ಕಾಂಗ್ರೆಸ್ ಪಕ್ಷ ಬೆಂಬಲಿಸಲು ಪಿಟಿಸಿಎಲ್ ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ ನಿರ್ಧಾರ

varthajala
0

 ಬೆಂಗಳೂರು; ದಲಿತರು, ಸಂವಿಧಾನ ವಿರೋಧಿ, ಸಾಂವಿಧಾನಿಕ ಸಂಸ್ಥೆಗಳ ಮೇಲೆ ಪ್ರಭಾವ ಬೀರಿ ವಿಶ್ವಾಸ ಕುಸಿಯುವಂತೆ ಮಾಡುತ್ತಿರುವ  ಬಿಜೆಪಿ ಪಕ್ಷವನ್ನು ಸೋಲಿಸಲು ಮತ್ತು ಸಂವಿಧಾನ ರಕ್ಷಣೆಗಾಗಿ ಪ್ರಸಕ್ತ ಲೋಕಸಭಾ ಚುನಾವನೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ನಿರ್ಧರಿಸಲಾಗಿದೆ ಎಂದು ಪಿಟಿಸಿಎಲ್ ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಪಿಟಿಸಿಎಲ್ ಮಂಜುನಾಥ್, ರಾಜ್ಯದ ಎಲ್ಲಾ ಎಸ್.ಸಿ./ಎಸ್.ಟಿ. ಸಮುದಾಯದ ಪಿಟಿಸಿಎಲ್ ಕಾಯ್ದೆ ಭೂಮಿ ವಂಚಿತರು ಹಾಗೂ ಅವರ ಕುಟುಂಬಗಳು ಕಾಂಗ್ರೆಸ್ ಬೆಂಬಲಿಸಲು ನಿರ್ಧರಿಸಿವೆ. ಬಡವರ ಪರವಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಬೆಂಬಲ ನೀಡುತ್ತೇವೆ. ನಮ್ಮ 208 ದಿನಗಳ ಹೋರಾಟಕ್ಕೆ ಸ್ಪಂದಿಸಿ ಚುನಾವಣಾ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಅಧಿಕಾರಕ್ಕೆ ಬಂದ ಮೊದಲನೇ ಅಧಿವೇಶನದಲ್ಲೇ ಪಿಟಿಸಿಎಲ್ ಕಾಯ್ದೆಗೆ ಕಾಲಮಿತಿ ಅನ್ವಯಿಸುವುದಿಲ್ಲ ಎಂದು ತಿದ್ದುಮಾಡಿದ ಕಾಂಗ್ರೆಸ್ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು.


ಬಲಾಢ್ಯರ ಕುತಂತ್ರದಿಂದ ಶೋಷಿತ ಸಮುದಾಯಗಳ ಭೂ ಮಂಜೂರಾತಿ ಹಕ್ಕುಗಳನ್ನು ದುರ್ಬಲಗೂಳಿಸಿದ ಪೂರಕವಾದ ಸುಪ್ರೀಂ ಕೋರ್ಟ್‌ನಲ್ಲಿ 2017ರ  ನಿಕ್ಕಂಟಿ ರಾಮಲಕ್ಷ್ಮಿ ಮತ್ತು ಕರ್ನಾಟಕ ಸರ್ಕಾರದ ನಡುವಿನ ಪ್ರಕರಣದ ಆದೇಶದಿಂದ ಕಾಲಮಿತಿ  ಎಂಬ ಒಂದೇ ಕಾರಣದಿಂದ ಕಾನೂನುಬಾಹಿರ ಸಾವಿರಾರು ಪ್ರಕರಣಗಳು ವಜಾಗೊಂಡಿದ್ದವು. ಪಿಟಿಸಿಎಲ್ ಕಾಯ್ದೆಯನ್ನು ಸಂಪೂರ್ಣವಾಗಿ ದುರ್ಬಲಗೊಳಿಸಲು ಬಿಜೆಪಿ ಸರ್ಕಾರ ಕಾರಣವಾಗಿತ್ತು.
ಇದರಿಂದ ಸಾವಿರಾರು ಕುಟುಂಬಗಳು ಬೀದಿಪಾಲಾದವು. ಹಿಂದಿನ ಕಂದಾಯ ಸಚಿವ, ದಲಿತ ವಿರೋಧಿ ಆರ್. ಅಶೋಕ ಮತ್ತು ಇಡೀ ಮಂತ್ರಿಮಂಡಲ ದಲಿತರ ವಿರುದ್ಧವಾಗಿತ್ತು. ಅಂದಿನ ಸಚಿವರಾದ ಗೋವಿಂದ ಕಾರಜೋಳ ಅವರ ಬಳಿ ನ್ಯಾಯ ಕೇಳಿದರೆ ಪೋಲಿಸರ ಮೂಲಕ ನಮ್ಮನ್ನು ಹೊರ ದಬ್ಬಿದ್ದರು. ಆದರೆ ಹೊಸ ತಿದ್ದುಪಡಿ ಪ್ರಕಾರ ಪಿಟಿಸಿಎಲ್ ಕಾಯ್ದೆಯಲ್ಲಿ ಸಂಪೂರ್ಣ ನ್ಯಾಯ ಸಿಕ್ಕಲ್ಲವಾದರೂ ಸಹ ಚುನಾವಣೆ ಮುಗಿದ ತಕ್ಷಣ ಸರ್ಕಾರ  PTCL ಕಾಯ್ದೆಯ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಸುಪ್ರೀಂಕೋರ್ಟ್‌ ನಲ್ಲಿ ಮೇಲ್ಮನವಿ ಸಲ್ಲಿಸಸುವ ನಿರೀಕ್ಷೆಯಿದೆ ಎಂದು ಪಿಟಿಸಿಎಲ್ ಮಂಜುನಾಥ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ PTCL ಮಂಜುನಾಥ್ ಅಧ್ಯಕ್ಷರು, ಪಿ, ವೆಂಕಟೇಶ್, ಮಂಜುನಾಥ್ ಶಿರಾ, ನಾರಾಯಣಸ್ವಾಮಿ, ವೇಣುಗೋಪಾಲ ಮೌರ್ಯ, ರಘು ಕಾಮಾಕ್ಷಿಪಾಳ್ಯ, ಮಂಜುನಾಥ್ ಮರಾಟ, ಮುನಿಯಪ್ಪ ಮತ್ತು ರಾಮಬಾಬು ಉಪಸ್ಥಿತರಿದ್ದರು.

Post a Comment

0Comments

Post a Comment (0)