ಪುಣೆ - ಇಂದು ಡಾ. ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿನ ನ್ಯಾಯಾಲಯ ನೀಡಿದ ತೀರ್ಪನ್ನು ನಾವು ಗೌರವಿಸುತ್ತೇವೆ. ಈ ತೀರ್ಪಿನ ಪ್ರಕಾರ ಸನಾತನದ ಸಾಧಕರು ನಿರ್ದೋಷಿಗಳೆಂದು ಸಾಬೀತಾಗಿದೆ. ಈ ಮೂಲಕ ಸನಾತನ ಸಂಸ್ಥೆಯನ್ನು ಹಿಂದೂ ಭಯೋತ್ಪಾದಕ ಎಂದು ಸಾಬೀತುಪಡಿಸುವ ‘ಅರ್ಬನ್ ನಕ್ಸಲೀಯರ’ ಸಂಚು ವಿಫಲವಾಗಿದೆ. ಇಂದು ಪುಣೆ ಸಿ.ಬಿ.ಐ. ವಿಶೇಷ ನ್ಯಾಯಾಲಯವು ಸನಾತನ ಸಂಸ್ಥೆಯ ಸಾಧಕ ಶ್ರೀ. ವಿಕ್ರಮ ಭಾವೆ ಮತ್ತು ಹಿಂದೂ ಜನಜಾಗೃತಿ ಸಮಿತಿಗೆ ಸಂಬಂಧಿಸಿದ ಡಾ. ವೀರೇಂದ್ರ ಸಿಂಹ ತಾವಡೆ ಇವರನ್ನು ನಿರ್ದೋಷಿಗಳೆಂದು ಮುಕ್ತಗೊಳಿಸಿದೆ, ಜೊತೆಗೆ ಹಿಂದೂ ವಿಧಿಜ್ಞ ಪರಿಷತ್ತಿನ ನ್ಯಾಯವಾದಿ ಸಂಜೀವ ಪುನಾಳೇಕರ್ ಇವರನ್ನು ಸಹ ನಿರ್ದೋಷಿಯೆಂದು ಖುಲಾಸೆಗೊಳಿಸಿದೆ ಮತ್ತು ಈ ಅಪರಾಧದಲ್ಲಿ ಸೇರಿಸಿದ್ದ `ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದ ಯುಎಪಿಎ ಕಾಯ್ದೆಯನ್ನು' ಸಹ ರದ್ದುಗೊಳಿಸಲಾಗಿದೆ. ಈ ಕಾಯ್ದೆಯನ್ನು ಹಾಕಿ ಸನಾತನ ಸಂಸ್ಥೆಯನ್ನು ಕೇಸರಿ ಭಯೋತ್ಪಾದಕ ಎಂದು ತೋರಿಸಿ ನಿರ್ಬಂಧಿಸುವ ಷಡ್ಯಂತ್ರ ರಚಿಸಲಾಗಿತ್ತು, ಈ ಷಡ್ಯಂತ್ರವೂ ಈಗ ವಿಫಲವಾಗಿದೆ.
ಈ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಹಿಂದುತ್ವವಾದಿಗಳಾದ ಸಚಿನ ಅಂದುರೆ ಮತ್ತು ಶರದ ಕಳಸ್ಕರ್ ಅವರು ಸನಾತನ ಸಂಸ್ಥೆ ಜೊತೆ ನೇರವಾಗಿ ಸಂಬಂಧ ಹೊಂದಿಲ್ಲದಿದ್ದರೂ ಅಥವಾ ಸನಾತನ ಸಂಸ್ಥೆಯ ಪದಾಧಿಕಾರಿಗಳಲ್ಲದಿದ್ದರೂ, ಅವರನ್ನೂ ಈ ಪ್ರಕರಣದಲ್ಲಿ ಸಿಲುಕಿಸಿರುವ ಸಾಧ್ಯತೆಯದೆ ಎಂದು ನಮಗೆ ಅನಿಸುತ್ತದೆ. ಹಾಗಾಗಿ ಈ ಪ್ರಕರಣದ ವಕೀಲರು ಹೇಗೆ ಇಂದು ಇತರರನ್ನು ನಿರಪರಾಧಿಯೆಂದು ಮುಕ್ತಗೊಳಿಸಿದರೋ ಅದೇ ರೀತಿ ಈ ಪ್ರಕರಣವನ್ನು ಉಚ್ಚ ನ್ಯಾಯಾಲಯಕ್ಕೆ ಕೊಂಡೊಯ್ದು ಅವರನ್ನು ನಿರಪರಾಧಿಯೆಂದು ಮುಕ್ತಗೊಳಿಸಲು ಹೋರಾಟ ನಡೆಸುವುದಾಗಿ ಅವರು ಇಂದು ಘೋಷಿಸಿದ್ದಾರೆ. ಮುಂಬೈ ಉಚ್ಚ ನ್ಯಾಯಾಲಯದಲ್ಲಿ ಸಚಿನ್ ಅಂದುರೆ ಮತ್ತು ಶರದ ಕಳಸ್ಕರ್ ಅವರನ್ನು ನಿರಪರಾಧಿಯೆಂದು ಮುಕ್ತಗೊಳಿಸಲಾಗುವುದು ಎಂಬ ವಿಶ್ವಾಸ ನಮಗಿದೆ. ಈ ಪ್ರಕರಣದ ದೋಷಾರೋಪ ಪತ್ರದಲ್ಲಿ ತನಿಖಾ ಸಂಸ್ಥೆಗಳು ವಿಭಿನ್ನ ಮತ್ತು ನಿರಂತರವಾಗಿ ಬದಲಾಗುತ್ತಿರುವ ಪಾತ ರಗಳನ್ನು ಮಂಡಿಸಿದೆ. ಅಷ್ಟೇ ಅಲ್ಲ ಆರೋಪಿಗಳ ಪತ್ತೆಗೆ ‘ಪ ಲಾಂಚೆಟ್’ ಮಾಧ್ಯಮದಿಂದ ಸನಾತನ ಸಂಸ್ಥೆಯು ದೋಷಿಯೆಂದು ಹೇಳಿಸಿಕೊಳ್ಳಲಾಗಿತ್ತು. ಅನಂತರ ಸನಾತನ ಸಂಸ್ಥೆಯ ವಿನಯ ಪವಾರ್ ಮತ್ತು ಸಾರಂಗ್ ಅಕೋಲ್ಕರ್ ಅವರನ್ನು ಮೊದಲಿಗೆ ಹಂತಕರು ಎಂದು ಗುರುತಿಸಲಾಯಿತು.
ಅದಕ್ಕೂ ಮೊದಲು ಈ ಹಿಂದೆ ಪಿಸ್ತೂಲ್ ವಶಪಡಿಸಿಕೊಂಡ ಮನೀಷ ನಾಗೋರಿ ಮತ್ತು ವಿಕಾಸ ಖಂಡೇಲ್ವಾಲ್ ಅವರಿಗೂ ಕ್ಲೀನ್ ಚಿಟ್ ನೀಡಲಾಗಿತ್ತು. ಅನಂತರ ಸಚಿನ್ ಅಂದುರೆ ಮತ್ತು ಶರದ ಕಳಸ್ಕರ್ ಇವರು ಕೊಲೆಯಲ್ಲಿ ಭಾಗಿಯಾಗಿದ್ದರು ಎಂದು ಮಂಡಿಸಿತು. ಈ ಪ್ರಕರಣದಲ್ಲಿ ಸಾಕ್ಷಿಗಳ ಪಾತ್ರವೇ ಸಂದೇಹಾಸ್ಪದವಾಗಿತ್ತು. ಅವರು ಈ ಹಿಂದೆ ವಿನಯ ಪವಾರ್ ಮತ್ತು ಅಕೋಲ್ಕರ್ ಇವರನ್ನೂ ಹಂತಕರು ಎಂದು ಗುರುತಿಸಿದ್ದರು. ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯ (ಅಂನಿಸ) ಕಾರ್ಯಕರ್ತರು ತಮ್ಮನ್ನು ಭೇಟಿಯಾಗಲು ಬಂದಿದ್ದು, ಅವರ ಜತೆ ಊಟ ಮಾಡುತ್ತಿದ್ದೆ ಎಂದೂ ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು. ಸಾಕ್ಷಿಗಳ ಈ ಕೃತಿಯಿಂದ ಅವರ ಮೇಲೆ ಅಂ.ನಿ.ಸ ದ ಒತ್ತಡವಿತ್ತೇ ಎಂಬ ಪ್ರಶ್ನೆ ಮೂಡಿದೆ.
ಈ ಪ್ರಕರಣದಲ್ಲಿ ಕೇವಲ ಅಂ.ನಿ.ಸ ದವರಿಗೆ ಸಾಕ್ಷಿದಾರರೊಂದಿಗೆ ಸಂಬಂಧವಿತ್ತೆಂಬುದಷ್ಟೇ ಅಲ್ಲದೇ ಡಾ. ದಾಭೋಲ್ಕರ್ ಕುಟುಂಬ ತನಿಖಾ ಸಂಸ್ಥೆಗಳ ಮೇಲೆ ಒತ್ತಡ ಹೇರಿತ್ತು ಎಂಬುದು ಸಿದ್ಧವಾಯಿತು. ಅದರ ಪರಿಣಾಮವಾಗಿ ಸನಾತನ ಸಂಸ್ಥೆಯ ಮೇಲೆ ಪೂರ್ವಗ್ರಹಪೀಡಿತವಾಗಿ ತನಿಖೆ ನಡೆಯಿತು. ಕಳೆದ 11 ವರ್ಷಗಳಲ್ಲಿ ಸನಾತನದ 1600 ಸಾಧಕರ ವಿಚಾರಣೆ ನಡೆಸಲಾಗಿದೆ. ಸನಾತನದ ಆಶ್ರಮಗಳ ಮೇಲೆ ದಾಳಿ ಮಾಡಲಾಯಿತು. ಈ ಪ್ರಕರಣದ ಮಾಸ್ಟರ್ ಮೈಂಡ್ ಪತ್ತೆ ಹಚ್ಚುವ ಹೆಸರಿನಲ್ಲಿ ಖಟ್ಲೆಯನ್ನು ತಡೆಹಿಡಿಯಲಾಯಿತು. ಸಿಬಿಐ ತನ್ನ ದೋಷಾರೋಪಪತ್ರದಲ್ಲಿ `ಸನಾತನ ಸಂಸ್ಥೆಯ ಎಲ್ಲ ಪದಾಧಿಕಾರಿಗಳನ್ನು ವಿಚಾರಣೆಗೊಳಪಡಿಸಿದ್ದು, ಯಾರೂ ತಪ್ಪಿತಸ್ಥರಲ್ಲ' ಎಂದು ನಮೂದಿಸಿದೆ. ಇದು 11 ವರ್ಷಗಳ ನಂತರ ಸನಾತನ ಸಂಸ್ಥೆಗೆ ತಡವಾಗಿ ದೊರಕಿದ ನ್ಯಾಯವಾಗಿದೆ.
ತಮ್ಮ ಸವಿನಯ, ಶ್ರೀ. ಚೇತನ ರಾಜಹಂಸ, ವಕ್ತಾರರು, ಸನಾತನ ಸಂಸ್ಥೆ (ಸಂಪರ್ಕ : 777585838)