ಬೆಂಗಳೂರು, ಏಪ್ರಿಲ್ 10 (ಕರ್ನಾಟಕ ವಾರ್ತೆ): ಬೆಂಗಳೂರು ಜಲ ಮಂಡಳಿಯ ವಿವಿಧ ಉಪ ವಿಭಾಗಗಳಾದ ಉತ್ತರ-2-1, ದಕ್ಷಿಣ-2-1, ನೈರುತ್ಯ -1, ನೈರುತ್ಯ - 4, ಪೂರ್ವ -1-2, ಪೂರ್ವ -2-2, ಆಗ್ನೇಯ - 2, ಆಗ್ನೇಯ – 5, ಪಶ್ಚಿಮ-1-2 ಮತ್ತು ಪಶ್ಚಿಮ-2-2, ಉಪವಿಭಾಗಗಳಲ್ಲಿ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದು ಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಏಪ್ರಿಲ್ 12 ರಂದು ಬೆಳಿಗ್ಗೆ 9.30 ಗಂಟೆಯಿಂದ 11 ಗಂಟೆಯವರೆಗೆ ನೀರಿನ ಅದಾಲತ್‍ನ್ನು ಹಮ್ಮಿಕೊಳ್ಳಲಾಗಿದೆ.
ಯಲಹಂಕ ಓಲ್ಡ್ ಟೌನ್, ಯಲಹಂಕ ನ್ಯೂಟೌನ್, ಅಟ್ಟೂರು, ಜೆ.ಪಿ.ನಗರ-2, ಕೊತ್ತನೂರು ದಿಣ್ಣೆ, ವಿಜಯಬ್ಯಾಂಕ್ ಕಾಲೋನಿ, ಅರಕೆರೆ & ಮೈಕೋ ಲೇಔಟ್, ಜೆ.ಪಿ.ನಗರ – 1&3, ಜಯನಗರ 4ನೇ ಟಿ ಬ್ಲಾಕ್, ಜಯನಗರ 4ನೇ ಬ್ಲಾಕ್, ಹೊಂಬೇಗೌಡನಗರ, ಬೈರಸಂದ್ರ, ಎಲ್.ಎಲ್.ಆರ್, ಚಿಕ್ಕಲಾಲ್‍ಬಾಗ್, ಬನ್ನಪ್ಪ ಪಾರ್ಕ್, ಸುಧಾಮನಗರ -1, ಕತ್ರಿಗುಪ್ಪೆ, ಹೊಸಕೆರೆಹಳ್ಳಿ, ದೇವಗಿರಿ-1, ಇಟ್ಟಮಡು, ಬನಗಿರಿನಗರ, ಎ.ನಾರಾಯಣಪುರ, ದೊಡ್ಡನಕುಂದಿ, ವಿಜ್ಞಾನನಗರ, ಬಾಣಸವಾಡಿ, ಓ.ಎಂ.ಬಿ.ಆರ್., ಲಿಂಗರಾಜಪುರಂ, ಕಸ್ತೂರಿನಗರ, ಹಲಸೂರು, ದೊಮ್ಮಲೂರು, ಮಾರತ್‍ಹಳ್ಳಿ, ಕೋರಮಂಗಲ- 1&2, ವಿಜಯನಗರ ಓ.ಎಚ್.ಟಿ, ಮೂಡಲಪಾಳ್ಯ, ನಾಗರಬಾವಿ, ಅನ್ನಪೂರ್ಣೇಶ್ವರಿನಗರ, ಸರ್.ಎಂ.ವಿ ಲೇಔಟ್, ಮೂಡಲಪಾಳ್ಯ ಸೇವಾ ಠಾಣೆಗಳಲ್ಲಿ ಅದಾಲತ್ ನಡೆಯಲಿದೆ. ಸಾರ್ವಜನಿಕರು ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಮಂಡಳಿಯ 24/7 ದೂರು ನಿರ್ವಹಣಾ ಕೇಂದ್ರದ ಸಹಾಯವಾಣಿ 1916ಗೆ ಕರೆ ಮಾಡಿ ದೂರುಗಳನ್ನು ದಾಖಲಿಸಬಹುದು. ಹಾಗೂ ವಾಟ್ಸ್‍ಆಫ್ ಸಂಖ್ಯೆ 8762228888 ಸಂದೇಶದ ಮೂಲಕ ದೂರನ್ನು ಸಲ್ಲಿಸಬಹುದಾಗಿದೆ ಎಂದು ಬೆಂಗಳೂರು ಜಲ ಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Post a Comment
0Comments