ನಕಲಿ ಕಾವೇರಿ ಬಗ್ಗೆ ಎಚ್ಚರ: ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ

varthajala
0

 ಬೆಂಗಳೂರು, ಏಪ್ರಿಲ್ 04 (ಕರ್ನಾಟಕ ವಾರ್ತೆ):


ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಕರ್ನಾಟಕ ಸರ್ಕಾರದ ಉದ್ದಿಮೆ, ರಾಜ್ಯದ ಸಾವಿರಾರು ಕುಶಲಕರ್ಮಿಗಳ ಬೆನ್ನೆಲುಬಾಗಿ ಕರಕುಶಲ ಕಲೆಗಳ ಮೇಲೆ ಅವಲಂಬಿತರಾಗಿರುವ ಕರಕುಶಲಕರ್ಮಿಗಳ ಹಾಗೂ ಅವರ ಕುಟುಂಬದ ಶ್ರೆಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಕರಕುಶಲ ವಲಯಕ್ಕೆ ಪೂರಕ ವಾತಾವರಣ ಸೃಷ್ಠಿಸಿ ಕರಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳಿಗೆ ರಾಜ್ಯಾದ್ಯಂತ ತನ್ನ ವಿಶ್ವವಿಖ್ಯಾತ 12  ‘ಕಾವೇರಿ’  ಆಟ್ರ್ಸ್ ಮತ್ತು ಕ್ರಾಫ್ಟ್ ಎಂಪೋರಿಯಂ ಮೂಲಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದೆ.

ಸುಮಾರು 1 ಶತಮಾನದಿಂದ ಅಸ್ತಿತ್ವದಲ್ಲಿರುವ ನಿಗಮದ ಫ್ಲಾಗ್‍ಶಿಪ್ ಕಾವೇರಿ ಮಾರಾಟ ಮಳಿಗೆಯು ಬೆಂಗಳೂರಿನ ಮಹಾತ್ಮಗಾಂಧಿ ರಸ್ತೆಯಲ್ಲದೆ ಬೆಂಗಳೂರು ನಗರದ ಪ್ರಮುಖ ಸ್ಥಳದಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರಿಗೆ ಭೇಟಿ ನೀಡುವ ದೇಶ ವಿದೇಶದ ಪ್ರಮುಖರು, ಗಣ್ಯರು ಸದರಿ ಮಳಿಗೆಗೆ ಭೇಟಿ ನೀಡುತ್ತಾರೆ. ಇದಕ್ಕೆ ಪ್ರಮುಖ ಕಾರಣ ರಾಜ್ಯದ ಪಾರಂಪರಿಕೆ ಮತ್ತು ವಿವಿಧ ಕರಕುಶಲ ಕಲೆಗಳ ಉತ್ಕøಷ್ಟ ಉತ್ಪನ್ನಗಳು ನ್ಯಾಯಯುತ ಬೆಲೆಗೆ ಕಾವೇರಿ ಮಳಿಗೆಯಲ್ಲಿ ದೊರೆಯುತ್ತವೆ. ಈ ಪ್ರತಿಷ್ಠಿತ ಬ್ರಾಂಡ್ ಲೋಗೊ ಮತ್ತು ಶೈಲಿಯನ್ನು ಸೂಕ್ಷ್ಮವಾಗಿ ಮಾರ್ಪಾಡು ಮಾಡಿ ಅನೇಕ ಖಾಸಗಿ ಮಳಿಗೆಗಳು ಜನಸಾಮಾನ್ಯರಿಗೆ ವಂಚಿಸುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ. ಈ ಬ್ರಾಂಡ್ ಹೆಸರನ್ನು ದುರುಪಯೋಗಪಡಿಸಿಕೊಂಡು ಕಳಪೆ ಕರಕುಶಲ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಮಳಿಗೆಗಳಲ್ಲಿ ಉತ್ಪನ್ನ ಖರೀದಿಸಿರುವ ಗ್ರಹಾಕರಿಂದ ನಿಗಮಕ್ಕೆ ಹಲವಾರು ದೂರುಗಳು ಬರುತ್ತಿವೆ.

ಹೆಚ್ಚುತ್ತಿರವ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಕರಕುಶಲ ಸಬಲೀಕರಣ ಮತ್ತು ಸಂರಕ್ಷಣೆಗಾಗಿ ಹಾಗೂ ಪಾರಂಪರಿಕ ಕರಕುಶಲ ಕಲೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಶ್ರಮಿಸುತ್ತಿರುವ ನಿಗಮದ ಬಗ್ಗೆ ಹಾಗೂ ಕಾವೇರಿ ಗ್ರಾಹಕರನ್ನು ದಾರಿ ತಪ್ಪಿಸುತ್ತಿರುವ ನಕಲಿ ಮಳಿಗೆಗಳ ಜನಸಮಾನ್ಯರ ಬಗ್ಗೆ ಅರಿವು ಮೂಡಿಸುವುದು ಅವಶ್ಯಕ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಜಿ.ವಿಶ್ವನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)