ಕನ್ನಡ ಅನ್ನದ ಭಾಷೆಯಾಗಲು ಎಲ್ಲ ಕ್ಷೇತ್ರಗಳ ಜ್ಞಾನ ಕನ್ನಡದಲ್ಲಿ ಸಿಗುವಂತಾಗಬೇಕು ರಾ. ನಂ.ಚಂದ್ರಶೇಖರ

varthajala
0

ಕಂಪ್ಯೂಟರ್ ಸಾಕ್ಷರತೆ ಇಂದಿನ ಅಗತ್ಯವಾಗಿದೆಜಾಗತಿಕ ಜಗತ್ತಿ ಪ್ರಚಲಿತ ಬೆಳವಣಿಗೆ ತಿಳಿಯಲು ಗಣಕದ ಅರಿವು ಅನಿವಾರ್ಯವಾಗಿದೆಕನ್ನಡ ಪ್ರಸ್ತುತವಾಗ ಬೇಕಾದರೆ ಗಣಕದಲ್ಲಿ ಕನ್ನಡ ಬಳಕೆ ವ್ಯಾಪಕವಾಗಬೇಕುಅದನ್ನು ಮನಗಂಡು ಗಣಕದಲ್ಲಿ ಕನ್ನಡ ತಂತ್ರಾಂಶ ಕಲಿಕೆಯ ಕೋರ್ಸ್ ಆರಂಬಿಸಿರುವ ಸಂಘದ  ಕಾರ್ಯ ಶ್ಲಾಘನೀಯವಾದ್ದು ಎಂದು ಎಚ್..ಎಲ್.ಕೇಂದ್ರೀಯ ಕನ್ನಡ ಸಂಘವು ವ್ಯವಸ್ತೆ ಮಾಡಿದ್ದ ‘ಗಣಕದಲ್ಲಿ ಕನ್ನಡ ತಂತ್ರಾಂಶ ಕಲಿಕಾ ತರಗತಿ’ ಉದ್ಘಾಟನೆ ಹಾಗೂ ಮತ್ತು ‘ಮಾಸದ ಮಾತು’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಕನ್ನಡ ಚಿಂತಕ ರಾ.ನಂಚಂದ್ರಶೇಖರ ನುಡಿದರುಕನ್ನಡ ಸಾಹಿತ್ಯ ಶ್ರೀಮಂತವಾಗಿದೆಅದರಿಂದ ಕನ್ನಡ ಅನ್ನದ ಭಾಷೆಯಾಗುವುದಿಲ್ಲಕನ್ನಡದಲ್ಲಿ ಇಂದಿನ ಅಗತ್ಯವಾದ ವಿಜ್ಞಾನ-ತಂತ್ರಜ್ಞಾನದ ಜ್ಞಾನವೂ ಸೇರಿದಂತೆ ಎಲ್ಲ ವಿಷಯಗಳು ಕನ್ನಡದಲ್ಲಿ ಸಿಗುವಂತಾದರೆ ಕನ್ನಡ ಅನ್ನದ ಭಾಷೆಯಾಗುತ್ತದೆ ನಿಟ್ಟಿನಲ್ಲಿ ಜಗತ್ತಿನ ಜ್ಞಾನಗಳಿಗೆ ಕಿಂಡಿಯಾಗಿರುವ ಗಣಕದ ಅರಿವು ಮೂಡಿಸುವ  ಕೆಲಸ ಮೊದಲ ಹೆಜ್ಜೆಯಾಗಿದೆ ಎಂದರು.

ತಂತ್ರಜ್ಞಾನವನ್ನು ಭಾಷೆಯೊಡನೆ ಸಂವಹಿಸದಾಗ  ಬಾಷೆಯು ಹೆಚ್ಚು ಪ್ರಸ್ತುತವಾಗುತ್ತದೆಗಣಕದಲ್ಲಿ ಕನ್ನಡ ಕಲಿಕೆಯಿಂದ ನಮ್ಮ ಜ್ಞಾನವಷ್ಟೇ ವೃದ್ಧಿಸುವುದಿಲ್ಲನಮ್ಮ ಆತ್ಮವಿಶ್ವಾಸ ಹೆಚ್ಚಿ ಸ್ವಾಭಿಮಾನವೂ ಜಾಗೃತವಾಗುತ್ತದೆ ಎಂದು ಇನ್ನೊಬ್ಬ ಅತಿಥಿ ಕನ್ನಡ ಗಣಕ ಪರಿಷತ್ತಿನ ಕಾರ್ಯದರ್ಶಿ ಜಿ.ಎನ್ನರಸಿಂಹಮೂರ್ತಿ ನುಡಿದರು.

 ಎಚ್..ಎಲ್ಕಾರ್ಮಿಕ ಸಂಘದ ಅಧ್ಯಕ್ಷ ಮಹೇಶ್ ಅಂಗಡಿಯವರು ಮಾತನಾಡಿ ಕನ್ನಡ ಕೆಲಸಗಳಿಗೆ ಕಾರ್ಮಿಕ ಸಂಘದ ಬೆಂಬಲ ಇರಲಿದೆಆಡಳಿತ ವರ್ಗವು ಕನ್ನಡ ಸಂಘಟನೆಗಳ ಕೆಲಸಗಳಿಗೆ ತಾಯಿ ಸ್ಥಾನದಲ್ಲಿ ನಿಂತು ಪ್ರೋತ್ಸಾಹಿಸುವಂತೆ  ವೇದಿಕೆಯ ಮೂಲಕ ಕೋರುವುದಾಗಿ ತಿಳಿಸಿದರು

ಕನ್ನಡ ನಾಡು ವೀರ ವನಿತೆಯರ ಬೀಡು:

ಎರಡು ಸಾವಿರ ವರ್ಷಗಳ ಹಿಂದಿನ ಆಶೋಕನ ಶಾಸನಗಳಲ್ಲಿ ಕನ್ನಡನಾಡಿನ ವನಿತೆಯರ ವೀರಗಾಥೆಗಳ ಉಲ್ಲೇಖವಿದೆ ಎಂದು ‘ಕನಾಟಕದ ವೀರ ವನಿತೆಯರು’ ಎಂಬ ಉಪನ್ಯಾಸ ನೀಡಿದ ಡಾಸಂಧ್ಯಾ ವಿಹೇಳಿ ಚಾಲುಕ್ಯರ ಕಾಲದ ವಿಜಯ ಭಂಡಾಲಿಕೆಯಿಂದ ಕಿತ್ತೂರು ರಾಣಿ ಚನ್ನಮ್ಮನವರೆಗೆ ನೂರಾರು ವೀರ ವನಿತೆಯರು ತಮ್ಮ ಶೌರ್ಯದಿಂದ ಕರ್ನಾಟಕದ ಹಿತವನ್ನು ಕಾಪಾಡಿದ್ದಾರೆಮೊಘಲರುಮರಾಠರುಬ್ರಿಟೀಷರುಗಳನ್ನು ಸೋಲಿಸಿದ್ದಾರೆಆದರೆಅವುಗಳನ್ನು ಜನರಿಗೆ ತಲುಪಿಸುವ ಕೆಲಸ ಆಗಿಲ್ಲ ಎಂದರು

ಪ್ರಾರಂಭದಲ್ಲಿ ಮಾನವ ಸಂಪನ್ಮೂಲ ಇಲಾಖೆ ಮಹಾವ್ಯವಸ್ಥಾಪಕ ಎಂ.ಜಿಬಾಲಸುಬ್ರಮಣ್ಯ ‘ಗಣಕದಲ್ಲಿ ಕನ್ನಡ ತಂತ್ರಾಂಶ ಕಲಿಕಾ ತರಗತಿ’ ಉದ್ಘಾಟಿಸಿದರುಸಂಘದ ಅಧ್ಯಕ್ಷ ಡಿ ರಾಜೇಶ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸಂಘದ ಸದಸ್ಯರ ಹಂಬಲಕ್ಕೆ ಬೆಂಬಲಿಸಿ ನಾಡಿನ ಕೈಗಾರಿಕೆಗಳಲ್ಲಿ ಪ್ರಥಮಬಾರಿಗೆ ಕನ್ನಡವನ್ನು ಗಣಕದಲ್ಲಿ ಕಲಿಸುವ ತರಗತಿಯನ್ನು ಸಂಘ ಆರಂಬಿಸಿದೆಇದರ ಉಪಯೋಗವನ್ನು ಸಂಘದ ಸದಸ್ಯರುಕುಟುಂಬದವರು ಪಡೆದುಕೊಳ್ಳಬೇಕೆಂದರುಸಂಘದ ಕಾರ್ಯದರ್ಶಿ ದೇವರಾಜ್ ಕೆ.ಡಿಸ್ವಾಗತಿಸದರುಸಮಾರಂಭದಲ್ಲಿ ಕರ್ನಾಟಕ ಕಾರ್ಮಿಕಲೋಕದ ಬಿ.ವಿ.ರವಿಕುಮರ್ ಮತ್ತು ಕಾರ್ಖಾನೆಯ ವಿವಿದ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರುಪ್ರಧೀಪ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು . 

  ದೇವರಾಜ್ ಕೆ.ಡಿ

   ಕಾರ್ಯದರ್ಶಿ

ಎಚ್..ಎಲ್.ಕೇಂದ್ರೀಯ ಕನ್ನಡ ಸಂಘ  

Post a Comment

0Comments

Post a Comment (0)