ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೆ ಯು ಡ ಬ್ಲೂೃ ಜೆ ಸಭಾಂಗಣದಲ್ಲಿ ಹಿರಿಯ ಪತ್ರಕರ್ತ ಎನ್.ಅರ್ಜುನದೇವ ಅವರಿಗೆ ಏರ್ಪಡಿಸಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು. ಅರ್ಜುನದೇವ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಒಂದು ನಿಮಿಶ ಮೌನಾಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಒಂದು ಅವಧಿಗೆ ಪ್ರಧಾನ ಕಾರ್ಯದರ್ಶಿ, 1979-81 ಮತ್ತು 1991-93 ಅವಧಿಯಲ್ಲಿ ರಾಜ್ಯಾಧ್ಯಕ್ಷರಾಗಿ ಸಂಘಟನೆಗೆ ಶಕ್ತಿ ನೀಡಿದರು. ತಾಯಿನಾಡು, ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಸುರ್ಯೋದಯ ಪತ್ರಿಕೆಯಲ್ಲಿಯೂ ಕೆಲಸ ಮಾಡುದ ಮೂಲಕ ಕಿರಿಯ ಪತ್ರಕರ್ತರನ್ನು ಪ್ರೋತ್ಸಾಯಿಸಿ ಬೆಳೆಸಿದರು. ಮಾಧ್ಯಮ ಅಕಾಡಮಿಯ ಅಧ್ಯಕ್ಷರಾಗಿಯೂ ಉತ್ತಮ ಕೆಲಸ ಮಾಡಿದ್ದರು ಎಂದು ಅವರ ಸೇವೆಯನ್ನು ಶ್ಲಾಸಿದರು.
ಹಿರಿಯ ಪತ್ರಕರ್ತ ಕೆ.ಎಸ್.ಶೇಷಚಂದ್ರಿಕಾ ಮಾತನಾಡಿ, ಸಜ್ಜನಿಕೆಯ ವ್ಯಕ್ತಿತ್ವದ ಜೊತೆಗೆ ವೃತ್ತಿ ಬದ್ದತೆಯನ್ನು ಸದಾ ಕಾಪಿಟ್ಟುಕೊಂಡು ಬಂದ ಹಿರಿಯ ಪತ್ರಕರ್ತ ಎನ್.ಅರ್ಜುನದೇವ ಅವರು ಎಂದೂ ತಾವು ನಂಬಿದ ಮೌಲ್ಯ ಮತ್ತು ಆದರ್ಶಗಳ ಜೊತೆಗೆ ರಾಜಿಯಾಗಲಿಲ್ಲ. ಪ್ರತಿಯೊಂದು ವಿಚಾರದಲ್ಲೂ ವಿಶ್ಲೇಷಣಾ ಮನೋಭಾವವನ್ನು ಬೆಳೆಸಿಕೊಂಡಿದ್ದರು. ಹಾಗೆಯೇ ಕಿರಿಯ ಪತ್ರಕರ್ತರಿಗೆ ಸದಾ ಪ್ರೋತ್ಸಾಹ ಕೊಡುವ ಗುಣವೂ ಅವರಲ್ಲಿತ್ತು ಎಂದು ಹೇಳಿದರು.
ಹಿರಿಯ ಪತ್ರಕರ್ತ ಈಶ್ವರ ದೈತೋಟ ಮಾತನಾಡಿ, ಪತ್ರಿಕೋದ್ಯಮದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ಅರ್ಜುನ್ ದೇವ್ ಅವರು ಪತ್ರಿಕೋದ್ಯಮ ವೃತ್ತಿಯಲ್ಲಿ ಯಾವುದೇ ರೀತಿ ಪೈಪೋಟಿಗಿಳಿದವರಲ್ಲ. ಯಾವ ರೀತಿಯ ಭೇದಭಾವವನ್ನು ತೋರಿಸದೆ ಎಲ್ಲರ ಜೊತೆಯೂ ವಿನಯವಂತಿಕೆಯಿಂದ ಬೇರೆಯವ ಸದ್ಗುಣ ಅವರಲ್ಲಿತ್ತು ಎಂದರು.
ಹಿರಿಯ ಪತ್ರಕರ್ತರಾದ ಡಿ.ಮಹಾದೇವಪ್ಪ ಅವರು ಮಾತನಾಡಿ, ಅರ್ಜುನ್‌ದೇವ್ ಅವರು ಪತ್ರಿಕೋದ್ಯಮದಲ್ಲಿ ಅತ್ಯುತ್ತಮ ಮಾವವೀಯ ವರದಿಗಳನ್ನು ಬರೆದು ಓದುಗರ ಮನಸ್ಸನ್ನು ಗೆದ್ದವರು, ಆ ಮೂಲಕ ಮುದ್ರಣ ಮಾಧ್ಯಮದಲ್ಲಿ ತನ್ನ ಛಾಪನ್ನು ಒತ್ತಿ ಜನಮನ್ನಣೆಗೆ ಪಾತ್ರರಾದವರು. ತಾವು ಎಷ್ಟೇ ಕಷ್ಟದಲ್ಲಿದ್ದರೂ ಎಂದು ಸ್ವಾರ್ಥಕ್ಕೆ ವೃತ್ತಿ ಬಳಸಿಕೊಳ್ಳಲಿಲ್ಲ ಎಂದು ಹೇಳಿದರು.
ಹಿರಿಯ ಪತ್ರಕರ್ತ ಎಸ್.ಆರ್. ಆರಾಧ್ಯ ಮಾತನಾಡಿ, ಸಮಾಜಮುಖಿ ಚಿಂತನೆಯ ಅರ್ಜುನ್ ದೇವ್ ಅವರ ಅಗಲಿಕೆ ನಿಜಕ್ಕೂ ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟ. ಆದರ್ಶ ವ್ಯಕ್ತಿತ್ವ ಮತ್ತು ಮಾದರಿ ನಡೆ-ನುಡಿಗಳನ್ನು ರೂಢಿಸಿಕೊಂಡ ಹಿರಿಮೆ ಅವರದ್ದಾಗಿತ್ತು ಎಂದು ಹೇಳಿದರು.
ಸಭೆಯಲ್ಲಿ ಎಸ್.ಸೋಮಶೇಖರ ಗಾಂಧಿ, ನಾಗರಾಜ ಸ್ವಾಮಿ, ಬೋಪಯ್ಯ ಚಾವಂಡ, ವಾಸುದೇವ ಹೊಳ್ಳ ಮತ್ತಿತರರು ಮಾತನಾಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಆರ್.ದೇವರಾಜ್, ವಡವಡಗಿ, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಸತ್ಯನಾರಾಯಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ನಗರ ಘಟಕದ ಎ.ಬಿ.ಶಿವರಾಜ್, ಕೆ.ಎಂ.ಜಿಕ್ರಿಯಾ, ಬಸವರಾಜ್, ವಿಜಯಕುಮಾರ್ ಮುಂತಾದವರು ಉಪಸ್ಥಿತರಿದ್ದರು.
With Warm Regard
Shivananda Tagaduru
8884431995, 9845087374