ಏಪ್ರಿಲ್ 19 ರಿಂದ 21 ರವರೆಗೆ ಆರ್.ಟಿ.ಐ. ಆನ್‍ಲೈನ್ ತಂತ್ರಾಂಶ ಕಾರ್ಯ ಸ್ಥಗಿತ

varthajala
0

 ಬೆಂಗಳೂರು, ಏಪ್ರಿಲ್ 18 (ಕರ್ನಾಟಕ ವಾರ್ತೆ):  ಆರ್.ಟಿ.ಐ ಆನ್‍ಲೈನ್ ತಂತ್ರಾಂಶವನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‍ಐಸಿ) ಸಂಸ್ಥೆಯವರು ಅಭಿವೃದ್ಧಿಪಡಿಸಿ ನಿರ್ವಹಿಸುತಿದ್ದು, ಸದರಿ ತಂತ್ರಾಂಶವು ಕರ್ನಾಟಕ ಸರ್ಕಾರಕ್ಕೆ ಸಂಬಂಧಿಸಿರುವುದರಿಂದ, ಎನ್‍ಐಸಿ ದತ್ತಾಂಶ ಕೇಂದ್ರದಿಂದ (ಎನ್‍ಐಸಿ ಡಿಸಿ) ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರಕ್ಕೆ ವರ್ಗಾಯಿಸಲು ಎನ್‍ಐಸಿ ಯು ಪ್ರಸ್ತಾಪಿಸಿದ್ದು, ತಂತ್ರಾಂಶವನ್ನು ವರ್ಗಾಯಿಸಲು 3 ದಿನಗಳ ಕಾಲಾವಕಾಶ ಬೇಕಾಗಿದೆ ಎಂದು ತಿಳಿಸಿರುತ್ತಾರೆ. ಈ ಹಿನ್ನಲೆಯಲ್ಲಿ ಏಪ್ರಿಲ್ 19 ರಿಂದ ಏಪ್ರಿಲ್ 21, 2024 ರವರೆಗೆ ತಂತ್ರಾಂಶವನ್ನು ವರ್ಗಾಯಿಸುವ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತಿದ್ದು, ಈ ನಿಗದಿತ ಸಮಯದಲ್ಲಿ ಆರ್.ಟಿ.ಐ. ಆನ್‍ಲೈನ್ ತಂತ್ರಾಂಶವು ಕಾರ್ಯನಿರ್ವಹಿಸಲು ಲಭ್ಯವಿರುವುದಿಲ್ಲ. ಆದ್ದರಿಂದ, ಯಾವುದೇ ಬಾಕಿ ಇರುವ ಆರ್.ಟಿ.ಐ. ಆನ್‍ಲೈನ್ ಅರ್ಜಿಗಳು ಮತ್ತು ಪ್ರಥಮ ಮೇಲ್ಮನವಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಅಧಿಕೃತ ಪ್ರಕಟಣೆ ತಿಳಿಸಿದೆ. 

                   

Tags

Post a Comment

0Comments

Post a Comment (0)