ರಾಜಾಜಿನಗರದ ಇಎಸ್‌ಐಸಿ ವೈದ್ಯಕೀಯ ಕಾಲೇಜಿನ ಘಟಿಕೋತ್ಸವ

varthajala
0

 ಬೆಂಗಳೂರು; ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾಗಿದ್ದು, ಏನನ್ನಾದರೂ ಸಾಧಿಸುವ ಛಲ ಮತ್ತು ಅನನ್ಯ ಸಾಮರ್ಥ್ಯ ವಿದ್ಯಾರ್ಥಿಗಳಲ್ಲಿದೆ ಎಂದು ನಿಮ್ಹಾನ್ಸ್ ನಿರ್ದೇಶಕರಾದ ಡಾ.ಪ್ರತಿಮಾ ಮೂರ್ತಿ ಹೇಳಿದ್ದಾರೆ.



ರಾಜಾಜಿನಗರದ ಇಎಸ್‌ಐಸಿ ವೈದ್ಯಕೀಯ ಕಾಲೇಜಿನಲ್ಲಿ ಆಯೋಜಿಸಿದ್ದ 7 ನೇ ಘಟಿಕೋತ್ಸವದಲ್ಲಿ 94 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಇದು ದೇಶದ ಅತ್ಯುತ್ತಮ ವೈದ್ಯಕೀಯ ಕಾಲೇಜಾಗಿದ್ದು, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಡಿ ಬರುತ್ತದೆ. ಕೋಟ್ಯಂತರ ವಿಮಾದಾರರಿಗೆ ಇದರಿಂದ ಅನುಕೂಲವಾಗಿದೆ. 

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಕಠಿಣ ಪರಿಶ್ರಮ, ಬದ್ಧತೆಯಂತಹ ಗುಣಗಳನ್ನು ಅಳವಡಿಸಿಕೊಂಡರೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ ಎಂದು ಹೇಳಿದರು.

ಈ ಸಮಾರಂಭದಲ್ಲಿ ಇಎಸ್‌ಐಸಿ ವೈದ್ಯಕೀಯ ಕಾಲೇಜಿನ ಡೀನ್‌ ಡಾ. ಸಂಧ್ಯಾ ಆರ್, ರಿಜಿಸ್ಟ್ರಾರ್ ಡಾ ಸುಚಿತ್ರ, ಡಾ ಚಂದ್ರಶೇಖರ್ ಹೆಚ್, ಡಾ.‌ ಶ್ರೀನಿವಾಸ್ ಪ್ರಭು, ಯೂನಿವರ್ಸಿಟಿ ಟಾಪರ್  ಡಾ. ಭಾವನಾಶ್ರೀ ಕಣ್ಣನ್, ಕಾಲೇಜ್ ಟಾಪರ್ ಡಾ. ಸಿ ಎಸ್ ಅರ್ಚನಾ ಮತ್ತಿತರರು ಗಣ್ಯರು ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸಿತರಿದ್ದರು.


Post a Comment

0Comments

Post a Comment (0)