*ಸುದಯಾ ಫೌಂಡೇಷನ್‍ನಿಂದ ಧೂಮಪಾನ ತ್ಯಜಿಸುವಂತೆ ಜಾಗೃತಿ*

varthajala
0

BENGALURU : ಸುದಯ ಫೌಂಡೇಷನ್ ಧೂಮಪಾನ ರಹಿತ ದಿನದ ಅಂಗವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಬಸವೇಶ್ವರನಗರ ಹಾಗೂ ಮಹಾಲಕ್ಷ್ಮೀಪುರಂ ಬಡಾವಣೆಯ ವಿವಿಧ ಕಡೆಗಿನ ಸಿಗರೇಟ್ ಮಾರಾಟ ಮಾಡುವ ಅಂಗಡಿಗಳ ಬಳಿ ಹಾಗೂ ಟ್ರಾಫಿಕ್ ಸಿಗ್ನಲ್‍ಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡಲಾಯಿತು. 

ಯಮನ ವೇಷಧಾರಿಯು ಸಾರ್ವಜನಿಕರ ಬಳಿ ತೆರಳಿ ಸಿಗರೇಟ್ ಸೇವನೆಯಿಂದ ಉಂಟಾಗಬಹುದಾದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿ ಅವರ ಹೂವು ನೀಡುವ ಮೂಲಕ ಧೂಮಪಾನ ತ್ಯಜಿಸುವಂತೆ ತಿಳಿ ಹೇಳಲಾಯಿತು. 






ಜೊತೆಗೆ ಈ ಸಂದರ್ಭದಲ್ಲಿ ಪ್ಲಕಾರ್ಡ್‍ಗಳನ್ನು ಪ್ರದರ್ಶಿಸಿ ಹೇಗೆಲ್ಲಾ ಸಿಗರೇಟ್ ಮನುಷ್ಯನನ್ನ ಸಾವಿನೆಡೆಗೆ ಕೊಂಡೊಯ್ಯುತ್ತದೆ ಎಂಬುದನ್ನ ಸಾರಲಾಯಿತು. ಈ ಸಂದರ್ಭದಲ್ಲಿ ಸುದಯಾ ಫೌಂಡೇಷನ್ ಸಂಸ್ಥಾಪಕಿ ದಿವ್ಯಾ ರಂಗೇನಹಳ್ಳಿ ಹಾಗೂ ಸಿಬ್ಬಂದಿಗಳಿಂದ ಧೂಮಪಾನಿಗಳು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು.


Post a Comment

0Comments

Post a Comment (0)