ಶ್ರೀ ಗುರು ರಾಘವೇದ್ರ ಕೋಆಪರೇಟಿವ್ ಬ್ಯಾಂಕ್ ಠೇವಣಿಗಾರರಿಗೆ ಸಂಸದ ತೇಜಸ್ವಿ ಸೂರ್ಯ ದ್ರೋಹ ಬಗೆದಿದ್ದು,ಇದರಿಂದ ಸಾವಿರಾರು ಠೇವಣಿದಾರರು ಬೀದಿಗೆ ಬಿದ್ದಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಶಂಕರ್ ಗುಹಾ ಆರೋಪಿಸಿದ್ದಾರೆ.
46 ಸಾವಿರ ಠೇವಣಿದಾರರನ್ನ ಹೊಂದಿರುವ ಈ ಪ್ರತಿಷ್ಟಿತ ಬ್ಯಾಂಕ್ ನಲ್ಲಿ ಸುಮಾರು 2400 ಕೋಟಿ ರೂಪಾಯಿಗಳ ಹಗರಣ ನಡೆದಿದ್ದು, ಅಂದರೆ ಠೇವಣಿದಾರರ ಹಣವನ್ನು ಅನರ್ಹರಿಗೆ, ತಮ್ಮ ಸಂಬಂಧಿಕರಿಗೆ ಮತ್ತು ತಮಗೆ ಬೇಕಾದವರಿಗೆ ತೇಜಸ್ವಿ ಸೂರ್ಯ ಸಾಲ ಕೊಡಿಸಿದ್ದಾರೆ. ಇದೇರೀತಿ ಬ್ಯಾಂಕ್ ಅಧ್ಯಕ್ಷರೂ ಅಕ್ರಮ ನಡೆಸಿದ್ದಾರೆ. ಈಗ ಸಾಲ ವಸೂಲಿ ಮಾಡಿ ಠೇವಣಿದಾರರ ಹಣ ವಾಪಸ್ ಮಾಡದೆ ಅಕ್ರಮ ನಡೆಸಿರುವವರನ್ನು ರಕ್ಷಣೆ ಮಾಡುವಲ್ಲಿ ತೇಜಸ್ವಿ ಸೂರ್ಯ ಯಶಸ್ವಿಯಾಗಿದ್ದಾರೆ. ಇದನ್ನು ಪ್ರಶ್ಸಿಸುವ
ಠೇವಣಿದಾರರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಗುಹಾ ಹೇಳಿದ್ದಾರೆ.
ಠೇವಣಿ ಮಾಡಿದ್ದ ಅನೇಕರು ಹೋರಾಟ ಮಾಡಿ ಬೇಸತ್ತು ಹೋಗಿದ್ದಾರೆ. ಅನೇಕರು ಬೀದಿಗೆ ಬಂದಿದ್ದಾರೆ. ಅಷ್ಟೇ ಏಕೆ ಸುಮಾರು 200 ಮಂದಿ ಸತ್ತೇ ಹೋಗಿದ್ದಾರೆ. ಇವರಿಗೆ ನ್ಯಾಯ ಕೊಡಿಸುವುದಾಗಿ ಹೇಳುತ್ತಿದ್ದ ತೇಜಸ್ವಿ ಸೂರ್ಯ ಈಗ ಅವ್ಯವಹಾರ ನಡೆಸಿದರ ಪರ ನಿಂತು ಠೇವಣಿದಾರರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕಳೆದ ಚುನಾವಣೆ ಸಂದರ್ಭದಲ್ಲಿ ಇದೇ ತೇಜಸ್ವಿ ಸೂರ್ಯ ಅವರು ಠೇವಣಿದಾರರ ನಿರಂತರ ಸಭೆ ನಡೆಸಿ ಹಣ ಎಲ್ಲಿಯೂ ಹೋಗುದಿಲ್ಲ. ಇನ್ನು 6 ತಿಂಗಳಲ್ಲಿ ಎಲ್ಲರಿಗೂ ಸಿಗುತ್ತದೆ. ಯಾರಿಗೂ ಅನ್ಯಾಯ ಆಗುವುದಿಲ್ಲ. ನ್ಯಾಯ ಕೊಡಿಸುತ್ತೇನೆ ಎಂದು ಹೇಳಿದ್ದರು. ಅಷ್ಟೇ ಅಲ್ಲ. ಈ ಬ್ಯಾಂಕ್ ನ ಪಿನ್ ಟೇಕ್ ಸಂಸ್ಥೆ ತೆಗೆದುಕೊಂಡು ಎಲ್ಲವನ್ನೂ ಸರಿಪಡಿತ್ತದೆ ಎಂದಿದ್ದರು. ಹಾಗೇಯೆ ಠೇವಣಿದಾರರಿಗೆ ಹಣ ಹೇಗೆ ವಾಪಸ್ ಬರುತ್ತದೆ ಎಂದು ಪಿಪಿಟಿ ಮೂಲಕ ವಿವರಿಸುತ್ತೇನೆ ಎಂದೂ ಹೇಳಿದ್ದರು. ಆದರೆ ಈಗ ಠೇವಣ ಹಣ ವಾಪಸ್ ಬರುವ ಬಗ್ಗೆ ಮಾತನಾಡುತ್ತಲೇ ಇಲ್ಲ. ಬದಲಾಗಿ ಠೇವಣಿದಾರರನ್ನೇ ತಪ್ಪಿತಸ್ತರು ಎನ್ನುವಂತೆ ಮಾತನಾಡುತ್ತಿದ್ದಾರೆ ಎಂದರು.
ಗುರು ರಾಘವೇದ್ರ ಕೋಆಪರೇಟಿವ್ ಬ್ಯಾಂಕ್ ನಲ್ಲಿ ಬೆಂಗಳೂರಿನ ಬ್ರಾಹ್ಮೀ ಹಾಗೂ ಮಹಾಗಣಪತಿ ಸೇರಿದಂತೆ 120ಕ್ಕೂ ಹೆಚ್ಚಿನ ಸೊಸೈಟಿಗಳು 500 ಕೋಟಿಗಳನ್ನು ಈ ಬ್ಯಾಂಕಿನಲ್ಲಿ ಹೂಡಿಕೆ ಮಾಡಿವೆ. ಪ್ರತಿ ಸೊಸೈಟಿಯಲ್ಲೂ ಕನಿಷ್ಟ 2000 ಮಂದಿ ಠೇವಣಿದಾರರಿದ್ದು, ಎಲ್ಲಾ 120 ಸೊಸೈಟಿಗಳಲ್ಲಿ ಸುಮಾರು 2ಲಕ್ಷಕ್ಕೂ ಅಧಿಕ ಮಂದಿ ಠೇವಣಿದಾರರು ಹಣ ಇರಿಸಿದ್ದರು. ಇವರೆಲ್ಲರ ಹಣ ರಾಘವೇಂದ್ರ ಬ್ಯಾಂಕ್ ನಲ್ಲಿ ಠೇವಣಿಯಾಗಿತ್ತು. ಅದರ ಮೊತ್ತ ಸುಮಾರು 500 ಕೋಟಿ ರೂ. ಯಾವಾಗ ವಾಪಸ್ ಕೊಡಿಸುವುದಾಗಿ ತೇಜಸ್ವಿ ಸೂರ್ಯ ಹೇಳಿದ್ದರು. ಆದರೆ ತೇಜಸ್ವಿ ಸೂರ್ಯ ಈಗ ಠೇವಣಿದಾರರನ್ನೇ ಹತ್ತಿರಕ್ಕೆ ಸೇರುತ್ತಿಲ್ಲ ಎಂದರು ಟೀಕಿಸಿದ್ದಾರೆ. ಠೇವಣಿದಾರರ ಒತ್ತಾಯದಂತೆ ಗುರು ರಾಘವೇದ್ರ ಕೋಆಪರೇಟಿವ್ ಬ್ಯಾಂಕ್ ಹಗರಣದ ಸಿಐಡಿ ತನಿಖೆ ನಡೆದಿದ್ದು, ಇದರಲ್ಲಿ 1400 ಕೋಟಿ ಅಕ್ರಮ ನಡೆದಿದೆ ಎಂದು ಮಧ್ಯಂತರ ವರದಿಯೂ ಸರಕಾರಕ್ಕೆ ಸಲ್ಲಿಕೆಯಾಗಿತ್ತು. ಆದರೂ ಈತನಕ ಯಾರನ್ನ ಬಂಧಿಸದಂತೆ ತೇಜಸ್ವಿ ಸೂರ್ಯ ಪ್ರಭಾವ ಬಳಸಿ ರಕ್ಷಿಸಿದ್ದಾರೆ ಎಂದು ಗುಹಾ ಆಪಾದಿಸಿದ್ದಾರೆ.
ReplyForward |