Ears to Wellness Listen Up: Essential Tips for Optimal Ear Health - ಎಚ್ಚರಿಕೆ ವಹಿಸದಿದ್ರೆ ಶ್ರವಣ ದೋಷ ಉಂಟಾದೀತು!!

varthajala
0

It's common for many individuals to overlook ear-related issues, often assuming they are 'harmless'. However, the truth is that ears require attention and care just like any other organ in the body. With World Hearing Day approaching on March 3rd, it's crucial to stress the significance of ear and hearing care. This year's theme, 'Making ear and hearing care a reality for all', underscores the importance of proactive management of ear health. Dr. Sunitha Madhavan, Senior Consultant ENT Specialist at Kinder Hospital provides valuable insights into the signs that our ears may convey when something is amiss. Early diagnosis of hearing loss is crucial as it will involve speech and language development. She stresses the importance of understanding these signs and taking appropriate action. She shares key tips on how to take care of our ears and identifies the warning signs that may indicate potential issues.

Understanding the Causes of Hearing Loss:
According to Dr. Sunitha Madhavan, hearing loss can occur due to a variety of reasons. These include congenital factors such as intrauterine infections like TORCH infection or anomalies of the ear, as well as acquired causes such as infections, injuries, systemic conditions like hypertension and diabetes, continuous use of ototoxic medication, and noise-induced hearing loss.
Crucial Prenatal screening
Dr. Sunitha Madhavan provides practical advice on ear care to prevent potential problems. Prenatal screening is crucial, emphasizing the importance of undergoing TORCH screening during pregnancy to detect any issues early on. Prompt treatment is essential if you experience ear pain after a cold or cough, as it could indicate an infection needing medical attention. Lifestyle management plays a key role, with managing conditions like high blood pressure, diabetes, and thyroid disorders helping reduce the risk of hearing loss. Dr. Sunitha Madhavan advises against harmful practices such as inserting objects into the ear canal for cleaning, as this can lead to injury or infection. These tips form a comprehensive approach to ear care, promoting preventive measures and prompt treatment to maintain ear health.
Awareness and Prevention
Vaccinations against diseases like measles, mumps, rubella, and pneumococcal infections can help prevent hearing loss. Additionally, avoiding exposure to loud noises and practicing good hygiene are important preventive measures. Dr. Sunitha Madhavan stresses the importance of prenatal screenings, genetic counseling, and newborn hearing screenings to identify any potential problems early on. Timely treatment for ear infections and other conditions is essential to prevent complications and preserve hearing.
Rehabilitation and Support:
For individuals with hearing loss, early diagnosis followed by rehabilitation and access to hearing aids can significantly improve their quality of life. Dr. Sunitha Madhavan emphasizes the importance of seeking professional help and avoiding self-medication to ensure proper management of ear-related issues. "By prioritizing ear care, adopting preventive measures, and seeking timely medical attention, individuals can protect their hearing health and overall well-being", she added.              
For more details, contact:  6364409651
ಕಿವಿಗೊಟ್ಟು ಕೇಳಿ: ಎಚ್ಚರಿಕೆ ವಹಿಸದಿದ್ರೆ ನಿಮಗೂ ‍ಶ್ರವಣ ದೋಷ ಉಂಟಾದೀತು!!
ನಾವೆಲ್ಲರೂ ಮುಖದ ಸೌಂದರ್ಯಕ್ಕೆ ಪ್ರಾಮುಖ್ಯತೆ ನೀಡುತ್ತೇವೆ ಆದ್ರೆ ಪಂಚೇಂದ್ರಿಯಗಳಲ್ಲೊಂದಾದ ಕಿವಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಎಷ್ಟು ಕಾಳಜಿ ವಹಿಸುತ್ತೇವೆ ? .... ಕಿವಿ ಮತ್ತು ಅದರ ಆರೋಗ್ಯ ಅದೆಷ್ಟು ಮುಖ್ಯ? ಕಿವಿ ಆರೋಗ್ಯಕ್ಕೆ ಯಾವೆಲ್ಲಾ ಕ್ರಮಗಳು ಅಗತ್ಯ ಎಂಬುದರ ಬಗ್ಗೆ ಅರಿವು ಮೂಡಿಸಲು ಪ್ರತಿ ವರ್ಷ ಮಾರ್ಚ್‌ ೩ರಂದು ವಿಶ್ವ ಶ್ರವಣ ದಿನವನ್ನು ಆಚರಿಸಲಾಗುತ್ತದೆ.  
ʼಕಿವಿ ಮತ್ತು ಶ್ರವಣದ ಆರೈಕೆ ಎಲ್ಲರಿಗೂ ಮುಖ್ಯʼ ಎಂಬುದು ಈ ವರ್ಷದ ಧ್ಯೇಯ ವಾಕ್ಯವಾಗಿದೆ. ಈ ದಿನದಂದು ಕಿವಿ ಆರೋಗ್ಯ ಜೊತೆಗೆ ಶ್ರವಣ ದೋಷ ಕುರಿತಾಗಿ ಬೆಂಗಳೂರಿನ ಕಿಂಡರ್‌ ಆಸ್ಪತ್ರೆಯ ಇಎನ್‌ಟಿ ತಜ್ಞರಾದ ಡಾ.ಸುನಿತಾ ಮಾಧವನ್‌ ವಿವರಿಸಿದ್ದಾರೆ.
ಅನೇಕರಲ್ಲಿ ಶ್ರವಣ ದೋಷ ಸಮಸ್ಯೆಯನ್ನು ಕಾಣುತ್ತಿದ್ದೇವೆ. ಈ ಸಮಸ್ಯೆಯನ್ನು  ಆರಂಭಿಕ ಹಂತದಲ್ಲಿ ಗುರುತಿಸುವುದು ಅಗತ್ಯ, ಏಕೆಂದರೆ ಇದು ಮಾತು ಮತ್ತು ಭಾಷೆ  ಬೆಳವಣಿಗೆಯನ್ನು ಅವಲಂಬಿಸಿರುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಕಿವಿ ಆರೋಗ್ಯದ ಬಗ್ಗೆ ಹೇಗೆ ಕಾಳಜಿ ತೆಗೆದುಕೊಳ್ಳಬೇಕು ಜೊತೆಗೆ ಸಮಸ್ಯೆಗಳು ಕಂಡುಬಂದಾಗ ಯಾವ ರೀತಿ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬ ಮಾಹಿತಿಯನ್ನು ತಜ್ಞರು ಹಂಚಿಕೊಂಡಿದ್ದಾರೆ.
ಶ್ರವಣದೋಷಕ್ಕೆ ಕಾರಣಗಳೇನು ?
ವಿವಿಧ ಕಾರಣಗಳಿಂದ ಶ್ರವಣ ದೋಷ ಕಾಣಿಸಿಕೊಳ್ಳುತ್ತದೆ. ಅವುಗಳಲ್ಲಿ ಕೆಲವು ಘಟನೆಗಳು ಜೆನೆಟಿಕ್ಸ್‌ನಿಂದ, ಕೆಲವು ಸಂದರ್ಭಗಳಲ್ಲಿ  ಸೋಂಕು, ಗಾಯ, ಅಧಿಕ ರಕ್ತದೊತ್ತಡ, ಮಧುಮೇಹದಂತಹ ಸಮಸ್ಯೆಗಳು, ಒಟೊಟಾಕ್ಸಿಕ್‌ಔಷಧಿಗಳ ನಿರಂತರ ಬಳಕೆ  ಮತ್ತು ಭಾರೀ ಪ್ರಮಾಣದ ಶಬ್ದವನ್ನು ಆಲಿಸುವುದರಿಂದಲೂ ಶ್ರವಣ ದೋಷ ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ವೈದ್ಯೆ ಸುನಿತಾ.  


ಸ್ಕ್ರೀನಿಂಗ್‌ಮಾಡುವುದು ಅಗತ್ಯ

ಮಹಿಳೆಗೆ ಪ್ರಸವಪೂರ್ವದಲ್ಲಿ ವಿವಿಧ ರೀತಿಯ ರಕ್ತ ಪರೀಕ್ಷೆಗಳನ್ನು  ಮಾಡಿಸುವುದು ಅಗತ್ಯ. ಈ ಮೂಲಕ ಆರಂಭಿಕ ಹಂತದಲ್ಲೇ ಸಮಸ್ಯೆ ಕಂಡುಬಂದಲ್ಲಿ ಸಾಧ್ಯವಾದರೆ ಅದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬಹುದು ಎಂಬುದು ವೈದ್ಯರ ಸಲಹೆ.

ಕಿವಿ ಆರೋಗ್ಯದ ಬಗ್ಗೆ ಕಾಳಜಿ ಹೇಗೆ ?

ಶೀತ, ಕೆಮ್ಮಿನಿಂದ ಕಿವಿ ನೋವು ಕಂಡುಬಂದಲ್ಲಿ ಅದನ್ನು ನಿರ್ಲಕ್ಷಿಸದೆ ಚಿಕಿತ್ಸೆ ಪಡೆಯಬೇಕು.

ಜೀವನಶೈಲಿ ನಿರ್ವಹಣೆ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಥೈರಾಯ್ಡ್‌ಸಮಸ್ಯೆಗಳನ್ನು ನಿಯಂತ್ರಿಸುವ ಮೂಲಕವು ಶ್ರವಣ ದೋಷ ಉಂಟಾಗುವುದನ್ನು ನಿಯಂತ್ರಿಸಲು ಸಹಾಯವಾಗುತ್ತದೆ.

ಕಿವಿ ಸ್ವಚ್ಛತೆಗಾಗಿ ಕಿವಿಯಲ್ಲಿ ಪಿನ್‌, ಬಡ್ಸ್‌ಮತ್ತು ಇತರೆ ವಸ್ತುಗಳನ್ನು ಹಾಕುವುದು ಸರಿಯಲ್ಲ. ಇದರಿಂದಾಗಿಯೂ ಕಿವಿಯಲ್ಲಿ ಸೋಂಕು ಅಥವಾ ಕಿವಿಯೊಳಗಿನ ಪದರಕ್ಕೆ ಹಾನಿಯುಂಟಾಗುವ ಸಾಧ್ಯತೆ ಇರುತ್ತದೆ.
 
ಕಿವಿಗೆ ಸಂಬಂಧಿಸಿದ ಸಮಸ್ಯೆಗಳು ಕಂಡುಬಂದಲ್ಲಿ ಮನೆಮದ್ದುಗಳ ಮೊರೆ ಹೋಗುವುದಲ್ಲ ಸರಿಯಲ್ಲ. ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಒಳಿತು.

ಭಾರೀ ಪ್ರಮಾಣದ ಶಬ್ಧ ಆಲಿಸುವುದು, ಹೆಡ್‌ಫೋನ್‌ಬಳಸುವುದನ್ನು ತಪ್ಪಿಸುವ ಮೂಲಕವೂ ಶ್ರವಣ ದೋಷ ಉಂಟಾಗುವುದನ್ನು ತಡೆಗಟ್ಟಬಹುದು.
ಶ್ರವಣ ದೋಷ ತಡೆಗಟ್ಟುವುದು ಹೇಗೆ?
ದಡಾರ, ಮಂಪ್ಸ್, ರುಬೆಲ್ಲಾ ಮತ್ತು ನ್ಯುಮೋಕೊಕಲ್  ರೋಗಗಳ ವಿರುದ್ಧ  ಲಸಿಕೆಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಏಕೆಂದರೆ ಈ ಸೋಂಕಿನ ಸಮಸ್ಯೆಗಳು ಕೂಡ ಶ್ರವಣ ದೋಷಕ್ಕೆ ಕಾರಣವಾಗಬಹುದು. ಅವಗಳನ್ನು ತಡೆಗಟ್ಟಲು ಲಸಿಕೆ ಮುಖ್ಯ ಪಾತ್ರವಹಿಸುತ್ತದೆ.
ನವಜಾತ ಶಿಶುಗಳ ಕಿವಿ ಪರಿಶೀಲನೆ ಅತ್ಯಗತ್ಯ. ಏಕೆಂದರೆ ಕುಟುಂಬದಲ್ಲಿ ಯಾರಿಗಾದರೂ ಶ್ರವಣದೋಷ ಸಮಸ್ಯೆ ಇದ್ದಲ್ಲಿ ಅದು ವಂಶಿಕವಾಗಿ ಕಂಡುಬರುವ ಸಾಧ್ಯತೆ ಇರುತ್ತದೆ.
ಈ ಸಮಸ್ಯೆಗೆ ಪರಿಹಾರವೇನು ?
ಶ್ರವಣ ದೋಷ ಹೊಂದಿರುವವರಿಗೆ ವೈದ್ಯರ ಮೂಲಕ ಪರಿಶೀಲನೆ ನಡೆಸಿ  ಶ್ರವಣ ಸಾಧನಗಳನ್ನು ನೀಡುವ ಮೂಲಕ ಅವರ ಸಮಸ್ಯೆಗೆ ಪರಿಹಾರವನ್ನು ಒದಗಿಸಬಹುದು ಎಂಬ ಸಲಹೆ ನೀಡುತ್ತಾರೆ ಕಿಂಡರ್‌ಆಸ್ಪತ್ರೆಯ ವೈದ್ಯೆ ಸುನಿತಾ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಮೀಡಿಯಾ ಕನೆಕ್ಟ್‌, 6364409651

Post a Comment

0Comments

Post a Comment (0)