಂಬುದನ್ನು ಗುರುತಿಸಿದ್ದಾರೆಮಹಾಕಾವ್ಯಗಳನ್ನು ಕುರಿತು ಜಪಾನನಿಂದ ಪ್ರಾರಂಭಿಸಿ ಪಾಶ್ಚಾತ್ಯ ಮತ್ತು ಭಾರತೀಯ ಮಹಾಕಾವ್ಯಗಳೊಂದಿಗೆ ಹೋಲಿಸುತ್ತಾ ಭಾರತೀಯ ಮಹಾಕಾವ್ಯಗಳ ವೈಶಿಷ್ಟö್ಯವನ್ನು ಎಲ್.ಎಸ್.ಎಸ್ಅರ್ಥಪೂರ್ಣ ಮತ್ತು ಸೋದಾಹರಣವಾಗಿ ಗುರುತಿಸುತ್ತಾರೆಂದು ವಿವರಿಸಿದರು.




ಕನ್ನಡ ಪ್ರಾಧ್ಯಾಪಕರಾದ ಡಾ.ಬಿ.ಸಿ.ನಾಗೇಂದ್ರಕುಮಾರ್ ಅವರು ಕನ್ನಡದ ಶ್ರೇಷ್ಠ ವಿಮರ್ಶಕರಾದ ಎಲ್.ಎಸ್.ಎಸ್ಅವರು ವಿಮರ್ಶೆಗೆ ಒಂದು ಮಾದರಿಯನ್ನು ನಿರ್ಮಿಸಿದರುಪಾಶ್ಚಿಮಾತ್ಯ ಕವಿಗಳನ್ನು ಕುರಿತ ಒಳನೋಟದ ವಿಮರ್ಶೆ ಕನ್ನಡದಲ್ಲಿ ಬಂದದ್ದು ವಿಶೇಷವಾದುದುಟಿ.ಎಸ್.ಎಲಿಯಟ್ಟನನ್ನು ಆರಾಧಿಸುವ ನವ್ಯ ಕಾಲಘಟ್ಟದಲ್ಲಿ ದೊಡ್ಡವರ ಸಾಲಿನ ಮೈನರ್ ಲೇಖಕನೆಂದು ವಸ್ತುನಿಷ್ಠವಾಗಿ ಗುರುತಿಸುವ ಎಲ್.ಎಸ್.ಎಸ್ಅವರ ಸಾಹಿತ್ಯವನ್ನು ಕುರಿತು ಶತಮಾನೋತ್ಸವ ವರ್ಷದಲ್ಲಿ ಅರ್ಥಪೂರ್ಣವಾದ ಚರ್ಚೆಗಳಾಗಿ ಅವರ ಸಾಹಿತ್ಯ ಎಲ್ಲರಿಗೂ ಮುಟ್ಟುವಂತಾಗಲಿಯೆಂದು ಆಶಿಸಿದರುಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ.ಟಿ.ಶ್ರೀನಿವಾಸ ನಾಯಕರು ಅಧ್ಯಕ್ಷತೆ ವಹಿಸಿದ್ದರುಕನ್ನಡ ಗೆಳೆಯರ ಬಳಗದ ಅಧ್ಯಕ್ಷರಾದ ರಾ.ನಂಚಂದ್ರಶೇಖರ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಬಳಗವು ಎಲ್.ಎಸ್.ಎಸ್ಅವರ ಶತಮಾನೋತ್ಸವ ವರ್ಷದಲ್ಲಿ ಪ್ರತಿ ತಿಂಗಳು ಇಡೀ ವರ್ಷ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರುಕನ್ನಡ ಸಂಘದ ಸಂಚಾಲಕರಾದ ಡಾರುದ್ರೇಶ್ ಅದರಂಗಿ ಸ್ವಾಗತಿಸಿದರುಪ್ರೊ.ಎಲ್.ಎಸ್.ಎಸ್ಅವರ ಪತ್ನಿ ಶ್ರೀಮತಿ ಭಾರತಿ ಶೇಷಗಿರಿ ರಾವ್ ಅವರು ಉಪಸ್ಥಿತರಿದ್ದರು.

ಕನ್ನಡ ಗೆಳೆಯರ ಬಳಗವು ಸರ್ಕಾರಿ ಕಲಾ ಕಾಲೇಜಿನಲ್ಲಿ ಏರ್ಪಡಿಸಿದ್ದ ಪ್ರೊ.ಎಲ್.ಎಸ್ಶೇಷಗಿರಿ ರಾವ್ ಶತಮಾನೋತ್ಸವ ಕಾರ್ಯಕ್ರಮವನ್ನು ಪತ್ರಕರ್ತರು ಮತ್ತು ಪ್ರಾಧ್ಯಾಪಕರಾದ ಪ್ರೊಎನ್.ಎಸ್.ಶ್ರೀಧರ ಮೂರ್ತಿ ಅವರು ಉದ್ಘಾಟಿಸಿದರು (ಎಡದಿಂದ ಮೂರನೆಯವರುಕನ್ನಡ ಸಂಘದ ಕಾರ್ಯದರ್ಶಿ ಡಾ.ರುದ್ರೇಶ್ ಅದರಂಗಿಪ್ರಾಧ್ಯಾಪಕ ಡಾ.ಬಿ.ಸಿನಾಗೇಂದ್ರಕುಮಾರ್ಕನ್ನಡ ಗೆಳೆಯರ ಬಳಗದ ಅಧ್ಯಕ್ಷ ರಾ.ನಂ.ಚಂದ್ರಶೇಖರಪ್ರಾಂಶುಪಾಲರಾದ ಡಾ.ಪಿ.ಟಿಶ್ರೀನಿವಾಸ ನಾಯಕ ಹಾಗೂ ಶ್ರೀಮತಿ ಭಾರತಿ ಶೇಷಗಿರಿ ರಾವ್ ಅವರು ಉಪಸ್ಥಿತರಿದ್ದರು.



Post a Comment

0Comments

Post a Comment (0)