ಡಾ.ಬಿ.ಆರ್ ಅಂಬೇಡ್ಕರ್ ಅವರ 133 ನೇ ಜಯಂತೋತ್ಸವ

varthajala
0

ವಾರ್ತಾಜಾಲ, ಶಿಡ್ಲಘಟ್ಟ

ಡಾ. ಬಿ ಆರ್ ಅಂಬೇಡ್ಕರ್ ಅವರ ಜೀವನ ಚರಿತ್ರೆ ಪುಸ್ತಕವನ್ನು ನಿಮ್ಮ ಮಕ್ಕಳಿಗೆ ಓದುವಂತೆ ತಿಳಿಸಿದಾಗ ಅವರ ಜೀವನದ ಸಾರಾಂಶ ಮಕ್ಕಳಿಗೆ ಅರಿವಾಗುತ್ತದೆ ಎಂದು ತಹಶೀಲ್ದಾರ್ ಬಿ.ಎನ್ ಸ್ವಾಮಿ ತಿಳಿಸಿದರು.

ನಗರದ ತಾಲೂಕು ಪಂಚಾಯಿತಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆಯಿಂದ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರ 133 ನೇ ಜಯಂತೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಡಾ. ಬಿಆರ್ ಅಂಬೇಡ್ಕರ್ ಅವರ ಜಯಂತಿಯನ್ನು ಕೇವಲ ಆಚರಣೆಗಾಗಿ ಮಾತ್ರ ಆಚರಿಸಬಾರದು. ಯಾಕೆ ಅವರ ಜಯಂತಿಯನ್ನು ಆಚರಿಸುತ್ತಾರೆ, ಈ ದೇಶಕ್ಕೆ ಅವರ ಕೊಡುಗೆ ಏನು? ಯಾಕ್ ಅವರು ಮಹಾನ್ ವ್ಯಕ್ತಿ ಆದರೂ, ಸಂವಿಧಾನ ಶಿಲ್ಪಿ ಅಷ್ಟೇನಾ ಇದು ಅವರ ಬಗ್ಗೆ ಹೇಳುತ್ತಾ ಹೋದರೆ ಸಾಕಷ್ಟಿವೆ ಇವುಗಳ ಬಗ್ಗೆ ಇಂದಿನ ಮಕ್ಕಳಿಗೆ ನಮ್ಮ ಪೋಷಕರು ಹಾಗೂ ಹಿರಿಯರು ಅವರ ಬಗ್ಗೆ ತಿಳಿಸಿದಾಗ ಮಾತ್ರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮಕ್ಕೆ ಸಾರ್ಥಕವಾಗುತ್ತದೆ.

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಯಾವುದೇ ಒಂದು ಜಾತಿ, ಸಮುದಾಯಕ್ಕೆ ಸೀಮಿತರಲ್ಲ, ಅವರು ದೇಶಕ್ಕೆ ಸಂವಿಧಾನವನ್ನು ನೀಡಿದ ಸಮಿತಿಯ ಅಧ್ಯಕ್ಷರಾಗಿ, ಸಮಾಜಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಜ್ಞರಾಗಿ, ಇತಿಹಾಸಕಾರರಾಗಿ ಹೀಗೆ ಅವರಿಗೆ ತಿಳಿಯದ ಕ್ಷೇತ್ರವಿರಲಿಲ್ಲ ಎಂದು ನುಡಿದರು. ಹಿಂದುಳಿದವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರುವ ಎಲ್ಲರ ಜೊತೆಗೆ ಕರೆದೊಯ್ಯುವ ಉದ್ದೇಶ ಅವರದಾಗಿತ್ತು ಎಂದರು.


ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ ಮುನಿರಾಜು ಮಾತನಾಡಿ, ಮೂರು ವರ್ಷದ ಬುದ್ಧಿ 100 ವರ್ಷದ ವರೆಗೆ ಎಂದು ಹಿರಿಯರು ಹೇಳಿದ್ದಾರೆ. ಮಕ್ಕಳಿಗೆ ನಾವು ಬಾಲ್ಯದಲ್ಲಿ ಯಾವ ರೀತಿಯ ಗುಣಗಳನ್ನು ಕಲಿಸುತ್ತೇವೋ ಅದೇ ರೀತಿಯ ಗುಣಗಳು ಸಮಾಜದಲ್ಲಿ ವ್ಯಕ್ತಿಯನ್ನು ಗುರುತಿಸುತ್ತವೆ, ಮಕ್ಕಳಿಗೆ ಪ್ರಪಂಚಕ್ಕೆ ಆದರ್ಶವಾಗಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ ಪ್ರೇರೇಪಿಸಬೇಕು. ಮಕ್ಕಳನ್ನು ನೀನು ಏನಾಗಬೇಕು ಎಂದು ಕೇಳಿದಾಗ ಡಾಕ್ಟರ್, ಇಂಜಿನಿಯರ್, ಮೇಷ್ಟ್ರು, ಲಾಯರ್ ಇತರೆ ಹೇಳುತ್ತಾರೆ. ಅದರ ಬದಲಿಗೆ 32 ಪದವಿಗಳನ್ನು ಪಡೆದಿರುವ ಅಂಬೇಡ್ಕರ್ ಅಂತಾಗು ಎಂದು ಅವರಿಗೆ ನಾವು ಯಾರೂ ಹೇಳುವುದಿಲ್ಲ. ಯಾಕೆ ನಾವು ಅಂಬೇಡ್ಕರ್ ಅಂತಾಗು ಎಂದು ಅವರಿಗೆ ಹೇಳಿ ಅವರು ನಡೆದು ಬಂದ ದಾರಿಯ ಜೀವನ ಚರಿತ್ರೆಯನ್ನು ಹೇಳಬಾರದು, ನಾವು ಅವರಿಗೆ ಈರೀತಿಯಾಗು ಅಂತ ಹೇಳಿ ಅಂಬೇಡ್ಕರ್ ಅವರ ಮೌಲ್ಯಗಳನ್ನಹ ತಿಳಿಸಬೇಕು. ಆಗ ಅಂಬೇಡ್ಕರ್ ಅವರು ಕಂಡ ಕನಸು ಶೇಕಡ 10ರಷ್ಟಾದರೂ ನನಸಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಗದೀಶ್,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆಎನ್ ಸುಬ್ಬಾರೆಡ್ಡಿ,ಮೇಲೂರು ಮಂಜುನಾಥ್, ಡಾ.ವೆಂಕಟೇಶ್ ಮೂರ್ತಿ, ಪೌರಾಯುಕ್ತ ಗೋಪಾಲ್ ಜಾಧವ್,ಇತರೆ ಎಲ್ಲಾ ಅಧಿಕಾರಿಗಳು ಹಾಜರಿದ್ದರು.


Post a Comment

0Comments

Post a Comment (0)