ಮೇ 4 ರಂದು ವಿಶೇಷಚೇತನರಿಗಾಗಿ ಉದ್ಯೋಗ ಮೇಳ

varthajala
0

 ಎಪಿಎಸ್ ಶಿಕ್ಷಣ ಸಂಸ್ಥೆ ದಕ್ಷಿಣ ಬೆಂಗಳೂರಿನಲ್ಲಿ ಅತ್ಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿದೆ. ಇದು ಶಿಕ್ಷಣ ಕ್ಷೇತ್ರದಲ್ಲಿ 89 ವರ್ಷಗಳ ವೈಭವದ ಸೇವೆ ಸಲ್ಲಿಸಿದೆ. ಪ್ರಸ್ತುತ ಸಿಟಿ ಕ್ಯಾಂಪಸ್ ಮತ್ತು ಸೋಮನಹಳ್ಳಿ, ಕ್ಯಾಂಪಸ್‌ನಲ್ಲ 11 ಸಂಸ್ಥೆಗಳನ್ನು ನಡೆಸುತ್ತಿದೆ. ನರ್ಮದಾ -ವಿಕಲಚೇತನರಿಗಾಗಿ ಸ್ವಾಪಿತಗೊಂಡಿರುವ ವಿಶೇಷ ಘಟಕವಾಗಿದೆ.

ಐಪಿಎಸ್ ಶಿಕ್ಷಣ ಸಂಸ್ಥೆ ವಿಕಲಾಂಗ ವ್ಯಕ್ತಿಗಳಿಗೆ ದೊಡ್ಡ ವೇದಿಕೆಯನ್ನು ಒದಗಿಸಿದೆ, ಪ್ರಸ್ತುತ 64 ದೃಷ್ಟಿ ವಿಕಲಚೇತನ ವಿದ್ಯಾರ್ಥಿಗಳು ಮತ್ತು ವಿಶೇಷ ಸವಾಲು ಹೊಂದಿರುವ ವಿದ್ಯಾರ್ಥಿಗಳು ವಿವಿಧ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಇವರೆಲ್ಲರಿಗೆ ವಿಷೇಶ ಸೌಲಭ್ಯಗಳನ್ನು ಒದಗಿಸಲಾಗಿದೆ, ಮಧ್ಯಾಹ್ನದ ಊಟ, ಬೃಹತ್ ಬೈಲ್ ಗ್ರಂಥಾಲಯ, ಕಂಪ್ಯೂಟರ್ ತರಬೇತಿ,ಕನಿಷ್ಠ ಕಾಲೇಜು ಶುಲ್ಕ,ಮುಂತಾದವು.

ಹೀಗಾಗಿ ನಮ್ಮ ಸಂಸ್ಥೆಯು ವಿಕಲಾಂಗ ವ್ಯಕ್ತಿಗಳಿಗೆ ಶಿಕ್ಷಣವನ್ನು ಒದಗಿಸುವ ಮೊದಲ ಖಾಸಗಿ ಶಿಕ್ಷಣ ಸಂಸ್ಥೆಯಾಗಿದೆ.
ವಿಶೇಷಚೇತನರಿಗಾಗಿ ಉದ್ಯೋಗ ಮೇಳ,
ನಮ್ಮ ಜೋಬಾಥನ್ -2024
ಆಚಾರ್ಯ ಪಾಠ ಶಾಲಾ ಶಿಕ್ಷಣ ಸಂಸ್ಥೆ ಹಾಗೂ ರೋಟರಿ ಎಬಿಲಿಟೀಸ್,ಬೆಂಗಳೂರು, ಸಾಹಿರ ಜಾಬ್.ವಿನ್ ವಿನ್ಯಾಸ ಫೌಂಡೇಶನ್ ಇವರುಗಳ ಸಹಯೋಗದಲ್ಲಿ ವಿಶೇಷಚೇತನಾರಿಗಾಗಿ ಉದ್ಯೋಗ ಮೇಳ ವನ್ನು ಎಪಿಎಸ್ ವಾಣಿಜ್ಯ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದೆ.
ಪದವಿ,ಪದವಿ ಪೂರ್ವ,ಹತ್ತನೇ ತರಗತಿ ಪಾಸಾದ ವಿಶೇಷಚೇತನ ಅಭ್ಯರ್ಥಿಗಳು, ಕಿವುಡ, ಮೂಗ, ಅಂಧ್ರ,ದೈಹಿಕ ಅಂಗ ನ್ಯೂನತೆ ಇರುವ ವ್ಯಕ್ತಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು.
ಉಚಿತ ನೋಂದಾವಣಿಗೆ ಈ ಕೆಳಕಂಡ ಲಿಂಕ್ ನ್ನು ಬಳಸಿ.
ಹೆಚ್ಚಿನ ಮಾಹಿತಿಗಾಗಿ
6360752091
861828624

Post a Comment

0Comments

Post a Comment (0)