ಬೆಂಗಳೂರು : ದಿನಾಂಕ 18 ಏಪ್ರಿಲ್ ರಂದು ಹುಬ್ಬಳ್ಳಿಯ ಕಾಲೇಜಿನಲ್ಲಿ ಎಮ್ ಸಿ ಎ ವಿದ್ಯಾರ್ಥಿನಿ ನೇಹಾ ಹಿರೇಮಠ ಇವರನ್ನು ಫಯಾಜ್ ಎಂಬುವವನು ಕಾಲೇಜು ಕ್ಯಾಂಪಸ್‌ನಲ್ಲಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆಯನ್ನು ಖಂಡಿಸಿ ಇಂತಹ ಲವ್ ಜಿಹಾದ್ ಘಟನೆಗಳ ಮೇಲೆ ಗಂಭೀರ ಮತ್ತು ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಮತ್ತು ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಸಮಸ್ತ ಹಿಂದೂ ಸಂಘಟನೆಗಳಿಂದ ಬೆಂಗಳೂರಿನಲ್ಲಿ ಮಾನ್ಯ ರಾಜ್ಯಪಾಲರ ಕಚೇರಿಯಲ್ಲಿ ಮನವಿ ನೀಡಲಾಯಿತು. ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶರತ್ ಕುಮಾರ್, ರಾಷ್ಟ್ರೀಯ ಹಿಂದೂ ಪರಿಷತ್ ನ ರಾಜ್ಯಾಧ್ಯಕ್ಷರಾದ ಶ್ರೀ. ಸುರೇಶ್ ಗೌಡ, ದುರ್ಗಾ ಸೇನೆಯ ಬೆಂಗಳೂರು ಜಿಲ್ಲಾಧ್ಯಕ್ಷರಾದ ಸೌ. ಭವ್ಯ, ಶ್ರೀರಾಮ ಸೇನೆಯ ಬೆಂಗಳೂರು ಜಿಲ್ಲಾಧ್ಯಕ್ಷರಾದ ಶ್ರೀ. ಎಸ್. ಭಾಸ್ಕರನ್, ಹಿಂದೂ ಮುಖಂಡರಾದ ಶ್ರೀ. ಅಮರನಾಥ್ ಮತ್ತಿತರರು ಉಪಸ್ಥಿತರಿದ್ದರು.
( ಉಪಸ್ಥಿತ ಹಿಂದೂ ಸಂಘಟನೆಗಳ ಮುಖಂಡರು)
ಈ ಸಂಧರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶರತ್ ಕುಮಾರ್ ಇವರು ಮಾತನಾಡಿ, ಈ ಹಿಂದೆ ದೆಹಲಿಯಲ್ಲಿ ಶ್ರದ್ಧಾ ವಾಲ್ಕರ್ ಎಂಬ ಯುವತಿಯನ್ನು ಇದೇ ರೀತಿಯಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಇಂದು ಲವ್ ಜಿಹಾದ್ ಹೆಸರಿನಲ್ಲಿ ಕಾಲೇಜು ಹಿಂದೂ ಯುವತಿಯರನ್ನು ನಕಲಿ ಪ್ರೇಮದ ಜಾಲದಲ್ಲಿ ಸಿಲುಕಿಸಿ, ಅವರನ್ನು ಇಸ್ಲಾಂಗೆ ಮತಾಂತರ ಮಾಡುವ ಅಥವಾ ಅವರನ್ನು ಬರ್ಬರವಾಗಿ ಹತ್ಯೆ ಮಾಡುವ ಘಟನೆ ಯೆಥೇಚ್ಚವಾಗಿ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಿರಂತರವಾಗಿ ನಡೆಯುತ್ತಿದೆ. ಈ ಘಟನೆಗಳು ಅತ್ಯಂತ ಗಂಭೀರವಾಗಿದೆ. ಇದರ ಹಿಂದೆ ವ್ಯವಸ್ಥಿತ ಜಿಹಾದಿ ಮತಾಂಧರ ಗ್ಯಾಂಗ್ ಕೆಲಸ ಮಾಡುತ್ತಿದ್ದು, ಇದು ದೇಶದ ಭದ್ರತೆಗೆ ಅತ್ಯಂತ ಅಪಾಯಕಾರಿಯಾಗಿದೆ. ಆದರೆ ಕರ್ನಾಟಕ ಸರಕಾರವು ಇದನ್ನು ವೈಯಕ್ತಿಕ ಕಾರಣದ ನೆಪವೊಡ್ಡಿ ಪ್ರಕರಣವನ್ನು ದುರ್ಲಕ್ಷ್ಯ ಮಾಡುವುದು ಗಮನಕ್ಕೆ ಬರುತ್ತಿದೆ. ಇದರಿಂದ ಈ ಘಟನೆಗಳು ಪುನಃ ಪುನಃ ಮರುಕಳುಸುತ್ತಿದೆ. ಹಾಗಾಗಿ ಈ ರೀತಿ ಲವ್ ಜಿಹಾದ್ ಘಟನೆಯಲ್ಲಿ ಭಾಗಿಯಾದ ಅಪರಾಧಿಗಳು, ಅದಕ್ಕೆ ಕುಮ್ಮಕ್ಕು ನೀಡುವವರು ಹಾಗೂ ಆರ್ಥಿಕ ಸಹಾಯ ಮಾಡುವವರ ಕೂಲಂಕುಷವಾದ ತನಿಖೆಯನ್ನು ಮಾಡಬೇಕು, ಇಂತಹ ಲವ್ ಜಿಹಾದ್ ಘಟನೆಗಳಲ್ಲಿ ಸಿಲುಕಿಕೊಂಡ ಯುವತಿಯರಿಗೆ ಈ ಪ್ರಸಂಗದಿಂದ ಹೊರಬರಲು ಸರಕಾರವು ವಿಶೇಷ ಪೋಲಿಸ್ ಸಹಾಯ ಕೊಠಡಿಯನ್ನು ತೆರೆಯಬೇಕು ಮತ್ತು ಈ ಎಲ್ಲ ಪ್ರಕರಣಗಳನ್ನು ತನಿಖೆ ಮಾಡಲು ವಿಶೇಷ ತನಿಖಾದಳವನ್ನು ಸ್ಥಾಪನೆ ಮಾಡಬೇಕು' ಎಂದು ಆಗ್ರಹಿಸಿದರು.
( ಮಾನ್ಯ ರಾಜ್ಯಪಾಲರ ಕಚೇರಿಯಲ್ಲಿ ಕಾರ್ಯದರ್ಶಿಗಳಿಗೆ ಮನವಿ ನೀಡುತ್ತಿರುವ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶರತ್ ಕುಮಾರ್)
ಶ್ರೀ. ಮೋಹನ್ ಗೌಡ,
ಸಮಸ್ತ ಹಿಂದೂ ಸಂಘಟನೆಗಳ ಪರವಾಗಿ
ಸಂಪರ್ಕ : 7204082609