ಎಲ್.ಎಸ್.ಎಸ್. ಅವರಷ್ಟು ಬೃಹತ್ ಸಾಹಿತ್ಯ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದರು

varthajala
0

 ತಮ್ಮ ಜೀವನದುದ್ದಕ್ಕೂ ಸಾಹಿತ್ಯವನ್ನು ಸೇವೆ ಎಂದು ತಿಳಿಯುವುದರ ಜೊತೆಗೆ ಆರಾಧನೆಯಾಗಿ ಮಾಡುತ್ತಾ, ಸಾಮಾಜಿಕ ಹೊಣಗಾರಿಕೆಯನ್ನು ಮರೆಯದೆ ಸಾಹಿತ್ಯದ ಮೂಲಕ ಮಾನವೀಯತೆಯನ್ನು ಸಾರಿದವರು  ಪ್ರೊ. ಎಲ್.ಎಸ್. ಶೇಷಗಿರಿರಾವ್ ಎಂದು ಹಿರಿಯ ಸಾಹಿತಿ ಡಾ.ಬಾಬು ಕೃಷ್ಣಮೂರ್ತಿಯವರು ಸಪ್ನ ಬುಕ್ ಹೌಸ್ ಹಾಗೂ ಕನ್ನಡ ಗೆಳೆಯರ ಬಳಗಗಳು ಹಮ್ಮಿಕೊಂಡಿದ್ದ ‘ಪ್ರೊ. ಎಲ್.ಎಸ್. ಶೇಷಗಿರಿರಾವ್ ಶತಮಾನೋತ್ಸವ ವರ್ಷ’ದ ಮಾಸದ ಮಾತು ಉಪನ್ಯಾಸ ಮಾಲೆಯ ಅಧ್ಯಕ್ಷ ನುಡಿಯಲ್ಲಿ ಹೇಳಿದರು.

                       
ಮೌಲ್ಯಗಳಿಗೆ ಬದ್ದವಾಗಿ ಜೀವನ ನಡೆಸಿ, ಯಾವುದೇ ಸಂದರ್ಭದಲ್ಲಿ ಅನ್ಯಾಯಕ್ಕೆ, ಅಮಿಷಗಳಿಗೆ ಒಳಗಾಗದೆ, ನಿಷ್ಠೆಯಿಂದ
ತಮ್ಮ ವೃತ್ತಿ ಬದುಕನ್ನು ಸವೆಸಿದರು. ಹಾಗೇ ತಮಗೆ ಒದಗಿ ಬಂದ ಸ್ಥಾನಗಳಿಗೆ ನ್ಯಾಯ ಒದಗಿಸಿ ಅದರ ಸಾಧ್ಯತೆ, ಗೌರವಹೆಚ್ಚಿಸಿದವರು. ಕನ್ನಡ ಸಾಹಿತ್ಯ ಲೋಕದಲ್ಲಿ ‘ಪ್ರೊ. ಎಲ್.ಎಸ್. ಶೇಷಗಿರಿರಾವ್ ಅವರಷ್ಟು ಬೃಹತ್ಸಾ ಹಿತ್ಯಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದವರು ವಿರಳ ಎಂದು ನುಡಿದರು.

 ಅಂಕಣ ಬರಹದ ಮೂಲಕ ಕನ್ನಡಿಗರ ಅರಿವು ವಿಸ್ತರಿಸಿದವರು

        ಸೃಜನಶೀಲ ಬರಹಗಳ ಮೂಲಕ  ಲೇಖಕ ತನ್ನ ಸಮಾಜದೊಂದಿಗೆ ಮುಖಾಮುಖಿ ಆಗುವುದಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ತನ್ನ ಅಂಕಣ ಬರಹಗಳ ಮೂಲಕ ಸಮಾಜದೊಂದಿಗೆ ಸಂವಾದಿಸಲು ಅವಕಾಶವಿದೆ. ಹಾಗೇ ಅಂಕಣಕಾರನಿಗೆ ಹೆಚ್ಚ ಸ್ವಾತಂತ್ರöವಿರುತ್ತದೆ ಎಂದು  ಎಲ್.ಎಸ್.ಶೇಷಗಿರಿರಾಯರ  ಅಂಕಣ ಬರಹಗಳನ್ನು ಕುರಿತು ಉಪನ್ಯಾಸ ನೀಡಿದ ಚ.ಹ.ರಘನಾಥ ಅವರು ಹೇಳಿದರು.  ಅಂಕಣ ಬರಹ ಸಾವಾಲಿನದು. ಬರಹದ ಸಾಧ್ಯತೆ ವಿಶಾಲವಾದದ್ದು. ಅಂಕಣಕಾರ ಸಮಾಜದ  ಎಲ್ಲ ಆಯಾಮಗಳನ್ನು ಕುರಿತು ಚರ್ಚಿಸಲು ಅವಕಾಶ ಇರುತ್ತದೆ. ಆದರೆ, ಇಷ್ಟು ವ್ಯಾಪಕ ಸಾಧ್ಯತೆಯಿರುವ  ಅಂಕಣಕಾರನಿಗೆ ಅಂಕಣ ಬರಹ ಒಂದು ಸವಾಲು,  

ಇಂಥ ಸವಾಲುಗಳನ್ನು ಎದುರಿಸಿದ  ಎಲ್.ಎಸ್.ಎಸ್. ಹಲವಾರು ಅರ್ಥ ಪೂರ್ಣ ಅಂಕಣ ಬರಹಗಳನ್ನು  ರಚಿಸಿದ್ದಾರೆ. ಅವರ ಅಂಕಣ ಬರಹದಲ್ಲಿ ಬೀದಿಯ ಹೆಣವಾಗಿದ್ದ ಅನಾಥ ಮುದುಕಿಯ ಫೋಟೋವು ವಿಷಯವಾಗಿದೆ. ಈ ಆಂಕಣದಲ್ಲಿ ಅವರು ಮಾನಿವಿಯತೆ ಮರೆತ ಸಮಾಜವನ್ನು ಚಿತ್ರಿಸುತ್ತಾರೆ. ಪ್ರಧಾನಿ ಪತ್ರಿಕೆಗಳ ಬಗ್ಗೆ ಆಡಿದ ಹಗುರ ಮಾತಿಗೆ ಅಂಕಣದ ಮೂಲಕ ಉತ್ತರಿಸುತ್ತಾರೆ. ಸಾವಿರಕ್ಕೂ ಹೆಚ್ಚು ಅಂಕಣ ಬರೆದಿರುವ ಎಲ್.ಎಸ್.ಎಸ್. ಸಾಧನೆ ಬೆರಗು ಮೂಡಿಸುತ್ತದೆ.

 ಪ್ರೊ.ಎಲ್.ಎಸ್. ಶೇಷಗಿರಿರಾವ್ ಅವರ ಪತ್ನಿ ಭಾರತಿ ಶೇಷಗಿರಿರಾವ, ಕನ್ನಡದ ಹಿರಿಯ ಹೊರಾಟಗಾರ ವ.ಚ. ಚನ್ನೇಗೌಡ ಅವರ ವಿಶೇಷ ಉಪಸ್ಥಿತಿ ಇದ್ದ ಈ ಸಭೆಯಲ್ಲಿ ಸಪ್ನ ಬುಕ್ ಹೌಸ್‌ನ ಮಾಲಿಕರಾದ ನಿತಿನ್ ಷಾ ಸ್ವಾಗತಿಸಿದರು. ಕನ್ನಡ ಗೆಳೆಯರ ಬಳಗದ ರಾ.ನಂ. ಚಂದ್ರಶೇಖರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಪ್ನ ಕನ್ನಡ ವಿಭಾಗದ ಮುಖ್ಯಸ್ಥ ಆರ್. ದೊಡ್ಡೇಗೌಡ ಕಾರ್ಯಕ್ರಮ ನಿರೂಪಣೆ ಮಾಡಿ ವಂದಿಸಿದರು.

  ಅಡಕದಲ್ಲಿ ಪತ್ರಿಕಾ ಹೇಳಿಕೆ  ಮತ್ತು ಫೋಟೊಗಳು ಇದೆ ಅದನ್ನು ಪ್ರಕಟಿಸಲು ಪ್ರಾರ್ಥನೆ

 ಆರ್. ದೊಡ್ಡೇಗ

  ಕನ್ನಡ ವಿಭಾಗ

  ಸಪ್ನ ಬುಕ್ ಹೌಸ್


                          

Post a Comment

0Comments

Post a Comment (0)