ನಗರದ ಮಲ್ಲೇಶ್ವರಂನಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವರ ಬ್ರಹ್ಮೋತ್ಸವವು ಪ್ರತಿ ವರ್ಷದಂತೆ ಈ ಬಾರಿಯೂ ಮಾಘ ಮಾಸದ ಬಹುಳ ಸಪ್ತಮಿಯ ಪ್ರಯುಕ್ತ ಶನಿವಾರದಂದು ನಡೆಯಿತು. ಈ ಬಾರಿ ಇದು 35 ನೇ ವರ್ಷದ ಬ್ರಹ್ಮೋತ್ಸವದ ಆಚರಣೆಯಾಗಿದ್ದು, ದೇವಾಲಯದ ಮುಂಭಾಗದಿಂದ ಹೊರಟ ದೇವರ ತೇರು 8 ನೇ ಕ್ರಾಸ್ನಲ್ಲಿ ತಿರುವು ಪಡೆದು, ಸಂಪಿಗೆ ಮುಖ್ಯ ರಸ್ತೆಯಲ್ಲಿ ಸಾಗಿ ಮುಂದೆ 16 ನೇ ಕ್ರಾಸ್ ತಲುಪಿ ನಂತರ ದೇವಾಲಯಕ್ಕೆ ಹಿಂತಿರುಗಿ ತಲುಪಿತು. ಈ ಸಂದರ್ಭದಲ್ಲಿ ದಾರಿಯುದ್ಧಕ್ಕೂ ಭಕ್ತಾಧಿಗಳು ದೇವರಿಗೆ ಹಣ್ಣು ಕಾಯಿ ಸಮರ್ಪಣೆ ಮಾಡಿ ಆರತಿಗಳನ್ನು ಬೆಳಗಿದರು.
ಬ್ರಹ್ಮೋತ್ಸವದಲ್ಲಿ ಪಾಲ್ಗೊಳ್ಳಲು ದೂರ ದೂರದ ಪ್ರದೇಶಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.