VARTHAJALA : ಪ್ರಜಾಪ್ರಭುತ್ವ ಉಳಿಯಲು, ಉತ್ತಮ ಜನಪ್ರತಿನಿಧಿ ಆಯ್ಕೆ ಮಾಡಲು ಕಡ್ಡಾಯವಾಗಿ ಮತದಾನ ಮಾಡಿ -ವಾಸವಿ ಶಿಕ್ಷಣ ಸಮೂಹ ಸಂಸ್ಥೆ ಕಾರ್ಯದರ್ಶಿ ಡಿ.ಆರ್.ವಿಜಯಸಾರಥಿ
ವಿಜಯನಗರ: ವಾಸವಿ ಸಮೂಹ ವಿದ್ಯಾಸಂಸ್ಥೆಯ ವಾಸವಿ ವಿದ್ಯಾರ್ಥಿಗಳಿಂದ ಮತದಾನದ ಮಹತ್ವ ಮತ್ತು ಕಡ್ಡಾಯ ಮತದಾನ ಮಾಡುವಂತೆ ಅರಿವು ಮೂಡಿಸಲು ಮತದಾನ ಜಾಗೃತಿ ಜಾಥ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ವಾಸವಿ ಸಮೂಹ ಶಿಕ್ಷಣ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಿ.ಆರ್.ವಿಜಯ ಸಾರಥಿರವರು 250ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಿಜಯನಗರ ಸುತ್ತಮುತ್ತಲು 7ಕಿಲೋ ಮೀಟರ್ ವರಗೆ ನಡಿಗೆ ಜಾಥ ಮಾಡಿ, ಸಾರ್ವಜನಿಕರಿಗೆ ಮತದಾನದ ಕುರಿತು ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿ.ಆರ್.ವಿಜಯ ಸಾರಥಿ, ಬೆಂಗಳೂರುನಗರ ಪ್ರದೇಶದಲ್ಲಿ ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ ಅದರೆ ಮತದಾನ ಮಾತ್ರ ಶೇಕಡ 50ರಷ್ಟು ಮಾತ್ರ ಮತದಾನವಾಗುತ್ತಿದೆ.
ವಿದ್ಯಾವಂತರು, ಜ್ಞಾನವಂತರು ಮತದಾನದಿಂದ ದೂರ ಉಳಿದರೆ ಉತ್ತಮ ಜನಪ್ರತಿನಿಧಿ ಆಯ್ಕೆಯಾಗುವುದಿಲ್ಲ , ಇದರಿಂದ ದುರಾಡಳಿತ ನಾವೇ ಸಹಕಾರಿಸಿದಂತೆ ಆಗುತ್ತದೆ.
ಅಂದು ನಮ್ಮ ಎಷ್ಟೆ ಕೆಲಸವಿದ್ದರು, ಸಮಯ ಬಿಡುವ ಮಾಡಿಕೊಂಡು ಉತ್ತಮ ಜನಪ್ರತಿನಿಧಿ ಆಯ್ಕೆ ಮಾಡಲು ಮತದಾನ ಮಾಡಿ .
ಸಂವಿಧಾನದಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಮತದಾನ ಮಾಡುವ ಹಕ್ಕು ನೀಡಿದೆ. ಪವಿತ್ರವಾದ ಮತವನ್ನು ಹಣ, ಹೆಂಡ, ಅಮಿಷಕ್ಕೆ ಒಳಗಾಗಿ ಮತ ನೀಡಬೇಡಿ, ನನ್ನ ಮತ ಮಾರಟಕ್ಕೆ ಇಲ್ಲ ಎಂದು ಹೇಳಿ ಮತಗಟ್ಟೆಗೆ ಹೋಗಿ ಮತ ಚಲಾಯಿಸಿ.
ವಿಶ್ವದ ಅತಿ ಡೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ದೇಶದ ಪ್ರಜಾಪ್ರಭುತ್ವ ಉಳಿಯಲು ಕಡ್ಡಾಯವಾಗಿ ಮತದಾನ ಮಾಡಿ ಎಂದು ಮನವಿ ಮಾಡಿದರು.ಕಾರ್ಯಕರ್ಮದಲ್ಲಿ ಕಾರ್ಯದರ್ಶಿಯಾದ ಡಿ.ಆರ್.ವಿಜಯಸಾರಥಿರವರು ಮತ್ತು ಪ್ರಾಂಶುಪಾಲರಾದ ಪದ್ಮ, ರಚನ, ಡಾ.ರಂಗಸ್ವಾಮಿ, ಸ್ವಾಭಾಗ್ಯ, ಲೋಹಿತ್ ಮತ್ತು ಏನ್.ಎಸ್ .ಎಸ್ ವಿದ್ಯಾರ್ಥಿಗಳು ಮತ್ತು ವಿಜಯನಗರ ಪೊಲೀಸ್ ಇಲಾಖೆ, ಬಿಬಿಎಂಪಿ ಅಧಿಕಾರಿ, ಸಿಬ್ಬಂದಿಗಳು ಜಾಥದಲ್ಲಿ ಪಾಲ್ಗೊಂಡಿದ್ದರು.