ಬೆಂಗಳೂರು, ಮಾರ್ಚ್ 26, (ಕರ್ನಾಟಕ ವಾರ್ತೆ): ಬೆಂಗಳೂರು ನಗರ ವಿಶ್ವವಿದ್ಯಾನಿಲಯವು 2023-24ನೇ ಶೈಕ್ಷಣಿಕ ವರ್ಷಕ್ಕೆಜಾಗತಿಕ ಭಾಷಾ ವಿಭಾಗದಲ್ಲಿ ವಿದೇಶಿ ಭಾಷೆ ಇಟಾಲಿಯನ್ 40 ಘಂಟೆಗಳ ಸಂಭಾಷಣೆ ಕೋರ್ಸ್‍ಗಳಿಗೆ ಪ್ರವೇಶ ಪ್ರಕ್ರಿಯೆಗಾಗಿ ಅರ್ಹ ಅಭ್ಯರ್ಥಿಗಳಿಂದ ಆಪ್‍ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಆಫ್‍ಲೈನ್ ಮೂಲಕ ದಂಡ ಶುಲ್ಕವಿಲ್ಲದೆ ಅರ್ಜಿಗಳನ್ನು ಸಲ್ಲಿಸಲು ಮಾರ್ಚ್ 31 ಹಾಗೂ ರೂ.200/- ದಂಡ ಶುಲ್ಕದೊಂದಿಗೆ ಏಪ್ರಿಲ್ 7 ಕೊನೆಯ ದಿನವಾಗಿದೆ. ಏಪ್ರಿಲ್ 8 ರಿಂದ ತರಗತಿಗಳು ಪ್ರಾರಂಭವಾಗಲಿವೆ. ಆಸಕ್ತರು 10ನೇ ತರಗತಿ/ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು. 16 ವರ್ಷ ಮತ್ತು ಮೇಲ್ಪಟ್ಟವರಾಗರಬೇಕು. ಕೋರ್ಸ್ ಶುಲ್ಕ ಮತ್ತು ಪ್ರಮಾಣ ಪತ್ರ: ರೂ.6,000/- (ರೂ.ಆರು ಸಾವಿರ ಮಾತ್ರ) ಪಾವತಿಯನ್ನು ದಿ ಫೈನಾನ್ಸ್ ಆಫೀಸರ್, ಬೆಂಗಳೂರು ನಗರ ವಿಶ್ವವಿದ್ಯಾನಿಲಯ, ಬೆಂಗಳೂರು ಪರವಾಗಿ ಡಿ.ಡಿ ಮೂಲಕ ಪಾವತಿಸಬೇಕು.
ಆಸಕ್ತ ವಿದ್ಯಾರ್ಥಿಗಳು ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಜಾಗತಿಕ ಭಾಷಾ ವಿಭಾಗದಲ್ಲಿ ಲಭ್ಯವಿರುವ ಅರ್ಜಿ ನಮೂನೆಗಳನ್ನು ಭರ್ತಿ ಮಾಡಬಹುದು. ಹೆಚ್ಚಿನ ಮಹಿತಿಗಾಗಿ ದೂರವಾಣಿ ಸಂಖ್ಯೆ 080-29572019 ನ್ನು ಸಂಪರ್ಕಿಸಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.