ವಿಧಾನ ಪರಿಷತ್ತಿನ ದ್ವೈವಾರ್ಷಿಕ ಚುನಾವಣೆ - 03 ಪದವೀಧರ ಕ್ಷೇತ್ರ ಮತ್ತು 03 ಶಿಕ್ಷಕರ ಕ್ಷೇತ್ರ

varthajala
0

 ಭಾರತ ಚುನಾವಣಾ ಆಯೋಗವು, ಈಗಾಗಲೇ ಕರ್ನಾಟಕ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆ ಸಂಬಂಧ 03 ಪದವೀಧರ ಕ್ಷೇತ್ರಕ್ಕೆ (ಈಶಾನ್ಯ ಕರ್ನಾಟಕ, ನೈಋತ್ಯ ಕರ್ನಾಟಕ ಮತ್ತು ಬೆಂಗಳೂರು ಪದವೀಧರ ಕ್ಷೇತ್ರ) ಹಾಗೂ 03 ಶಿಕ್ಷಕರ  ಕ್ಷೇತ್ರಕ್ಕೆ (ಆಗ್ನೇಯ ಕರ್ನಾಟಕ,  ನೈಋತ್ಯ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಶಿಕ್ಷಕರ ಕ್ಷೇತ್ರ) ಚುನಾವಣೆ ನಡೆಸುವ ಕುರಿತು ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ದಿನಾಂಕ: 03-06-2024 ರಂದು ಮತದಾನ ಹಾಗೂ ದಿನಾಂಕ 06-06-2024 ರಂದು ಮತ ಎಣಿಕೆ ನಡೆಯಲಿದೆ.


 ಸದರಿ ಚುನಾವಣೆಯ ಮತದಾನದ ಮತ್ತು ಮತ ಎಣಿಕೆ ವರದಿಗಾಗಿ, ಈಗಾಗಲೇ ಇಲಾಖೆಯಲ್ಲಿ ಭಾವಚಿತ್ರಗಳನ್ನು ನೀಡಿ ನೋಂದಾಯಿಸಿಕೊಂಡಿದ್ದ  ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ದಿನಾಂಕ : 28-05-2024 ರಿಂದ 30-05-2024 ರ  ವರೆಗೆ ಕೇಂದ್ರ ಕಚೇರಿಯ ಸುದ್ದಿ ಮತ್ತು ಪತ್ರಿಕಾ ಶಾಖೆಯಲ್ಲಿ ಬೆಳಿಗ್ಗೆ 11.00 ಗಂಟೆಯಿಂದ ಅಪರಾಹ್ನ 3.00 ಗಂಟೆಯ ವರೆಗೆ ಪ್ರವೇಶ ಪತ್ರಗಳನ್ನು ವಿತರಿಸಲಾಗುವುದು.
ಸಂಬಂಧಿಸಿದ ಮಾಧ್ಯಮ ಪ್ರತಿನಿಧಿಗಳು ಪ್ರವೇಶ ಪತ್ರಗಳನ್ನು ಪಡೆದುಕೊಳ್ಳುವುದು.

Post a Comment

0Comments

Post a Comment (0)