ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಚುನಾವಣೆ ನಡೆಸಲು ದಿನಾಂಕ ನಿಗದಿ

varthajala
0

 ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭೆಯಿಂದ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಚುನಾವಣೆ ನಡೆಸಲು ದಿನಾಂಕ ನಿಗದಿಪಡಿಸಿದೆ. ದಿನಾಂಕ: 13-06-2024ರಂದು ಮತದಾನ ಹಾಗೂ ಅಂದೇ ದಿನಾಂಕ : 13-06-2024 ರಂದು ಸಂಜೆ ಮತ ಎಣಿಕೆ ನಡೆಯಲಿದೆ.

ಸದರಿ ಚುನಾವಣೆಯ ವರದಿಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಮಾಧ್ಯಮ ಮಾನ್ಯತೆ (Accreditation Card) ಹೊಂದಿರುವ ಹಾಗೂ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿ ಇರುವ ಪತ್ರಿಕೆಗಳ ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ಪ್ರವೇಶ ಪತ್ರಗಳನ್ನು ವಿತರಿಸುವ ಸಲುವಾಗಿ ಭಾರತ ಚುನಾವಣಾ ಆಯೋಗಕ್ಕೆ ಮಾಹಿತಿಯನ್ನು ಸಲ್ಲಿಸಬೇಕಾಗಿದೆ.
ಆದ್ದರಿಂದ ಮುದ್ರಣ ಮಾಧ್ಯಮದಿಂದ (ಓರ್ವ ವರದಿಗಾರ ಮತ್ತು ಓರ್ವ ಛಾಯಾಗ್ರಾಹಕ ಅಥವಾ ಓರ್ವ ವಿಡಿಯೋಗ್ರಾಹಕ ಮಾತ್ರ -  ಒಂದು  ಮಾಧ್ಯಮದಿಂದ 2 (ಇಬ್ಬರು ಮಾತ್ರ)) ಹಾಗೂ ವಿದ್ಯುನ್ಮಾನ ಮಾಧ್ಯಮದಿಂದ ಓರ್ವ ವರದಿಗಾರ ಮತ್ತು ಓರ್ವ ಛಾಯಾಗ್ರಾಹಕ ಅಥವಾ ಓರ್ವ ವಿಡಿಯೋಗ್ರಾಹಕ ಮಾತ್ರ -  ಒಂದು  ಮಾಧ್ಯಮದಿಂದ 2 (ಇಬ್ಬರು ಮಾತ್ರ)) ತಮ್ಮ ಸಂಸ್ಥೆಯ ಮುಖ್ಯಸ್ಥರ ಶಿಫಾರಸ್ಸು ಪತ್ರದೊಂದಿಗೆ, ಹೆಸರು, ಪದನಾಮ, ಮಾಧ್ಯಮ ಸಂಸ್ಥೆಯ ಹೆಸರು ಹಾಗೂ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸದೊಂದಿಗೆ ಇತ್ತೀಚಿನ 4 ಪಾಸ್ ಪೆÇೀರ್ಟ್ ಅಳತೆಯ (4 Passport size Photos compulsory) ಭಾವಚಿತ್ರದೊಂದಿಗೆ ಮಾಹಿತಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುದ್ದಿ ಮತ್ತು ಪತ್ರಿಕಾ ಶಾಖೆಗೆ ದಿನಾಂಕ : 29-05-2024 ರ ಸಂಜೆ 4 ಗಂಟೆಯ ಒಳಗಾಗಿ ಸಲ್ಲಿಸುವುದು.

ಸೂಚನೆ:
1. ನಿಗದಿತ ದಿನಾಂಕದ ನಂತರ ತಡವಾಗಿ ಸಲ್ಲಿಸುವ ಮಾಹಿತಿಯನ್ನು ಪರಿಗಣಿಸಲಾಗುವುದಿಲ್ಲ.
2. ಮಾಧ್ಯಮ ಪ್ರತಿನಿಧಿಗಳ ಮಾಹಿತಿಯನ್ನು ಭಾರತ ಚುನಾವಣಾ ಆಯೋಗಕ್ಕೆ ಕಳುಹಿಸಬೇಕಾಗಿರುವುದರಿಂದ  
   ಎಲ್ಲಾ ಮಾಹಿತಿಯನ್ನು ಕಡ್ಡಾಯವಾಗಿ ಆಂಗ್ಲ ಭಾμÉಯಲ್ಲಿ ನಮೂದು ಮಾಡುವುದು.
3. ಮಾಹಿತಿಯನ್ನು ಸಲ್ಲಿಸುವಾಗ ಕಡ್ಡಾಯವಾಗಿ 4 ಪಾಸ್ ಪೆÇೀರ್ಟ್ ಅಳತೆಯ ಭಾವಚಿತ್ರಗಳನ್ನು
  ಸಲ್ಲಿಸುವುದು. ಭಾಚಿತ್ರಗಳನ್ನು ಸಲ್ಲಿಸದಿದ್ದಲ್ಲಿ ಅಂತವರ ಮಾಹಿತಿಯನ್ನು ಪರಿಗಣಿಸಲಾಗುವುದಿಲ್ಲ.

Post a Comment

0Comments

Post a Comment (0)