ರೋಗಿಗಳಿಗೆ ಹೆಚ್ಚಿನ ಸುರಕ್ಷತೆ ಒದಗಿಸಲು ಡೋಝಿಯ ಸಂಪರ್ಕ ರಹಿತ ರಿಮೋಟ್ ಪೇಷೆಂಟ್ ಮಾನಿಟರಿಂಗ್ ವ್ಯವಸ್ಥೆ

varthajala
0

 ಬೆಂಗಳೂರು, ಭಾರತ, 12 ಏಪ್ರಿಲ್ 2024: 162 ಹಾಸಿಗೆಗಳನ್ನು ಹೊಂದಿರುವ ಇಂಟಿಗ್ರೇಟೆಡ್ ಮಲ್ಟಿ-ಸ್ಪೆಷಾಲಿಟಿ ಟರ್ಷಿಯರಿ ಕೇರ್ ಹಾಸ್ಪಿಟಲ್ ಆಗಿರುವ ಜಯದೇವ್ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಡೋಝಿಯ ಸುಧಾರಿತ ಎಐ ಆಧರಿತ ಸಂಪರ್ಕರಹಿತ, ಕಂಟಿನ್ಯೂಯಸ್ ಪೇಷೆಂಟ್ ಮಾನಿಟರಿಂಗ್ ಆಂಡ್ ಅರ್ಲಿ ವಾರ್ನಿಂಗ್ ಸಿಸ್ಟಮ್ (ಇಡಬ್ಲ್ಯೂಎಸ್) ಅಳವಡಿಸಿಕೊಂಡಿರುವುದಾಗಿ ಘೋಷಿಸಿದೆ. ಹೊಸ ವ್ಯವಸ್ಥೆ ಅನುಷ್ಠಾನದ ಮೂಲಕ ಜಯದೇವ್ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆಯು ರಾಷ್ಟ್ರೋತ್ಥಾನ ಪರಿಷತ್ತಿನೊಂದಿಗೆ ಸಂಯೋಜಿತವಾಗಿರುವ ದಕ್ಷಿಣ ಭಾರತದ ಆಸ್ಪತ್ರೆಗಳಲ್ಲಿಯೇ ವ್ಯವಸ್ಥೆ ಅಳವಡಿಸಿಕೊಂಡಿರುವ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆ ಗಳಿಸಿದೆ. ಮೂಲಕ ರೋಗಿಗಳ ಸುರಕ್ಷತೆ, ನಿರಂತರ ಕಾಳಜಿ ಮತ್ತು ರೋಗಿಗಳ ಆರೈಕೆಯ ಗುಣಮಟ್ಟವನ್ನು ಹೆಚ್ಚಿಸಲು "ಮೇಡ್ ಇನ್ ಇಂಡಿಯಾ' ತಂತ್ರಜ್ಞಾನವನ್ನು ಬಳಸಿಕೊಂಡಿದೆ.

                             

ಜಯದೇವ್ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿರುವ ನಾನ್-ಐಸಿಯು ವಾರ್ಡ್ ಬೆಡ್‌ಗಳು ಮುಂದಿನ ಪೀಳಿಗೆಯ ಅತ್ಯಾಧುನಿಕ ಸಂಚಾರಿ- ಸಂಪರ್ಕಿತ ರೋಗಿಗಳ ನಿಗಾ ವಹಿಸುವ ವ್ಯವಸ್ಥೆ ಹೊಂದಿದೆ. ಜೊತೆಗೆ ಅದು ಡೋಝಿಯ ಅರ್ಲಿ ವಾರ್ನಿಂಗ್ ಸಿಸ್ಟಮ್ ವ್ಯವಸ್ಥೆಯನ್ನೂ ಹೊಂದಿದ್ದು, ಸಂಪರ್ಕರಹಿತವಾಗಿ ನಿರಂತರವಾಗಿ ರೋಗಿಗಳ ನಿಗಾವಹಿಸುವಿಕೆಯ ಕೆಲಸವನ್ನು ಮಾಡುತ್ತದೆ. ಡೋಝಿಯ ಉತ್ಪನ್ನವು ಕ್ಲೌಡ್-ಆಧರಿತವಾಗಿದೆ. ರೋಗಿಗಳ ಸುರಕ್ಷತೆಗಾಗಿ ಹಾಗೂ ಉತ್ತಮ ಚಿಕಿತ್ಸಾ ಫಲಿತಾಂಶ ದೊರಕಿಸಲು ಸಕಾಲಿಕ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ರೋಗಿಯನ್ನು ನಿರಂತರವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ನಿಗಾ ವಹಿಸಲು ಆಸ್ಪತ್ರೆ ಸಿಬ್ಬಂದಿಗೆ ಅನುವು ಮಾಡಿಕೊಡುವ ಸೆಂಟ್ರಲ್ ಆಂಡ್ ರಿಮೋಟ್ ಮಾರಿಟರಿಂಗ್ ಸಾಮರ್ಥ್ಯವನ್ನು ಹೊಂದಿದೆ. ಪ್ರತಿ ಭಾರತೀಯರಿಗೂ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ಉದ್ದೇಶ ಹೊಂದಿರುವ ಜಯದೇವ್ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಪ್ರಯಾಣದಲ್ಲಿ ಪ್ರಮುಖ ಮಾಹಿತಿ ಮತ್ತು ಕಾರ್ಯಾಚರಣೆ ಪ್ರಕ್ರಿಯೆಗಳನ್ನು ಸ್ವಯಂಚಾಲಿತಗೊಳಿಸುವುದು ಮತ್ತು ಡಿಜಿಟಲೀಕರಣಗೊಳಿಸುವುದು ಬಹಳ ಮಹತ್ವದ್ದಾಗಿದೆ.

ಜಯದೇವ್ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ರಾಷ್ಟ್ರೋತ್ಥಾನ ಪರಿಷತ್ತಿನ ಒಂದು ಭಾಗವಾಗಿದ್ದು, ಸಮಾಜದ ಎಲ್ಲಾ ಸ್ತರದ ಜನರಿಗೆ ಕೈಗೆಟುಕುವ ಬೆಲೆಯಲ್ಲಿ, ಉತ್ತಮ-ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ಉದ್ದೇಶದಿಂದ ಸ್ಥಾಪಿಸಲಾಗಿದೆ. ಆಸ್ಪತ್ರೆಯು 19 ಸಾಮಾನ್ಯ ವಾರ್ಡ್‌ಗಳು, 72 ಅರೆ-ಖಾಸಗಿ ವಾರ್ಡ್‌ಗಳು, 11 ತುರ್ತು ಚಿಕಿತ್ಸಾ ವಿಭಾಗಗಳು ಮತ್ತು 17 ಖಾಸಗಿ ವಾರ್ಡ್‌ಗಳನ್ನು ಹೊಂದಿದೆ. ಒಟ್ಟು 162 ಹಾಸಿಗೆಗಳನ್ನು ಹೊಂದಿದ್ದು, ಅತ್ಯಾಧುನಿಕ ಮೂಲಸೌಕರ್ಯವನ್ನು ಹೊಂದಿದೆ.
ಹೃದಯ ಬಡಿತ, ಉಸಿರಾಟ ಸ್ಥಿತಿ, ರಕ್ತದೊತ್ತಡ, ಎಸ್‌ಪಿಓ2 ಮಟ್ಟಗಳು, ಟೆಂಪರೇಚರ್ ಮತ್ತು ಇಸಿಜಿಯಂತಹ ರೋಗಿಗಳ ಪ್ರಮುಖ ಆರೋಗ್ಯ ಅಂಶಗಳನ್ನು ದೂರದಿಂದಲೇ ನಿಗಾ ವಹಿಸುವ ಸೌಲಭ್ಯವನ್ನು ಡೋಝಿ ಆರೋಗ್ಯ ಕಾರ್ಯಕರ್ತರಿಗೆ ಒದಗಿಸುತ್ತದೆ. ಡೋಝಿಯ ಅರ್ಲಿ ವಾರ್ನಿಂಗ್ ಸಿಸ್ಟಮ್ 'ಮೇಡ್-ಇನ್-ಇಂಡಿಯಾ' ತಂತ್ರಜ್ಞಾನವಾದ ಡೋಝಿ, ಐಸಿಯು ಹೊರಗಿನ ಎಲ್ಲಾ ರೋಗಿಗಳ ನಿಗಾ ವಹಿಸಲು ಅನುವು ಮಾಡಿಕೊಡುತ್ತದೆ ಮತ್ತು ರೋಗಿಗಳಿಗೆ ಹೆಚ್ಚಿನ ಸುರಕ್ಷತೆ ಒದಗಿಸಲು ಸಂಭವನೀಯ ಆರೋಗ್ಯ ಕ್ಷೀಣಿಸುವಿಕೆಯನ್ನು ಮೊದಲೇ ಗುರುತಿಸಲು ಸಹಾಯ ಮಾಡುತ್ತದೆ. 

Post a Comment

0Comments

Post a Comment (0)