ಭಾರತ ಚುನಾವಣಾ ಆಯೋಗವು, ಈಗಾಗಲೇ ಕರ್ನಾಟಕ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆ ಸಂಬಂಧ 03 ಪದವೀಧರ ಕ್ಷೇತ್ರಕ್ಕೆ (ಈಶಾನ್ಯ ಕರ್ನಾಟಕ, ನೈಋತ್ಯ ಕರ್ನಾಟಕ ಮತ್ತು ಬೆಂಗಳೂರು ಪದವೀಧರ ಕ್ಷೇತ್ರ) ಹಾಗೂ 03 ಶಿಕ್ಷಕರ ಕ್ಷೇತ್ರಕ್ಕೆ (ಆಗ್ನೇಯ ಕರ್ನಾಟಕ, ನೈಋತ್ಯ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಶಿಕ್ಷಕರ ಕ್ಷೇತ್ರ) ಚುನಾವಣೆ ನಡೆಸುವ ಕುರಿತು ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ದಿನಾಂಕ: 03-06-2024 ರಂದು ಮತದಾನ ಹಾಗೂ ದಿನಾಂಕ 06-06-2024 ರಂದು ಮತ ಎಣಿಕೆ ದಿನಾಂಕವನ್ನು ನಿಗದಿಪಡಿಸಿದೆ. ಸದರಿ ಚುನಾವಣೆಯ ಮತದಾನದ ಮತ್ತು ಮತಎಣಿಕೆ ವರದಿಗಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶ ಪತ್ರಗಳನ್ನು ನೀಡಲು ಅನುಕೂಲವಾಗುವಂತೆ ಮಾಧ್ಯಮದವರ ಮಾಹಿತಿ ಪಟ್ಟಿಯನ್ನು ಭಾರತ ಚುನಾವಣಾ ಆಯೋಗಕ್ಕೆ ಕಳುಹಿಸಬೇಕಾಗಿದೆ.
ಆದ್ದರಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಮಾನ್ಯತೆ ಹೊಂದಿದ (Accreditation Card Holder) ಹಾಗೂ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳ ಪತ್ರಕರ್ತರ ಪಟ್ಟಿಯನ್ನು ತಮ್ಮ ಸಂಸ್ಥೆಯ ಮುಖ್ಯಸ್ಥರ ಶಿಫಾರಸ್ಸು ಪತ್ರದೊಂದಿಗೆ *(ಹೆಸರು, ಪದನಾಮ, ಮೊಬೈಲ್ ದೂರವಾಣಿ ಸಂಖ್ಯೆ, ಇ ಮೇಲ್ ವಿಳಾಸ) ಈ ಪತ್ರಕ್ಕೆ ಲಗತ್ತಿಸಿರುವ ನಮೂನೆಯಲ್ಲಿ ಸಿದ್ದಪಡಿಸಿ, ತಲಾ 4 ಭಾವಚಿತ್ರದೊಂದಿಗೆ (4 PHOTOS) ದಿನಾಂಕ : 09-05-2024ರ ಒಳಗಾಗಿ ಕೇಂದ್ರ ಕಚೇರಿಯ ಸುದ್ದಿ ಮತ್ತು ಪತ್ರಿಕಾ ಶಾಖೆಗೆ ಸಲ್ಲಿಸುವುದು.ಸೂಚನೆ:
1.ಮಾಧ್ಯಮದ ಮಾಹಿತಿ ಪಟ್ಟಿಯನ್ನು ನವದೆಹಲಿಯಲ್ಲಿರುವ ಭಾರತೀಯ ಚುನಾವಣಾ ಆಯೋಗಕ್ಕೆ ಕಳುಹಿಸಬೇಕಿರುವ ಹಿನ್ನೆಲೆಯಲ್ಲಿ ಎಲ್ಲಾ ಕಾಲಂಗಳನ್ನು ಆಂಗ್ಲ ಭಾμÉಯಲ್ಲಿ ಕಡ್ಡಾಯವಾಗಿ ನಮೂದು ಮಾಡಬೇಕು.
2.ನಿಗದಿಪಡಿಸಿದ ದಿನಾಂಕದ ನಂತರ ಸಲ್ಲಿಸುವ ಮಾಹಿತಿ ಪಟ್ಟಿ ಹಾಗೂ ಯಾವುದೇ ಹೆಚ್ಚುವರಿ ಪಟ್ಟಿಯನ್ನು ಪರಿಗಣಿಸುವುದಿಲ್ಲ.
3.ಮಾಧ್ಯಮ ಮಾಹಿತಿ ಪಟ್ಟಿಯನ್ನು ಸಲ್ಲಿಸುವಾಗ ಕಡ್ಡಾಯವಾಗಿ 4 ಭಾವಚಿತ್ರಗಳನ್ನು (4 PHOTOS) ಗಳನ್ನು ಸಲ್ಲಿಸಬೇಕು. ತದನಂತರ ಸಲ್ಲಿಸುವುದಾಗಿ ಪಟ್ಟಿಯನ್ನು ನೀಡಿದಲ್ಲಿ ಭಾವಚಿತ್ರ ಇಲ್ಲದ ಮಾಧ್ಯಮ ಪ್ರತಿನಿಧಿಗಳ ಹೆಸರನ್ನು ಪರಿಗಣಿಸಲಾಗುವುದಿಲ್ಲ.